ಕಣ್ಮನ ಸೆಳೆದ ಅರಕಲಗೂಡು ದಸರಾ ಉತ್ಸವ

ಹೊನ್ನವಳ್ಳಿ ದಿವಾಕರ್‌ ತಂಡದ ಕೀಲು ಕುದುರೆ ಕುಣಿತ, ಮಂಗಳ ವಾದ್ಯ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

Team Udayavani, Oct 7, 2022, 6:22 PM IST

ಕಣ್ಮನ ಸೆಳೆದ ಅರಕಲಗೂಡು ದಸರಾ ಉತ್ಸವ

ಅರಕಲಗೂಡು: ಅರಕಲಗೂಡಿನ ನವರಾತ್ರಿಯ ಉತ್ಸವ ಮತ್ತು ದಸರಾ ಹಬ್ಬ ಬುಧವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು. ಬುಧವಾರ ಸಂಜೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ, ತಹಶೀಲ್ದಾರ್‌ ಶ್ರೀನಿವಾಸ್‌ ಅವರು ಗ್ರಾಮ ದೇವತೆ ದೇಗುಲ ದಲ್ಲಿ ಪೂಜೆ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ದಸರಾ ಹೊಸ ಬೆಳಕು ತರಲಿ: ಈ ವೇಳೆ ಮಾತನಾಡಿದ ಶಾಸಕ ಎ.ಟಿರಾಮಸ್ವಾಮಿ ಅವರು, 2022ರ ದಸರಾ ಆಚರಣೆ ಅತ್ಯಂತ ಅರ್ಥಪೂರ್ಣ ಹಾಗೂ ಅಭೂತಪೂರ್ವ ಬೆಂಬಲದೊಂದಿಗೆ ನೆರವೇರಿದೆ. ಇಂತಹ ವಿಜಯದಶಮಿ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗೌರವಿಸಲಾಗುತ್ತಿದೆ. ದಸರಾ ಹಬ್ಬ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಬೆಳಕನ್ನು ತರಲಿ ಎಂದು ಆಶಿಸಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಜಯದೇವ ಶ್ರೀ, ಶ್ರೀ ಗುರು ಶಿವ ಸುಜ್ಞಾನತೀರ್ಥ ಶ್ರೀ, ಶ್ರೀ ಸ್ವತಂತ್ರ ಬಸವಲಿಂಗ ಶ್ರೀ ಅವರು ಆಶೀ ರ್ವಚನ ನೀಡಿದರು.

ರಘು ಅವರಿಗೆ ಸನ್ಮಾನ: 2022ರ ದಸರಾ ಪ್ರಶಸ್ತಿಯನ್ನು ದೊಡ್ಡಹಟ್ಟಿ ಬೋರೇಗೌಡ ಚಲನ ಚಿತ್ರ ನಿರ್ದೇಶಕ ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ರಘು ಅವರಿಗೆ ನೀಡಿ ಗೌರವಿಸಲಾಯಿತು. ಪಪಂ ಅಧ್ಯಕ್ಷೆ ಶಾರದ ಪೃಥ್ವಿ ರಾಜ್‌, ಮುಖ್ಯಾಧಿಕಾರಿ ನಟರಾಜ್‌ ಇತರೆ ಇಲಾಖೆ ಅಧಿಕಾರಿಗಳೂ,ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಮನ ಸೆಳೆದ ಕಲಾ ತಂಡಗಳು: ತುಮಕೂರಿನ ಮಾರುತಿ ತಂಡದ ನಾಸಿಕ್‌ ಡೋಲು, ಹಾಸನದ ಬಿಟಿ ಮಾನವ ತಂಡದ ಕೋಲಾಟ, ತುಮಕೂರಿನ ಮಂಜುನಾಥ್‌ ತಂಡದ ಚಿಟ್ಟಿಮೇಳ, ದೇವಾನಂದ ವರಪ್ರಸಾದ್‌ ತಂಡದಿಂದ ಆರ್ಕೆಸ್ಟ್ರಾ, ಮಂಡ್ಯದ ಮಧು ಮತ್ತು ತಂಡದವರ ಗಾರುಡಿಗೊಂಬೆ, ಮೈಸೂರಿನ ಮಂಜು ತಂಡದ ನಗಾರಿ ಕುಣಿತ, ಮೈಸೂರಿನ ಪ್ರದೀಪ್‌ ತಂಡದ ಡೊಳ್ಳು ಕುಣಿತ, ಮಂಡ್ಯದ ಸುಂದರೇಶ್‌ ತಂಡದಿಂದ ಪೂಜಾ ಕುಣಿತ, ಉದ್ದೂರು ರವಿ ತಂಡದ ವೀರಭದ್ರ ಕುಣಿತ, ಮಂಡ್ಯದ ನಂದನ್‌ ತಂಡದ ಪಟಾ ಕುಣಿತ ಹಾಗೂ ಹೊನ್ನವಳ್ಳಿ ದಿವಾಕರ್‌ ತಂಡದ ಕೀಲು ಕುದುರೆ ಕುಣಿತ, ಮಂಗಳ ವಾದ್ಯ
ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಬನ್ನಿ ಕಡಿದು ದಸರಾಗೆ ತೆರೆ: ದೊಡ್ಡಮ್ಮ ದೇವಸ್ಥಾನದಿಂದ ಹೊರಟ ಮೆರವಣಿಗೆ ಬನ್ನಿ ಮಂಟಪ ತಲಪುವ ವೇಳೆಗೆ ರಾತ್ರಿ 12 ಗಂಟೆ ದಾಟಿತ್ತು. ಮಧ್ಯರಾತ್ರಿ 1 ಗಂಟೆ ವೇಳೆಗೆ ತಹಶೀಲ್ದಾರ್‌ ಶ್ರೀನಿವಾಸ್‌ ಅವರು ಬನ್ನಿಯನ್ನು ಕಡಿದು ಸಂದೇಶ ನೀಡುವುದರೊಂದಿಗೆ ಈ ವರ್ಷದ ಅರಕಲಗೂಡು ದಸರಾ ಸಂಪನ್ನವಾಯಿತು. ಕ್ಷೇತ್ರದ ಶಾಸಕರಾದ ಎ ಟಿ ರಾಮಸ್ವಾಮಿ, ಮಠಾಧೀಶರುಗಳಾದ ಜಯದೇವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಸುಜ್ಞಾನಮೂರ್ತಿ ಮಹಾ ಸ್ವಾಮೀಜಿ ,ವಿವಿಧ ಸಮಾಜದ ಸಮುದಾಯದ ಗಣ್ಯರಲ್ಲದೆ ಸಹಸ್ರಾರು ಭಕ್ತಾದಿಗಳು ಉತ್ಸಾಹದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದ ಸಹ ಸ್ರಾರು ಭಕ್ತ ಮಹಾಶಯರಿಗೆ ದಸರಾ ಉತ್ಸವದ ಸಮಿತಿಯಿಂದ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು.

18 ಸಮುದಾಯದವರ ದೇವರ ಮೆರವಣಿಗೆ
ಅರಕಲಗೂಡು ಹಾಗೂ ಸುತ್ತಮುತ್ತಲಿ ಗ್ರಾಮಗಳ 18 ಸಮುದಾಯದವರ ಆರಾಧ್ಯ ದೇವರುಗಳ ಉತ್ಸವದ ಜೊತೆಗೆ ವಚನಕಾರರಾದ ಜಗಜ್ಯೋತಿ ಬಸವೇಶ್ವರ, ದೇವರ ದಾಸಿಮಯ್ಯ, ಮಡಿ ವಾಳ ಮಾಚಯ್ಯ ರಾಮನಾಥಪುರದ ಸುಬ್ರಹ್ಮಣ್ಯೇಶ್ವರ ದೇಗುಲದ ಸ್ತಬ್ಧಚಿತ್ರ ಹಾಗೂ ರುದ್ರಪಟ್ಟಣದ ಸಂಗೀತ ಸಪ್ತಸ್ವರ ದೇವಾಲಯದ ಪ್ರತಿ ಸ್ತಬ್ಧಚಿತ್ರ , ಯೇಸುವಿನ ಸಂದೇಶದ ಜೊತೆ ಜೊತೆಗೆ ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರದ ಮೆರವಣಿಗೆ ಈ ಬಾರಿಯ ಉತ್ಸವದ ವಿಶೇಷವಾಗಿತ್ತು.

ಟಾಪ್ ನ್ಯೂಸ್

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.