ಜನರಲ್ಲಿ ಮಾನಸಿಕ ಆರೋಗ್ಯದ ಅರಿವು ಹೆಚ್ಚಲಿ; ಇಂದು ವಿಶ್ವ ಮಾನಸಿಕ ಆರೋಗ್ಯದಿನ


Team Udayavani, Oct 10, 2022, 6:30 AM IST

ಜನರಲ್ಲಿ ಮಾನಸಿಕ ಆರೋಗ್ಯದ ಅರಿವು ಹೆಚ್ಚಲಿ; ಇಂದು ವಿಶ್ವ ಮಾನಸಿಕ ಆರೋಗ್ಯದಿನ

ದೈನಂದಿನ ಚಟುವಟಿಕೆ ಸರಾಗವಾಗಿ ಸಾಗಬೇಕಾದರೆ ಮಾನಸಿಕ ಆರೋಗ್ಯ ಅತೀ ಮುಖ್ಯ. ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ಯಾವ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಿಲ್ಲ. ಮಾನಸಿಕ ಆರೋಗ್ಯ ಹದಗೆಟ್ಟಾಗ ಅದು ಸಹಜವಾಗಿ ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆಲೋಚನ ವಿಧಾನವೇ ಬದಲಾಗುತ್ತದೆ. ಅಸಮಾಧಾನ, ಅತೃಪ್ತಿ, ನಿರಾಸೆ, ಹತಾಶೆ ಹೀಗೆ ಹತ್ತಾರು ಆಂತರಿಕ-ಬಾಹ್ಯ ಸಮಸ್ಯೆಗಳು ನಮ್ಮನ್ನು ನಮಗೆ ಗೊತ್ತಿಲ್ಲದಂತೆ ಆವರಿಸಿಕೊಳ್ಳುತ್ತವೆ ಮತ್ತು ಮನಸ್ಸು ಪ್ರಕ್ಷುಬ್ಧಗೊಳ್ಳುತ್ತದೆ.

ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಔದ್ಯೋಗಿಕ ಸಮಸ್ಯೆ, ಕೀಳರಿಮೆ, ಒಂಟಿತನ, ದುಶ್ಚಟಗಳು, ದುರಾಭ್ಯಾಸ, ಜೀವನ ಶೈಲಿಯಲ್ಲಿನ ದಿಢೀರ್‌ ಬದಲಾವಣೆ, ಅಂಗವೈಕಲ್ಯ ಇತ್ಯಾದಿಗಳಿಂದ ಮಾನಸಿಕ ಆರೋಗ್ಯವೂ ಕೆಡುವ ಸಾಧ್ಯತೆ ಹೆಚ್ಚಿರುತ್ತದೆ.

ಮಾನಸಿಕ ಆರೋಗ್ಯದ ಆವಶ್ಯಕತೆ ಉತ್ತೇಜಿಸುವ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ಉದ್ದೇಶದಿಂದ 1992ರಿಂದ ಪ್ರತೀ ವರ್ಷದ ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.

“ಎಲ್ಲರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸುವುದು ಜಾಗತಿಕ ಆದ್ಯತೆ’ ಎಂಬ ಧ್ಯೇಯದೊಂದಿಗೆ ಈ ವರ್ಷ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಡೆಯಲಿದೆ. ಕಳೆದೆರಡು ವರ್ಷಗಳಿಂದೀಚೆಗೆ ಇಡೀ ಜಗತ್ತನ್ನೇ ಕಾಡಿದ ಕೊರೊನಾ ಸಾಂಕ್ರಾಮಿಕವು ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಮೇಲೂ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರಿದೆ. ಕೆಲವರು ಹೆಚ್ಚು ಸಮಸ್ಯೆಗೆ ಒಳಗಾದರೆ, ಹಲವರು ಅದರಿಂದ ಕೂಡಲೇ ಹೊರಬಂದಿದ್ದಾರೆ. ಮಾನಸಿಕ ಆರೋಗ್ಯ ಕೆಟ್ಟರೆ ಏನೆಲ್ಲ ಸಮಸ್ಯೆಯಾಗಬಹುದು, ಯಾವ ರೀತಿಯ ಯೋಚನೆಗಳು ನಮ್ಮನ್ನು ಕಾಡಬಹುದು ಎಂಬುದರ ಅನುಭವ ಬಹುತೇಕರಿಗೆ ಕೋವಿಡ್‌ ಸಂದರ್ಭದಲ್ಲಿ ಆಗಿಯೇ ಇರುತ್ತದೆ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉಡುಪಿಯ ಡಾ| ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿರುವ ಡಾ| ವಿರೂಪಾಕ್ಷ ದೇವರಮನೆ ಅವರು ಜನರಿಗೆ ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.

– ದೈಹಿಕ ಸಮಸ್ಯೆ ಎದುರಾದಾಗ ತತ್‌ಕ್ಷಣವೇ ಬೇರೆಯವರ ಸಹಾಯ ಪಡೆಯುವಂತೆ ಮಾನಸಿಕ ಆರೋಗ್ಯದ ಸಮಸ್ಯೆ ಎದುರಾದಾಗಲೂ ಬೇರೆಯವರ ಸಹಾಯ ಪಡೆಯಲು ಹಿಂಜರಿಯಬಾರದು. ಆರಂಭದಲ್ಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ, ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯಬೇಕು.
– ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಕಾಳಜಿಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು. ನಮ್ಮ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ದಿನೇದಿನೆ ನಮ್ಮನ್ನು ನಾವೇ ಕೇಳಿಕೊಳ್ಳುತ್ತಿರಬೇಕು. ದೈಹಿಕ ಆರೋಗ್ಯದ ಕಾಳಜಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇ ಮಾದರಿಯಲ್ಲಿ ಮಾನಸಿಕ ಆರೋಗ್ಯದ ಕಾಳಜಿಯೂ ಹೆಚ್ಚಬೇಕು.
– ನಿತ್ಯದ ಬದುಕಿನಲ್ಲಿ ಕನಿಷ್ಠ ಅರ್ಧಗಂಟೆ ವ್ಯಾಯಾಮಕ್ಕೆ ಮೀಸಲಿಡಬೇಕು. ಇದರಿಂದ ನಮ್ಮ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ.
– ಮದ್ಯಪಾನ ಸಹಿತ ಎಲ್ಲ ತೆರನಾದ ದುಶ್ಚಟಗಳು ಹಾಗೂ ಮಾನಸಿಕ ಆರೋಗ್ಯ ಒಂದಕ್ಕೊಂದು ಕೊಂಡಿಯಿದ್ದಂತೆ. ಹೀಗಾಗಿ ಎಲ್ಲ ರೀತಿಯ ದುಶ್ಚಟಗಳು ಮತ್ತು ಮದ್ಯವ್ಯಸನದಿಂದ ದೂರವಿರಬೇಕು.
– ದೈಹಿಕ ಆರೋಗ್ಯದಷ್ಟೇ ವೈಜ್ಞಾನಿಕವಾದದ್ದು ಮಾನಸಿಕ ಆರೋಗ್ಯ. ಆದರೆ ಮಾನಸಿಕ ಆರೋಗ್ಯದ ಬಗ್ಗೆ ಕೆಲವೊಂದು ಅನಿಷ್ಟ ನಂಬಿಕೆಗಳನ್ನು ಜನರು ಹೊಂದಿದ್ದಾರೆ. ಅನೇಕ ಸಂದರ್ಭದಲ್ಲಿ ದುಷ್ಟಶಕ್ತಿಗಳ ಪ್ರಭಾವ ಅಥವಾ ಇನ್ಯಾವುದೋ ಅಗೋಚರ ಶಕ್ತಿಯಿಂದ ಸಮಸ್ಯೆಯಾಗಿದೆ ಎಂದು ನಂಬುವುದೇ ಹೆಚ್ಚು. ಮಾನಸಿಕ ಸಮಸ್ಯೆಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲೇ ನೋಡಬೇಕು.
– ನಮ್ಮಲ್ಲಿರುವ ವಸ್ತುಗಳಲ್ಲಿಯೇ ಖುಷಿಪಡಬೇಕು. ಇಲ್ಲದಿರುವ ವಸ್ತುಗಳ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು. ಹಾಗೆಯೇ ನಮ್ಮನ್ನು ಅಥವಾ ಮಕ್ಕಳನ್ನು ಇನ್ನೊಬ್ಬರಿಗೆ, ಅವರ ಜೀವನ ಶೈಲಿಗೆ ಹೋಲಿಸಬಾರದು.
– ಇತ್ತೀಚಿನ ದಿನಗಳಲ್ಲಿ ಒತ್ತಡದಿಂದ ತಲೆನೋವು, ಕತ್ತುನೋವು, ಸ್ನಾಯು ಸಳೆತ, ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಒತ್ತಡದ ಜೀವನದಿಂದ ದೂರ ಇರಲು ಪ್ರಯತ್ನಿಸಬೇಕು.
– ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ನಿರಂತರ ಎರಡು ವಾರಗಳ ವರೆಗೂ ಇದ್ದಲ್ಲಿ ಸಮೀಪದ ಮನೋವೈದ್ಯರನ್ನು ಅಥವಾ ಆಪ್ತಸಮಾಲೋಚಕರನ್ನು ಸಂಪರ್ಕಿಸಬೇಕು.
– ಕುಟುಂಬ, ಸ್ನೇಹಿತರು ಹಾಗೂ ಸಮಾಜದೊಂದಿಗೆ ಸದಾ ಸಕಾರಾತ್ಮಕ ಚಿಂತನೆಯೊಂದಿಗೆ ವ್ಯವಹರಿಸುವುದು ಬಲು ಅಗತ್ಯ.
– ಯಾವುದೇ ವಿಷಯದಲ್ಲೂ ಅನಗತ್ಯ ಸ್ಪರ್ಧೆ ಬೇಡ. ಎಲ್ಲರಿಗಿಂತಲೂ ಸದಾ ಮುಂದಿರಬೇಕು ಎನ್ನುವುದಕ್ಕಿಂತ ಪ್ರಗತಿಶೀಲರಾಗಬೇಕು ಎನ್ನುವ ಚಿಂತನೆಯಲ್ಲಿ ಮುನ್ನಡೆಯಬೇಕು.
ಯಾವುದೇ ಮಾನಸಿಕ ಸಮಸ್ಯೆಗಳು ಕಾಡಿದಾಗ ಧೃತಿಗೆಡದೆ ಧೈರ್ಯದಿಂದ ಈ ಎಲ್ಲ ಸಲಹೆ ಸೂಚನೆಗಳನ್ನು ಅನುಸರಿಸಿದಲ್ಲಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸ್ವಸ್ಥವಾಗಿರಲು ಸಾಧ್ಯ.

ನಿರ್ಲಕ್ಷ್ಯ ಸಲ್ಲದು
ಈ ವರ್ಷ “ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮ ಒಂದು ಜಾಗತಿಕ ಆದ್ಯತೆ’ ಎಂಬ ಧ್ಯೇಯದೊಂದಿಗೆ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಬಹಳ ಜನರು ತಮ್ಮ ವರ್ತನೆಯನ್ನು ಸಾಮಾನ್ಯವೆಂದು ತಿರಸ್ಕರಿಸುತ್ತಾರೆ ಇಲ್ಲವೇ ಕಳಂಕವೆಂದು ಭಾವಿಸಿ ಹಿಂಜರಿಯುತ್ತಾರೆ. ಮಾನಸಿಕ ಸಮಸ್ಯೆಗಳು ಮತ್ತದರ ಪರಿಹಾರಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಅಲ್ಲದೆ ಬಹಳಷ್ಟು ಮಂದಿಗೆ ತಡವಾಗಿ ಚಿಕಿತ್ಸೆ ದೊರೆಯುವುದರಿಂದ ಕಾಯಿಲೆ ಉಲ್ಬಣವಾಗುತ್ತದೆ. ಹೀಗಾಗಿ ಮಾನಸಿಕ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದುವ ಅಗತ್ಯವಿದೆ.
– ಡಾ| ಸಮೀರ್‌ ಕುಮಾರ್‌ ಪ್ರಹರಾಜ್‌ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಮನೋವೈದ್ಯಶಾಸ್ತ್ರ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ


- ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.