ಉಗ್ರವಾದದ ವಿಚಾರದಲ್ಲಿ ಇಬ್ಬಗೆಯ ನೀತಿ ಸರಿಯೇ?


Team Udayavani, Oct 10, 2022, 6:00 AM IST

ಉಗ್ರವಾದದ ವಿಚಾರದಲ್ಲಿ ಇಬ್ಬಗೆಯ ನೀತಿ ಸರಿಯೇ?

ಪಾಕಿಸ್ಥಾನ ಪ್ರಯೋಜಿತ ಉಗ್ರವಾದದ ಬಗ್ಗೆ ಭಾರತ ಮೊದಲಿನಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿಕೊಂಡು ಬರುತ್ತಲೇ ಇದೆ. ಪಾಕಿಸ್ಥಾನವು ಉಗ್ರವಾದವನ್ನು ಸೃಷ್ಟಿಸಿ, ಬೆಳೆಸಿ, ಪೋಷಿಸಿ ಹೆಮ್ಮರವನ್ನಾಗಿ ಮಾಡುತ್ತಿರುವ ಸಂಗತಿ ಇಡೀ ಜಗತ್ತಿಗೇ ಗೊತ್ತಿದೆ. ಅಷ್ಟೇ ಅಲ್ಲ, ಜಗತ್ತಿಗೆ ಕಂಟಕವೆನಿಸಿರುವ ದೊಡ್ಡ ದೊಡ್ಡ ಉಗ್ರ ಸಂಘಟನೆಗಳ ಮೂಲವೂ ಪಾಕಿಸ್ಥಾನದಲ್ಲೇ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಅಂತಾರಾಷ್ಟ್ರೀಯ ಸಂಬಂಧದ ವಿಚಾರದಲ್ಲಿಯೂ ಉಗ್ರವಾದ, ಆಯಾ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ತಕ್ಕಂತೆ ರೂಪಿತವಾಗುತ್ತದೆ. ಪಾಕಿಸ್ಥಾನದ ಮಿತ್ರ ದೇಶವೆನಿಸಿರುವ ಚೀನಕ್ಕೆ, ಆ ದೇಶದ ಉಗ್ರವಾದ ಕಂಟಕವೆನಿಸಿಯೇ ಇಲ್ಲ. ಆದರೆ ತನ್ನದೇ ದೇಶದಲ್ಲಿರುವ ವುಯಿಗರ್‌ ಮುಸ್ಲಿಮರಿಗೆ ಕಿರುಕುಳ ಕೊಡುತ್ತ ಬಂದಿರುವ ಚೀನ ಮಾತ್ರ, ಈ ವಿಚಾರದಲ್ಲಿ ದ್ವಂದ್ವ ವಿಚಾರ ಅನುಸರಿಸುತ್ತಿದೆ.

ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಚೀನಾದ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ಚರ್ಚೆಯಾಗಬೇಕು ಎಂದು ಮತಕ್ಕೆ ಹಾಕಲಾಗಿತ್ತು. ಆದರೆ ಈ ಮತದಾನದಿಂದ ಭಾರತ ಗೈರುಹಾಜರಾಗಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದ ವಿದೇಶಾಂಗ ಇಲಾಖೆ, ಯಾವುದೇ ಒಂದು ದೇಶವನ್ನು ಗುರಿಯಾಗಿಸಿಕೊಂಡು ಇಂಥ ಯಾವುದೇ ಚರ್ಚೆ ಮಾಡುವ ವಿಷಯಗಳಿಗೆ ಮೊದಲಿನಿಂದಲೂ ಮತ ಹಾಕಿಲ್ಲ ಎಂದು ಹೇಳಿತ್ತು.

ಇದಾದ ಬಳಿಕ, ವುಯಿಗರ್‌ನಲ್ಲಿನ ಮುಸ್ಲಿಮರ ವಿರುದ್ಧದ ಚೀನ ಕಿರುಕುಳದ ಬಗ್ಗೆ ಆತಂಕವನ್ನೂ ಭಾರತ ವ್ಯಕ್ತಪಡಿಸಿತ್ತು. ಅಲ್ಲದೆ ಈ ಜನರ ಹಕ್ಕುಗಳ ಬಗ್ಗೆ ಮಾತನಾಡಿತ್ತು. ಯಾವುದೇ ದೇಶದಲ್ಲೇ ಆಗಲಿ ನಾಗರಿಕರಿಗೆ ಸುಖಾಸುಮ್ಮನೆ ಕಿರುಕುಳ ನೀಡುವುದು ತರವಲ್ಲ ಎಂದೂ ಹೇಳಿತ್ತು. ಈ ಸಂಬಂಧ ಚೀನ ಸ್ಪಷ್ಟನೆಯನ್ನು ನೀಡಿದ್ದು, ವುಯಿಗರ್‌ ಮುಸ್ಲಿಮರ ವಿರುದ್ಧದ ಕಾರ್ಯಾಚರಣೆ ಭಯೋತ್ಪಾದನೆಯ ಒಂದು ಭಾಗ ಎಂದು ಹೇಳಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ನಮಗೆ ಗೊತ್ತಾಗಿದೆ. ಆದರೆ ಕ್ಸಿಂಗಿಯಾಂಗ್‌ನ ವುಯಿಗರ್‌ ಮುಸಲ್ಮಾನರ ಹಿಂಸಾತ್ಮಕ ಉಗ್ರವಾದ, ಮೂಲಭೂತವಾದ ಮತ್ತು ಪ್ರತ್ಯೇಕತಾವಾದವನ್ನು ತಡೆಯುವ ಸಲುವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ. ವಿಚಿತ್ರವೆಂದರೆ ಭಾರತ ಈ ಕುರಿತ ವಿಶ್ವಸಂಸ್ಥೆಯಲ್ಲಿನ ಚರ್ಚೆಯ ಮತದಿಂದ ಗೈರಾಗಿದ್ದ ವಿಚಾರ ಸಂಬಂಧ ಯಾವುದೇ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದೆ.

ವುಯಿಗರ್‌ ಮುಸಲ್ಮಾನರ ವಿಚಾರದಲ್ಲಿ ಚೀನ ಅನುಸರಿಸುತ್ತಿರುವ ಧೋರಣೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಅನುಸರಿಸುತ್ತಿರುವ ನೀತಿಗೂ ಅಜಗಜಾಂತರವಿದೆ. ವಿಶ್ವಸಂಸ್ಥೆ, ಅಮೆರಿಕ, ಭಾರತವು ಸೇರಿದಂತೆ ಹಲವಾರು ದೇಶಗಳು ಪಾಕ್‌ನಲ್ಲಿನ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಶ್ರಮ ಪಡುತ್ತಿವೆ. ಆದರೆ ಭದ್ರತಾ ಮಂಡಳಿಯಲ್ಲಿ ವಿಟೋ ಅಧಿಕಾರ ಹೊಂದಿರುವ ಚೀನ, ಇದಕ್ಕೆ ಮೊದಲಿನಿಂದಲೂ ಅಡ್ಡಗಾಲು ಹಾಕಿಕೊಂಡೇ ಬರುತ್ತಿದೆ. ಅಲ್ಲದೆ, ಪಾಕಿಸ್ಥಾನದ ಉಗ್ರರು ನಡೆಸುತ್ತಿರುವ ಹಿಂಸಾಕೃತ್ಯಗಳು ಹೊರಜಗತ್ತಿಗೆ ಕಾಣುವಂತೆ ಇದ್ದರೂ, ಇಂಥ ಉಗ್ರ ಸಂಘಟನೆಗಳ ವಿರುದ್ಧ ಸಾಕ್ಷ್ಯ ಕೇಳುವಂಥ ಕೆಲಸವನ್ನೂ ಮಾಡುತ್ತಿದೆ. ಹೀಗಾಗಿ ಚೀನದ ಈ ಇಬ್ಬಗೆ ನೀತಿ ಸರಿಯಾದ ಕ್ರಮವೇ ಅಲ್ಲ ಎಂಬುದನ್ನು ಖಂಡತುಂಡವಾಗಿ ಹೇಳಬೇಕಾಗುತ್ತದೆ.

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.