![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 8, 2022, 4:49 PM IST
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರಕ್ಕೆ ವಿಶ್ವದೆಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬಿಡುಗಡೆಯಾಗಿ ಹತ್ತು ದಿನದ ಬಳಿಕವು ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪರಭಾಷೆಯಲ್ಲೂ ಕನ್ನಡ ಸಿನಿಮಾ ಕಾಂತಾರಕ್ಕೆ ಜೈಕಾರ ಹಾಕುತ್ತಿದ್ದಾರೆ.
ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.
ಉತ್ತಮ ಚಿತ್ರಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ಕಿಚ್ಚ ಸುದೀಪ್ ಇದೀಗ ಕಾಂತಾರ ಚಿತ್ರ ನೋಡಿ ಟ್ವೀಟ್ ಮಾಡಿದ್ದಾರೆ. ಚಿತ್ರದ ನೋಡಿದ ಸಂತಸದಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಸುದೀಪ್ ಟ್ವೀಟ್ ಮಾಡಿದ ಪತ್ರದ ಸಾಲುಗಳು ಇಲ್ಲಿದೆ.
“ನಾವು ಚೆನ್ನಾಗಿರುವ ಮತ್ತು ಅದ್ಭುತ ಎನಿಸುವ ಸಿನಿಮಾಗಳನ್ನು ನೋಡುತ್ತೇವೆ. ಆದರೆ ಅಪರೂಪಕ್ಕೆ ಮಾತ್ರ ನಮ್ಮನ್ನು ಮಂತ್ರಮುಗ್ಧಗೊಳಿಸುವ ಸಿನಿಮಾ ಬರುತ್ತವೆ. ಅಂತಹ ಒಂದು ಸಿನಿಮಾವಾಗಿರುವ ಕಾಂತಾರ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ಸಿಂಪಲ್ ಪ್ಲಾಟ್, ಅಸಾಧಾರಣ ರೀತಿಯ ಬರವಣಿಗೆ, ಫೆಂಟಾಸ್ಟಿಕ್ ಎನ್ನವಂತಹ ಕಲ್ಪನೆ. ರಿಷಬ್ ಅತ್ಯುತ್ತಮವಾಗಿ ನಟಿಸಿದ್ದು ಸಂಪೂರ್ಣ ಶ್ರಮ ಹಾಕಿದ್ದಾರೆ. ಯಾರಾದರೂ ಈ ರೀತಿಯಾಗಿ ಹೇಗೆ ಯೋಚಿಸಲು ಸಾಧ್ಯ ಎಂದು ಅಚ್ಚರಿ ಪಡುವುದಷ್ಟೇ ನಿಮ್ಮ ಕೆಲಸ.
ಪರದೆ ಮೇಲೆ ತೋರಿಸಿದ ರೀತಿಯ ಅರ್ಧದಷ್ಟಾದರೂ ಈ ಪ್ಲಾಟ್ ಪೇಪರ್ ಮೇಲಿದ್ದರೂ ಅದು ಅಚ್ಚರಿ. ಕ್ಲೈಮ್ಯಾಕ್ಸ್ ಪೇಪರ್ನಲ್ಲಿ ಕೂಡಾ ಪೇಪರ್ ನಲ್ಲಿ ಅದೊಂದು ಸಾಮಾನ್ಯ ಎಂಡಿಂಗ್ ಆಗಿರುತ್ತಿತ್ತು. ಇದು ನಿರ್ದೇಶಕರ ದೃಷ್ಟಿ. ನಿರ್ದೇಶಕ ಕಲ್ಪಿಸಿಕೊಂಡಂತೆ ಸಿನಿಮಾ ಸಿದ್ಧವಾಗಿದೆ. ಇದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ.
ಇಂಥಹ ಕಥೆಯಲ್ಲಿ ನಂಬಿಕೆ ಇರಿಸಿದ ತಂಡಕ್ಕೆ ಮೆಚ್ಚುಗೆ. ಈ ಸಿನಿಮಾವನ್ನು ಇಷ್ಟೊಂದು ಪರಿಣಾಮಕಾರಿ ನಿರ್ಮಿಸಿದ ರಿಷಬ್ ಮತ್ತು ಈ ಕ್ರಿಯಾಶೀಲ ತಂಡಕ್ಕೊಂದು ಅಪ್ಪುಗೆ. ಅಜನೀಶ್ ಹ್ಯಾಟ್ಸಾಫ್. ನೀವು ಮಾಸ್ಟರ್. ಹೊಂಬಾಳೆ ಫಿಲ್ಮ್ಸ್ ಗೆ ಶುಭಾಶಯಗಳು. ನಂಬಿಕೆ ಇಟ್ಟು ಇವರ ಜೊತೆ ನಿಂತಿದ್ದಕ್ಕೆ ನಿಮಗೆ ಧನ್ಯವಾದಗಳು.
ನಾನು ಕೇಳಿರುವ ವಿಮರ್ಶೆಗಳಂತೆ ಚಿತ್ರ ಇರಲಿ ಎಂದು ಭಾವಿಸಿ ಸಿನಿಮಾ ನೋಡಲು ಕುಳಿತೆ. ಆದರೆ ಈ ಸಿನಿಮಾ ಅವೆಲ್ಲವನ್ನೂ ಮೀರಿಸಿತು. ಚಿಯರ್ಸ್” ಎಂದು, ಕಿಚ್ಚ ಸುದೀಪ್ ಬರೆದಿದ್ದಾರೆ.
KAANTHARA
❤️❤️?@shetty_rishab @hombalefilms @AJANEESHB pic.twitter.com/cBcVFZsi71— Kichcha Sudeepa (@KicchaSudeep) October 8, 2022
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.