‘ಶಭಾಷ್ ಬಡ್ಡಿ ಮಗ್ನೆ’ ಎಂದ ಪ್ರಮೋದ್ ಶೆಟ್ಟಿ : ಹೀರೋ ಆಗಿ ಮತ್ತೊಂದು ಚಿತ್ರ
Team Udayavani, Oct 7, 2022, 2:38 PM IST
ನಾಯಕ ನಟರಾಗಿ ಬಡ್ತಿ ಪಡೆದಿರುವ ಪ್ರಮೋದ್ ಶೆಟ್ಟಿ ಈಗ ಹೀರೋ ಆಗಿ ಮತ್ತೂಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು “ಶಭಾಷ್ ಬಡ್ಡಿಮಗ್ನೆ’. ಈ ಸಿನಿಮಾದ ಮಹೂರ್ತ ಇತ್ತೀಚೆಗೆ ನಡೆದಿದೆ.
ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಹರೀಶ್.ಸಾ.ರಾ ನಿರ್ದೇಶಕರಾಗಿ ಬಡ್ತಿಗೊಂಡು ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ ಬರೆದಿರುವ ಬಿ.ಎಸ್.ರಾಜಶೇಖರ್ ಸಿನಿಮಾಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರರಂಗದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿರುವ ಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ. “ಶಭಾಷ್ ಬಡ್ಡಿಮಗ್ನೆ’ ಶಿರ್ಷಿಕೆಗೆ “ಅಂತ.. ಬಾಯ್ತುಂಬಾ ಹೊಗ್ಳೋದಾ? ಎಲ್ಲಾ ತೆಗ್ಳೋದಾ??’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ.
1980ರ ಕಾಲಘಟ್ಟದಲ್ಲಿ ಚಿಕ್ಕಮಗಳೂರು ಜಿಲ್ಲಾ ಮೂಡಿಗೆರೆದಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ಚಿತ್ರಕಥೆ ಬರೆಯಲಾಗಿದೆ. ಅದಕ್ಕಾಗಿ ಆ ಭಾಗದಲ್ಲೇ 45 ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಕಾಮಿಡಿ, ಮರ್ಡರ್ ಮಿಸ್ಟ್ರಿ, ಥ್ರಿಲ್ಲರ್ ಇರುವುದರಿಂದ ಚಿತ್ರದ ಸಾರಾಂಶವನ್ನು ಬಿಟ್ಟುಕೊಟ್ಟಿಲ್ಲ ಚಿತ್ರತಂಡ.
ಇದನ್ನೂ ಓದಿ:ಬಿಸಿಸಿಐನಲ್ಲಿ ಮುಗಿಯಿತಾ ಗಂಗೂಲಿ ಅಧಿಕಾರ? ಬಿಜೆಪಿ ನಾಯಕನ ಮನೆಯಲ್ಲಿ ಸಭೆ ನಡೆದಿದ್ಯಾಕೆ?
ತರಲೆ ಮಾಡುವ ಪೊಲೀಸ್ ಆಫೀಸರ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ನಾಯಕಿಯಾಗಿ ಅವರ ಪತ್ನಿ ಪಾತ್ರದಲ್ಲಿ ಪ್ರಿಯಾ ಅಭಿನಯಿಸುತ್ತಿದ್ದಾರೆ. ಇವರೊಂದಿಗೆ ರಂಗಾಯಣ ರಘು, ರಾಹುಲ್, ರವಿತೇಜ, ಲಕ್ಷ್ಮೀ ಪ್ರಿಯಸಾಹು, ಮನು, ಅಜೇಯ್, ಮಿತ್ರ, ರೂಪ, ಸುಧಾಮಣಿ, ಇಂದಿರಮ್ಮ, ಮಮತಾ ರಾಜಶೇಖರ್ ತಾರಾ ಬಳಗದಲ್ಲಿದ್ದಾರೆ. ಇಳಯರಾಜ ಶಿಷ್ಯ ಕಾರ್ತಿಕ್ ಭೂಪತಿ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಅಣಜಿ ನಾಗರಾಜ್ ಛಾಯಾಗ್ರಹಣ, ಪ್ರವೀಣ್ ಬೇಲೂರು ಸಂಕಲನ ಚಿತ್ರಕ್ಕಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Lacchi Kannada Movie: ಲಚ್ಚಿ ಚಿತ್ರಕ್ಕೆ ಪ್ರಶಸ್ತಿ ಗರಿ
Chowkidar Movie: ಶೂಟಿಂಗ್ ಮುಗಿಸಿದ ಚೌಕಿದಾರ್
KD Movie: ಪ್ರೇಮ್ ಕೆಡಿಗೆ ಅಜಯ್ ದೇವಗನ್ ಸಾಥ್; ಶಿವನ ಹಾಡಿಗೆ ಧ್ರುವ ಭರ್ಜರಿ ಸ್ಟೆಪ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.