ಚಂದ್ರನಲ್ಲಿ ಹೇರಳ ಸೋಡಿಯಂ ಇರುವ ನಿಕ್ಷೇಪ ಪತ್ತೆ

ಇಸ್ರೋದ ಚಂದ್ರಯಾನ-2ರ ಅಧ್ಯಯನದಲ್ಲಿ ದೃಢ

Team Udayavani, Oct 9, 2022, 7:30 AM IST

moonಚಂದ್ರನಲ್ಲಿ ಹೇರಳ ಸೋಡಿಯಂ ಇರುವ ನಿಕ್ಷೇಪ ಪತ್ತೆ

ನವದೆಹಲಿ: ಇದೇ ಮೊದಲ ಬಾರಿಗೆ ಚಂದ್ರನಲ್ಲಿ ಹೇರಳವಾಗಿ ಸೋಡಿಯಂ ಇರುವ ನಿಕ್ಷೇಪವನ್ನು “ಕ್ಲಾಸ್‌’ (ಚಂದ್ರಯಾನ-2 ಲಾರ್ಜ್‌ ಏರಿಯಾ ಸಾಪ್ಟ್ ಎಕ್ಸ್‌ರೇ ಸ್ಪೆಕ್ಟ್ರೋಮೀಟರ್‌) ಗುರುತಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಈ ಹಿಂದೆ ಚಂದ್ರಯಾನ-1 ಎಕ್ಸ್‌ರೇ ಪ್ಲೋರೆಸೆನ್ಸ್‌ ಸ್ಪೆಕ್ಟ್ರೋಮೀಟರ್‌ (ಸಿ1ಎಕ್ಸ್‌ಎಸ್‌) ಚಂದ್ರನಲ್ಲಿ ಸೋಡಿಯಂ ಇರುವುದನ್ನು ಪತ್ತೆಹಚ್ಚಿತ್ತು. ಇದರಿಂದ ಚಂದ್ರನಲ್ಲಿ ಹೇರಳವಾಗಿ ಸೋಡಿಯಂ ಇರುವ ಸಾಧ್ಯತೆ ಬಗ್ಗೆ ಸಂಶೋಧನೆ ಮುಂದುವರಿಯಿತು ಎಂದು ಇಸ್ರೊ ಹೇಳಿದೆ.

“ದಿ ಆಸ್ಟ್ರೋಫಿಸಿಕಲ್‌ ಜರ್ನಲ್‌ ಲೆಟರ್’ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

ಬೆಂಗಳೂರಿನಲ್ಲಿರುವ ಇಸ್ರೋದ ಪ್ರಧಾನ ಕಚೇರಿಯಲ್ಲಿ ಇರುವ ಇಸ್ರೊದ ಯು.ಆರ್‌.ರಾವ್‌ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಲಾದ “ಕ್ಲಾಸ್‌’ ಸ್ಪೆಕ್ಟ್ರೋಮೀಟರ್‌ ಚಂದ್ರನಲ್ಲಿರುವ ಸೋಡಿಯಂ ಬಗ್ಗೆ ಸ್ಟಷ್ಟ ಚಿತ್ರಣ ಒದಗಿಸಿದೆ.

ಅಧ್ಯಯನದ ಪ್ರಕಾರ, ಚಂದ್ರನ ಮೇಲೆ ಸೋಡಿಯಂ ಇರುವ ಕುರುಹುಗಳು ಬಹುಶಃ ಸೋಡಿಯಂ ಪರಮಾಣುಗಳ ತೆಳುವಾದ ಪದರದಿಂದ ಹುಟ್ಟಿಕೊಂಡಿರಬಹುದು. ಇದು ಚಂದ್ರನ ಕಣಗಳಿಗೆ ದುರ್ಬಲವಾಗಿ ಜೋಡಿಸಲ್ಪಟ್ಟಿದೆ. ಈ ಸೋಡಿಯಂ ಪರಮಾಣುಗಳನ್ನು ಸೌರ ಮಾರುತ ಅಥವಾ ನೇರಳಾತೀತ ವಿಕಿರಣದ ಮೂಲಕ ಚಂದ್ರನ ಮೇಲ್ಮೈಯಿಂದ ಸುಲಭವಾಗಿ ಹೊರಹಾಕಬಹುದು ಎಂದು ಇಸ್ರೊ ತಿಳಿಸಿದೆ.

ಸೋಡಿಯಂ ಇರುವ ಚಂದ್ರನ ಮೇಲ್ಮೈಯನ್ನು “ಎಕೊಸ್ಪಿಯರ್‌’ ಎಂದು ಕರೆಯಲಾಗುತ್ತದೆ. ಇದು ಚಂದ್ರನ ಮೇಲ್ಮೈಯಿಂದ ಪ್ರಾರಂಭವಾಗುತ್ತದೆ ಮತ್ತು ಸಾವಿರಾರು ಕಿಲೋ ಮೀಟರ್‌ ಗಳವರೆಗೆ ವಿಸ್ತರಿಸುತ್ತದೆ.

ಈ ಹೊಸ ಸಂಶೋಧನೆಗಳು, ಚಂದ್ರನ ಮೇಲ್ಮೈ-ಎಕೊಸ್ಪಿಯರ್‌ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಲು ಹಾಗೂ ನಮ್ಮ ಸೌರವ್ಯೂಹದ ಇತರ ಗ್ರಹಗಳು ಮತ್ತು ಅದರ ಉಪಗ್ರಹಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಅವಕಾಶ ಒದಗಿಸುತ್ತದೆ ಎಂದು ಇಸ್ರೊ ಹೇಳಿದೆ.

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress is working to divide Muslims for votes: BJP

Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ: ಬಿಜೆಪಿ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

Manipur: Two bodies found, 6 missing including children

Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ

Siddiqui was hit because of Dawood and actor Salman’s connection: Shooter

ದಾವೂದ್‌, ನಟ ಸಲ್ಮಾನ್‌ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್‌

Amith-HM

Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್‌ ಶಾ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.