ಅಂತೂ ಸಿಕ್ತು ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ
ಕೊನೆಗೂ ಈಡೇರಿದ ಬಹುದಿನಗಳ ಬೇಡಿಕೆ; ಬೀದಿ ದೀಪ ಅಳವಡಿಕೆಗೆ ಆಗ್ರಹ
Team Udayavani, Oct 9, 2022, 11:36 AM IST
ಕುಂದಾಪುರ: ಕಳೆದೊಂದು ವರ್ಷದಿಂದ ತೂಗುಯ್ನಾಲೆಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ ಕಲ್ಪಿಸುವ ಬೇಡಿಕೆಯು ಕೊನೆಗೂ ಸಾಕಾರಗೊಂಡಿದೆ. ಶನಿವಾರ ಬೆಳಗ್ಗೆ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬೊಬ್ಬರ್ಯ ಕಟ್ಟೆ ಬಳಿಯಿಂದ ತುಸು ಮುಂದೆ ಪ್ರವೇಶ ಕಲ್ಪಿಸಲು ಅಗತ್ಯವಿದ್ದ ಕಾಮಗಾರಿಯನ್ನು ಆರಂಭಿಸಿದ್ದು, ಸಂಜೆಯ ವೇಳೆಗೆ ವಾಹನ ಸಂಚಾರಕ್ಕೂ ಅನುವು ಮಾಡಿಕೊಡಲಾಯಿತು.
ಸದ್ಯ ಒಂದೂವರೆ ತಿಂಗಳ ಕಾಲ ಪ್ರಾಯೋಗಿಕ ನೆಲೆಯಲ್ಲಿ ಹೆದ್ದಾರಿಯಿಂದ ಪ್ರವೇಶ ಕಲ್ಪಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ಅವಘಢ, ಅಪಘಾತ ಗಳು ಸಂಭವಿಸದಿದ್ದರೆ, ಇದನ್ನೇ ಮುಂದುವರಿಸುವ ಯೋಜನೆ ಹೆದ್ದಾರಿ ಪ್ರಾಧಿಕಾರದ್ದಾಗಿದೆ. ಇನ್ನು ಇಲ್ಲಿ ಸರ್ವಿಸ್ ರಸ್ತೆ ವಿಸ್ತರಣೆ ಕಾಮಗಾರಿಯೂ ಮುಂದಿನ ದಿನಗಳಲ್ಲಿ ನಡೆಯಲಿದೆ.
ಕುಂದಾಪುರ ನಗರಕ್ಕೆ ಹೆದ್ದಾರಿಯಿಂದ ಪ್ರವೇಶ ನೀಡಬೇಕು ಎನ್ನುವ ಬಗ್ಗೆ ಅನೇಕ ಸಮಯಗಳಿಂದ ಹೋರಾಟ ನಡೆಯುತ್ತಿದೆ. ಈ ಹಿಂದೆ ದುರ್ಗಾಂಬಾ ಬಸ್ ಡಿಪೋ ಬಳಿ ಅಂದರೆ ಪುರಸಭೆ ವ್ಯಾಪ್ತಿ ಆರಂಭವಾಗುವ ಮುನ್ನವೇ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಅವಕಾಶ ನೀಡಲಾಗಿತ್ತು. ಅದಾದ ಬಳಿಕ ಪುರಸಭೆ ವ್ಯಾಪ್ತಿ ಮುಗಿಯುವುದಕ್ಕಿಂತ ಸ್ವಲ್ಪ ದೂರದಲ್ಲಿ ಅಂದರೆ ಸಂತೆ ಮಾರುಕಟ್ಟೆ ಬಳಿ ಹೆದ್ದಾರಿಯಿಂದ ಇಳಿಯಲು ಅವಕಾಶ ನೀಡಲಾಗಿದೆ. ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಕುಂದಾ ಪುರ ನಗರಕ್ಕೆ ಪ್ರವೇಶ ಪಡೆಯುವುದು ಗೊಂದಲಕ್ಕೀಡು ಮಾಡುತ್ತಿತ್ತು. ಅರಿಯದೇ ಹೆದ್ದಾರಿಯಲ್ಲಿ ಮುಂದುವರಿದರೆ ಕುಂದಾಪುರ ನಗರದೊಳಗೆ ಬರಬೇಕಾದರೆ ಮತ್ತೆ ಕಿ.ಮೀ. ಗಟ್ಟಲೆ ಸಂಚರಿಸಿ ಬರಬೇಕಾಗಿತ್ತು.
ಎಸಿ ಭೇಟಿ ; ಪರಿಶೀಲನೆ
ಬೊಬ್ಬರ್ಯನಕಟ್ಟೆ ಬಳಿಯಿಂದ ತುಸು ಮುಂದೆ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕಚೇರಿ ಎದುರು ಶನಿವಾರ ನವಯುಗ ಸಂಸ್ಥೆಯು ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಕೈಗೊಂಡಿತ್ತು. ಸ್ಥಳಕ್ಕೆ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಬಿಜೆಪಿ ಮುಖಂಡ ಸುನಿಲ್ ಶೆಟ್ಟಿ ಹೇರಿಕುದ್ರು ಉಪಸ್ಥಿತರಿದ್ದರು.
ನಿರಂತರ ಹೋರಾಟ
ಪುರಸಭೆ ಸದಸ್ಯರು ಅನೇಕ ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆಸಿ ನಗರದೊಳಗೆ ಪ್ರವೇಶ ನೀಡಲು ಆಗ್ರಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಳಿಯೂ ಮನವಿ ನೀಡಿದ್ದರು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದರು. ಸಾರ್ವಜನಿಕರು ಸಂಬಂಧಪಟ್ಟವರಿಗೆ ಮನವಿ ನೀಡಿದ್ದರು. ಪ್ರತಿಭಟನೆ, ಹೋರಾಟಗಳು ನಡೆದಿತ್ತು.
ವ್ಯಾಪಾರ-ವಹಿವಾಟಿಗೆ ಅನುಕೂಲ
ಹೆದ್ದಾರಿಯಿಂದ ಪ್ರವೇಶ ಕಲ್ಪಿಸಿದ್ದರಿಂದ ಉಡುಪಿ ಕಡೆಯಿಂದ ಕುಂದಾಪುರ ನಗರಕ್ಕೆ ಬರುವವರಿಗೆ ಸಮಯ ಉಳಿತಾಯವಾಗಲಿದ್ದು, ಬಹಳಷ್ಟು ಅನುಕೂಲವಾಗಲಿದೆ. ಇದಲ್ಲದೆ ಕುಂದಾಪುರ ನಗರದಲ್ಲಿ 2,332 ವಾಣಿಜ್ಯ ಪರವಾನಿಗೆಗಳಿವೆ. ಹೊಟೇಲ್, ಬಟ್ಟೆ, ಆಭರಣ ಇನ್ನಿತರ ವ್ಯಾಪಾರ- ವಹಿವಾಟುಗಳಿಗೂ ಇದು ವರದಾನವಾಗಲಿದೆ.
ಬೀದಿದೀಪ ಅಳವಡಿಕೆಗೆ ಬೇಡಿಕೆ
ಪ್ರವೇಶ ನೀಡಿದ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶೀಘ್ರ ಬೀದಿ ದೀಪವನ್ನು ಅಳವಡಿಸಬೇಕು ಎನ್ನುವ ಬೇಡಿಕೆಯೂ ಕೇಳಿ ಬಂದಿದೆ. ಕುಂದಾಪುರ ನಗರಕ್ಕೆ ಪ್ರವೇಶ ಕಲ್ಪಿಸಿದಂತೆ, ಅದರ ಎದುರಲ್ಲಿ ನಗರದಿಂದ ಉಡುಪಿ ಕಡೆಗೆ ತೆರಳಲು ಸಹ ಪ್ರವೇಶ ಕಲ್ಪಿಸಬೇಕು ಎನ್ನುವ ಸಾರ್ವಜನಿಕರದ್ದಾಗಿದೆ. ಎಲ್ ಐಸಿ, ಡಿವೈಎಸ್‌ಪಿ, ಮೆಸ್ಕಾಂ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಷ್ಮೆ ಇಲಾಖೆ ಸೇರಿದಂತೆ 15ಕ್ಕೂ ಅಧಿಕ ಸರಕಾರಿ ಕಚೇರಿಗಳಿದ್ದು, ಹೆದ್ದಾರಿ ದಾಟಿ ಈ ಬದಿ ಸರ್ವಿಸ್ ರಸ್ತೆಗೆ ಬರಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಮುಂಜಾಗ್ರತೆ ಅಗತ್ಯ: ಈಗ ಒಂದೂವರೆ ತಿಂಗಳು ಪ್ರಾಯೋಗಿಕವಾಗಿ ಪ್ರವೇಶ ಕಲ್ಪಿಸಲಾಗಿದೆ. ಇಲ್ಲಿ ಯಶಸ್ವಿಯಾದರೆ ಆ ಬಳಿಕ ಎದುರುಗಡೆ ಹೆದ್ದಾರಿಗೆ ಪ್ರವೇಶ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು. ಎಲ್ಲರೂ ಮುಂಜಾಗ್ರತೆಯಿಂದ ವಾಹನ ಚಲಾಯಿಸಬೇಕಿದೆ. ಯಾವುದೇ ಅಪಘಾತಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಬಹಳ ಅಗತ್ಯವಾಗಿದೆ. ಇಲ್ಲಿ ಬೀದಿ ದೀಪ ಅಳವಡಿಸುವ ಬಗ್ಗೆ ಸೂಚನೆ ನೀಡಲಾಗಿದೆ. – ರಾಜು ಕೆ., ಕುಂದಾಪುರ ಎಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.