ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ 4 ಕೋ.ರೂ. ಅನುದಾನ

20,534.50 ಹೆಕ್ಟೇರ್‌ ಪ್ರದೇಶದಲ್ಲಿ ಎಲೆ ಚುಕ್ಕಿ ರೋಗ ಬಾಧೆ; ಎಳನೀರು ವ್ಯಾಪ್ತಿಯ 69 ಹೆಕ್ಟೇರ್‌ ಪ್ರದೇಶ

Team Udayavani, Oct 8, 2022, 6:45 AM IST

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ 4 ಕೋ.ರೂ. ಅನುದಾನ

ಬೆಳ್ತಂಗಡಿ: ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉತ್ತರ ಕನ್ನಡ, ಉಡುಪಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯದಿಂದ ಅಡಿಕೆ ಮರಗಳಿಗೆ ಉಂಟಾದ ಎಲೆ ಚುಕ್ಕಿ ರೋಗ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆ ಇದರ ನಿಯಂತ್ರಣ ಕ್ರಮಕ್ಕಾಗಿ ರಾಜ್ಯ ಸರಕಾರವು 4 ಕೋ.ಟಿ.ರೂ. ಅನುದಾನಕ್ಕೆ ಆದೇಶಿಸಿದೆ.

ಸುಮಾರು 20,534.50 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಮರಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದೆ. ರೋಗ ನಿಯಂತ್ರಣಕ್ಕೆ ಪ್ರತಿ ಹೆಕ್ಟೇರ್‌ಗೆ 4 ಸಾವಿರ ರೂ.ಗಳಂತೆ 1.50 ಹೆಕ್ಟೇರ್‌ ಪ್ರದೇಶದವರೆಗೆ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಹಾಯಧನ ನೀಡಲು ಅಂದಾಜು 8 ಕೋ.ರೂ. ಅಗತ್ಯವಿದೆ. ಆರಂಭದಲ್ಲಿ 10,000 ಹೆಕ್ಟೇರ್‌ ಪ್ರದೇಶಕ್ಕೆ ಮೊದಲನೇ ಸಿಂಪಡಣೆಗೆ 4 ಕೋ.ರೂ. ಆವಶ್ಯಕತೆ ಮನಗಂಡು ಸರಕಾರ ಅನುದಾನ ನೀಡಿದೆ.

ಎಳನೀರು ಭಾಗದಲ್ಲಿ ಪ್ರತ್ಯೇಕ ಪ್ರಕರಣ
ಬೆಳ್ತಂಗಡಿ ತಾಲೂಕಿನ ಎಳನೀರು ವ್ಯಾಪ್ತಿ ಬಡಾಮನೆ, ಗುತ್ಯಡ್ಕ, ಬಂಗಾರಪಲ್ಕೆ, ಕುಕ್ಕಡ ವ್ಯಾಪ್ತಿಯ 150ರಿಂದ 200 ಎಕ್ರೆಗೂ ಅಧಿಕ ಅಡಿಕೆ ಕೃಷಿಗೆ ಎಲೆ ಚುಕ್ಕಿರೋಗ ಬಾಧಿಸಿತ್ತು. ಹಿಂಗಾರ, ಎಲೆಗಳು ಕೆಂಪುಬಣ್ಣಕ್ಕೆ ತಿರುಗಿ ಮರಗಳು ಸಾಯಲಾರಂಭಿಸಿತ್ತು. ಇದರಿಂದ ರೈತರು ಸಂಪೂರ್ಣ ನಷ್ಟ ಅನುಭವಿಸಿದ್ದರು.

ಉದಯವಾಣಿ ವರದಿ
ಈ ಬಗ್ಗೆ 2020ರ ಅಕ್ಟೋಬರ್‌ನಲ್ಲಿ ಉದಯವಾಣಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೃಷಿಕರು ಮತ್ತು ವಿಜ್ಞಾನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಅನುದಾನಕ್ಕಾಗಿ ಸರಕಾರಕ್ಕೆ ಬರೆಯಲಾಗಿತ್ತು. ಇದೀಗ ಸರಕಾರ ಎಚ್ಚೆತ್ತುಕೊಂಡು ಪರಿಹಾರ ಕ್ರಮಕ್ಕೆ ಅನುದಾನ ಒದಗಿಸಿದೆ. ಆದರೆ ಈವರೆಗೆ ರೈತರು ಅನುಭವಿಸಿದ ನಷ್ಟಕ್ಕೆ ಪರಿಹಾರ ಒದಗಿಸಿಲ್ಲ. ಈಗ ನೀಡುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ ಎಂಬುದು ಸಂತ್ರಸ್ತ ರೈತರ ನಿಲುವಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ ಎಲೆಚುಕ್ಕಿ (ರೆಡ್‌ ಮೈಟ್‌) ರೋಗ ಸಂಪೂರ್ಣ ಹತೋಟಿಗೆ ತರುವ ಸಲುವಾಗಿ ಸರಕಾರ ಗಂಭೀರ ಚಿಂತನೆ ನಡೆಸಿದೆ. ಇದಕ್ಕಾಗಿ ರೈತರು ಹೆಕ್ಸ್‌ಕೊನೊಜಾಲ್‌ (Hexconozole) ಅಥವಾ ಪ್ರೊಪಿಕೊಜಾಲ್‌ (Propicozole) ದ್ರಾವಣವನ್ನು ಒಂದು ಲೀಟರ್‌ ನೀರಿಗೆ 1 ಎಂ.ಎಲ್‌. ನಷ್ಟು ಬೆರೆಸಿ ಸೋಗೆ ಪೂರ್ತಿ ಆವರಿಸುವಂತೆ ಸಿಂಪಡಿಸಲು ಸಲಹೆ ನೀಡಲಾಗಿದೆ.

ಎಳನೀರು ಪ್ರದೇಶದ ಅಡಿಕೆ ತೋಟಗಳಲ್ಲಿ ಕಂಡುಬಂದ ಎಲೆ ಚುಕ್ಕಿ ರೋಗ ಕಳಸ ಭಾಗದಿಂದ ಹರಡಿರುವ ಸಾಧ್ಯತೆಯಿದೆ. ಇದೀಗ ರೋಗ ಹತೋಟಿ ಕ್ರಮಕ್ಕೆ ರೈತರು ಬಳಸುವ ಔಷಧ ವೆಚ್ಚಕ್ಕೆ ಸರಕಾರವು ಸಹಾಯಧನ ಒದಗಿಸಿದೆ.
ಕೆ.ಎಸ್‌.ಚಂದ್ರಶೇಖರ್‌,
ಹಿರಿಯ ತೋಟಗಾರಿಕೆ ನಿರ್ದೇಶಕ,
ಬೆಳ್ತಂಗಡಿ ತೋಟಗಾರಿಕೆ ಇಲಾಖೆ

 

 

ಟಾಪ್ ನ್ಯೂಸ್

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.