ಕೊರಟಗೆರೆ: ವೈದ್ಯ ಡಾ.ನವೀನ್ ಅಮಾನತಿಗೆ ಸ್ಥಳೀಯರ ಆಗ್ರಹ
ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು.. ಕೊರಟಗೆರೆ ಪಿಎಸೈ ನಾಗರಾಜು ಎತ್ತಂಗಡಿ..
Team Udayavani, Oct 8, 2022, 10:19 PM IST
ಕೊರಟಗೆರೆ: ಸರಕಾರಿ ವೈದ್ಯನೊರ್ವ ಸಮಾವಸ್ತ್ರ ಧರಿಸದೇ ಐಡಿ ಕಾರ್ಡು ಮತ್ತು ವೈದ್ಯಕೀಯ ಸಲಕರಣೆ ಇಲ್ಲದೇ ಕರ್ತವ್ಯಲೋಪ ಮಾಡಿ ಇಬ್ಬರು ಅಮಾಯಕ ಯುವಕರ ಸಾವಿಗೆ ಕಾರಣವಾಗಿ ವಿನಾಕಾರಣ ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ ಎಂದು ಕೊರಟಗೆರೆ ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷ ಜೆಟ್ಟಿಅಗ್ರಹಾರ ನಾಗರಾಜ್ ಆರೋಪ ಮಾಡಿದ್ದಾರೆ.
ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆ ಕಚೇರಿ ಆವರಣದಲ್ಲಿ ಬಹುಜನ ಸಮಾಜವಾದಿ ಪಕ್ಷ ಮತ್ತು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಘಟಕದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ನವೀನ್ ವಿರುದ್ದ ಪ್ರತಿಭಟನೆ ನಡೆಸಿ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಂಡು ಪತ್ರಕರ್ತರಿಗೆ ರಕ್ಷಣೆ ನೀಡಬೇಕಿದೆ ಎಂದು ಒತ್ತಾಯ ಮಾಡಿದರು.
ಸಾರ್ವಜನಿಕ ಆಸ್ಪತ್ರೆಗೆ ಪತ್ರಕರ್ತರು ಬರದಂತೆ ಡಾ.ನವೀನ್.ಕೆ ಧಮ್ಕಿ ಹಾಕಿದ್ದಾರೆ. ವೈದ್ಯರು ಮಾಡುವ ಕರ್ತವ್ಯಲೋಪದ ಬಗ್ಗೆ ಪ್ರಶ್ನಿಸುವ ಹಾಗಿಲ್ಲವೇ. ಎಣ್ಣೆಯ ಅಮಲಿನಲ್ಲಿ ವೈದ್ಯ ನವೀನ್ ಗಾಯಾಳು ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ಪತ್ರಕರ್ತರ ಜೊತೆ ಜಗಳದಲ್ಲಿ ತೊಡಗಿದ್ದಾರೆ. ಪತ್ರತರ್ಕರ ವಿರುದ್ದ ವೈದ್ಯ ಮಾಡಿರುವ ಆರೋಪಕ್ಕೆ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಯೇ ಸಾಕ್ಷಿ ನೀಡಲಿವೆ. ರಾಜ್ಯ ಸರಕಾರ ತಕ್ಷಣ ಈತನನ್ನು ಅಮಾನತು ಮಾಡಿ ಕೆಲಸದಿಂದ ವಜಾ ಮಾಡಬೇಕಿದೆ ಎಂದು ಆಗ್ರಹಿಸಿದರು.
ಕೊರಟಗೆರೆಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಘಟಕದ ಅಧ್ಯಕ್ಷ ನಯಾಜ್ ಅಹಮ್ಮದ್ ಮಾತನಾಡಿ, ತುರ್ತುವಾಹನ ಮತ್ತು ವೈದ್ಯ ಡಾ.ನವೀನ್ ನಿರ್ಲಕ್ಷದಿಂದ ಇಬ್ಬರು ಅಮಾಯಕ ಯುವಕರು ಮೃತಪಟ್ಟಿದ್ದಾರೆ. ಕರ್ತವ್ಯಲೋಪದ ಬಗ್ಗೆ ವರದಿಗೆ ಮುಂದಾದ ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ. ಸುಳ್ಳು ಕೇಸು ದಾಖಲಿಸಿದ ವೈದ್ಯ ಡಾ.ನವೀನ್ ಮತ್ತು ಪಿಎಸೈ ವಿರುದ್ದ ಸರಕಾರ ತನಿಖೆ ನಡೆಸಬೇಕಿದೆ ಎಂದು ಆಗ್ರಹ ಮಾಡಿದರು.
ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ವೈದ್ಯನಿಗೆ ಸಮಸ್ಯೆ ಆದಾಗ ಆಸ್ಪತ್ರೆಯ ಮುಖ್ಯಾಧಿಕಾರಿ ಗಮನಕ್ಕೆ ತರಲಿಲ್ಲ ಏಕೆ. ಆಸ್ಪತ್ರೆಯ ಮಹಿಳಾ ವೈದ್ಯರು ಮತ್ತು ಖಾಸಗಿ ವ್ಯಕ್ತಿಗಳ ಪ್ರಚೋದನೆಯ ಮಾತನ್ನು ಕೇಳಿ ಘಟನೆ ನಡೆದ ೪ ಗಂಟೆಗಳ ನಂತರ ಮತ್ತೆ ದೂರು ನೀಡಲು ಕಾರಣವೇನು. ಸಮವಸ್ತ ಧರಿಸದೇ ವೈದ್ಯ ಆಸ್ಪತ್ರೆಯಲ್ಲಿ ಇರುವುದಾದರು ಹೇಗೆ. ರಾತ್ರಿ ಪಾಳಿಯದಲ್ಲಿ ಈ ವೈದ್ಯನೇ ಹೆಚ್ಚು ಕೆಲಸ ಮಾಡಲು ಕಾರಣವೇನು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡರಾದ ದಿನೇಶ್, ನಾಗೇಶ್, ಜಬೀವುಲ್ಲಾ, ಸೈಯದ್ ಅರಿಫ್, ಸೈಮನ್, ಮುತ್ತುರಾಜು, ಪ್ರಕಾಶ್, ಸೋಮಶೇಖರ್, ಪಾರೋಕ್, ನಾಗರಾಜು, ಪ್ರಕಾಶ್, ಅರವಿಂದ್, ಮಲ್ಲಣ್ಣ, ಗೋವಿಂದರಾಜು, ಸೈಯದ್ ಸೈಪುಲ್ಲಾ, ನಟರಾಜ್ ಸೇರಿದಂತೆ ಇತರರು ಇದ್ದರು.
ಅಮಾನತಿಗೆ ಆಗ್ರಹ
ಕರ್ತವ್ಯಲೋಪ ಎಸಗಿರುವ ವೈದ್ಯ ಡಾ.ನವೀನ್ ಅಮಾನತಿ ಮಾಡಿ ತನಿಖೆ ನಡೆಸಬೇಕಿದೆ. ವೈದ್ಯಕೀಯ ಸೇವೆಯ ಬಗ್ಗೆ ಇವರಿಗೆ ಮತ್ತೋಮ್ಮೆ ತರಬೇತಿ ಅಗತ್ಯವಿದೆ. ಸನ್ಮಾನ್ಯ ರಾಜ್ಯ ಸರಕಾರ, ಮುಖ್ಯಮಂತ್ರಿ, ಆರೋಗ್ಯ ಸಚಿವ, ಕೇಂದ್ರ ವಾರ್ತ ಮತ್ತು ಪ್ರಸಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಮಹಾನಿರೀಕ್ಷರು, ನಾಗರೀಕ್ಷ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿವರ್ಗ ತಕ್ಷಣ ವೈದ್ಯನ ವಿರುದ್ದ ಕ್ರಮ ಜಗುರಿಸಬೇಕು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗಿದೆ.
ಕೊರಟಗೆರೆ ಪಿಎಸೈ ನಾಗರಾಜು ಎತ್ತಂಗಡಿ
ಡಾ.ನವೀನ್.ಕೆ ಎಂಬಾತನ ಕರ್ತವ್ಯಲೋಪ ಪ್ರಶ್ನಿಸಿದ ಪತ್ರಕರ್ತರ ಮೇಲೆಯೇ ದೈಹಿಕ ಹಲ್ಲೆ ನಡೆಸಿ ತಾನೇ ನೀಡಿದ ಸುಳ್ಳು ದೂರನ್ನು ಪರಿಶೀಲನೆ ನಡೆಸದೇ ಪ್ರಕರಣ ದಾಖಲಿಸಿದ ಕೊರಟಗೆರೆ ಪಿಎಸೈ ನಾಗರಾಜು ಅವರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ. ವೈದ್ಯ ನವೀನ್ ನೀಡಿದ ದೂರು ತಡರಾತ್ರಿ 2 ಗಂಟೆಗೆ ದಾಖಲಾಗಿದೆ. ಪತ್ರಕರ್ತರು ನೀಡಿರುವ ದೂರು 3 ದಿನವಾದರೂ ಪ್ರಕರಣ ದಾಖಲಾಗದೇ ಇರುವುದೇ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.