ರಾಶಿ ಫಲ; ಈ ರಾಶಿಯವರಿಗಿಂದು ನಿರೀಕ್ಷೆಗೂ ಮೀರಿದ ಧನಾಗಮ
Team Udayavani, Oct 7, 2022, 7:09 AM IST
ಮೇಷ: ಗುರುಹಿರಿಯರ ಆಶೀರ್ವಾದ ಸಹಕಾರ. ನಿರೀಕ್ಷಿತ ಸ್ಥಾನಮಾನ ಗೌರವ ಪ್ರಾಪ್ತಿ. ದೀರ್ಘ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳಿಂದ ಪ್ರೋತ್ಸಾಹ. ದಾಂಪತ್ಯ ತೃಪ್ತಿಕರ.
ವೃಷಭ: ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಜನಮನ್ನಣೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಧನ ಲಾಭ. ದಾಂಪತ್ಯ ತೃಪ್ತಿಕರ. ಗುರುಹಿರಿಯರಿಂದ ಉತ್ತಮ ಸಂತೋಷ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.
ಮಿಥುನ: ದೀರ್ಘ ಪ್ರಯಾಣ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದಾಂಪತ್ಯ ಸುಖ ವೃದ್ಧಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ. ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು. ಮಿತ್ರರಿಂದ ಸಾಮಾನ್ಯ ಪ್ರೋತ್ಸಾಹ.
ಕರ್ಕ: ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಒತ್ತಡ ಎದುರಾದೀತು. ಆಸ್ತಿ ವಿಚಾರದಲ್ಲಿ ಅಡೆತಡೆಗಳು ಕಂಡು ಬಂದಾವು. ದಾಂಪತ್ಯ ಸುಖ ಮಧ್ಯಮ. ಗುರುಹಿರಿಯರ ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು.
ಸಿಂಹ: ದೂರ ಸಂಚಾರ ಸಂಭವ. ಪರಿಸ್ಥಿತಿಗೆ ಸರಿಯಾಗಿ ಕಾರ್ಯ ವೈಖರಿ ಕೆಲವೊಮ್ಮೆ ನಡೆದೀತು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟನೆ ಇರಲಿ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿಕರ. ಅತಿಯಾದ ಕಾರ್ಯ ಒತ್ತಡ ದೇಹಾಯಾಸ ತೋರೀತು. ದೀರ್ಘ ಪ್ರಯಾಣ ಸಂಭವ.
ಕನ್ಯಾ: ಆರೋಗ್ಯ ಗಮನಿಸಿ. ಅನಾವಶ್ಯಕ ಸ್ಪರ್ಧೆಗೆ ಆಸ್ಪದ ನೀಡದಿರಿ. ಬಂಧುಮಿತ್ರರಲ್ಲಿ ಸಂಯಮದ ನಡೆ ಅಗತ್ಯ. ದಾಂಪತ್ಯ ಸುಖ ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿದ ಅವಕಾಶ. ನಿರೀಕ್ಷೆಗೂ ಮೀರಿದ ಧನಾಗಮ.
ತುಲಾ: ಆಸ್ತಿ ವಿಚಾರದಲ್ಲಿ ತಲ್ಲೀನತೆ ಹಾಗೂ ನಿರೀಕ್ಷಿತ ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ. ಬಂಧುಮಿತ್ರರ ಮಾತೃ ಸಮಾನರಿಂದ ಸಹಕಾರ ಪ್ರೋತ್ಸಾಹ ಲಭ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿದಾಯಕ ಬದಲಾವಣೆ. ಸರಕಾರಿ ಕಾರ್ಯಗಳಲ್ಲಿ ಮುನ್ನಡೆ.
ವೃಶ್ಚಿಕ: ಆರೋಗ್ಯ ಗಮನಿಸಿ. ಹೆಚ್ಚಿದ ದೇಹಾಯಾಸ. ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಂತೆ ಗಮನಿಸಿ. ಅತಿ ಉದಾರತೆಯಿಂದ ಕಿರಿಕಿರಿ ಆದೀತು. ಆಸ್ತಿ ವಿಚಾರದಲ್ಲಿ ಹೆಚ್ಚಿದ ಪರಿಶ್ರಮ.
ಧನು: ಅತಿಯಾದ ಆತ್ಮವಿಶ್ವಾಸದಿಂದ ಆರೋಗ್ಯದಲ್ಲಿ ಗಮನಹರಿಸದಿರುವುದರಿಂದ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಪಾರದರ್ಶಕತೆಯಿಂದ ಕಾರೊÂàನ್ಮುಖರಾಗಿ ನಿಷ್ಠುರ ಆಗದಂತೆ ಎಚ್ಚರ ವಹಿಸಿ.
ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನವ್ಯಯ. ಆರೋಗ್ಯ ವಿಚಾರ ದಲ್ಲಿ ನಿಗಾವಹಿಸಿ.
ಕುಂಭ: ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ವಾಕ್ ಚತುರತೆ ಪ್ರದರ್ಶನ. ಗುರುಹಿರಿಯರ ಆರೋಗ್ಯ ಮಧ್ಯಮ. ಸಾಂಸಾರಿಕ ಸುಖಕ್ಕೆ ಹೆಚ್ಚು ಪರಿಶ್ರಮ ಸಂಭವ.
ಮೀನ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣದಿಂದ ಲಾಭ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಸರಿಯಾಗಿ ಅಭಿವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ ವ್ಯವಹರಿಸುವುದರಿಂದ ಸಫಲತೆ. ಸಾಂಸಾರಿಕ ಸುಖ ಮಧ್ಯಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.