ಸ್ಮಾರಕವನ್ನು ಬಾರ್ ಆಗಿ ಪರಿವರ್ತಿಸಿದ ತೆಲುಗು ಚಿತ್ರತಂಡ
Team Udayavani, Oct 9, 2022, 5:09 PM IST
ಮೇಲುಕೋಟೆ: ಜಿಲ್ಲೆಯ ಪ್ರಖ್ಯಾತ ವೈಷ್ಣವ ಕ್ಷೇತ್ರವಾದ ಮೇಲುಕೋಟೆ ಪರಂಪರೆ ಸಂಸ್ಕೃತಿ ಬಿಂಬಿಸುವ ಭವ್ಯ ಸ್ಮಾರಕ ರಾಯಗೋಪುರದಲ್ಲಿ ತೆಲುಗು ಚಲನಚಿತ್ರ ತಂಡ ಚಿತ್ರೀಕರಣಕ್ಕಾಗಿ ಬಾರ್ ಸೆಟ್ ನಿರ್ಮಿಸಿದ್ದು ವೈಷ್ಣವ ಕ್ಷೇತ್ರಕ್ಕೆ ಅಪಮಾನ ಮಾಡಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ತೆಲುಗು ನಟ ನಾಗಚೈತನ್ಯ ನಟಿಸುತ್ತಿರುವ 3 NoT2 ಚಿತ್ರತಂಡ ಜಿಲ್ಲಾಧಿಕಾರಿಗಳಿಂದ ಷರತ್ತುಗಳ ಅನ್ವಯ ಮೇಲುಕೋಟೆಯಲ್ಲಿ ಚಿತ್ರೀಕರಣಕ್ಕೆ 2 ದಿನ ಅನುಮತಿ ಪಡೆದು ಷರತ್ತು ಉಲ್ಲಂ ಸಿದೆ ಎಂದು ಆರೋಪಿಸಿದ್ದಾರೆ. ಸ್ಮಾರಕವಾದ ರಾಯಗೋಪುರವನ್ನು ಮದುವೆ ಕಲ್ಯಾಣ ಮಂಟಪದಂತೆ ಸೆಟ್ ಆಗಿ ಬದಲಿಸಿದೆ. ಪಕ್ಕದಲ್ಲೇ ವಿವಿಧ ಬ್ರಾಡ್ ಮದ್ಯದ ಬಾಟಲ್‌ಗಳನ್ನುಇಟ್ಟು ಚಿತ್ರೀಕರಣ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರೀ ಗಾತ್ರದ ಕಬ್ಬಿಣದ ಕಂಬಗಳನ್ನು ಚಿತ್ರೀಕರಣಕ್ಕೆ ಬಳಸಲಾಗಿದೆ. ಈ ಹಿಂದೆಯೂ ನಾಗ ಚೈತನ್ಯ ನಟಿಸಿದ ಚಲನಚಿತ್ರ ಕಲ್ಯಾಣಿಯಲ್ಲಿ ಚಿತ್ರೀಕರಣ ಮಾಡಿದ ವೇಳೆ ರಾಜಮುಡಿ ಉತ್ಸವಕ್ಕೆ ಅಡಚಣೆ ಮಾಡಿ ದೇವಾಲಯ ಪರಂಪರೆಗೆ ಧಕ್ಕೆ ತಂದಿತ್ತು.
ತೆಲುಗು ಚಿತ್ರತಂಡ ಜಿಲ್ಲಾಧಿಕಾರಿಗಳ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹಾಗೂ ದೇವಾಲಯದ ಕಚೇರಿ ಸಿಬ್ಬಂದಿ ಪರಿಶೀಲನೆ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಇನ್ನು ಮೇಲುಕೋಟೆಯಲ್ಲಿ ನಡೆಯುತ್ತಿರುವ ಚಿತ್ರೀಕರಣವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಬೇಕೆಂದು ಸ್ಥಳೀಯ ಧ್ರುವ ಕುಮಾರ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.