ಶಾಪಿಂಗ್‌ ಮಾಲ್‌ಗ‌ಳು ಖಾಲಿ ಖಾಲಿ


Team Udayavani, Oct 10, 2022, 12:50 PM IST

tdy-2

ಕೊರೊನಾ ಸಾಂಕ್ರಾಮಿಕದ ಬಳಿಕ ಇ-ಶಾಪಿಂಗ್‌ ಕಡೆಗೆ ಮುಖಮಾಡಿರುವ ರಾಜಧಾನಿ ನಾಗರಿಕರು ಮಾಲ್‌ ಸಂಸ್ಕೃತಿಯಿಂದ ಹೊರಬರುತ್ತಿದ್ದಾರೆ. ಹೀಗಾಗಿ ಮಾಲ್‌ ಗಳಲ್ಲಿ ವ್ಯಾಪಾರ- ವ್ಯವಹಾರ ಕಡಿಮೆಯಾಗಿ ಮಳಿಗೆಗಳು ಖಾಲಿಯಾಗುತ್ತಿವೆ. ಅಲ್ಲದೆ, ಒಟಿಟಿ ಫ್ಲಾಟ್‌ ಫಾರಂಗಳ ಬಳಕೆ ಹೆಚ್ಚುತ್ತಿದ್ದು, ಮಾಲ್‌ಗ‌ಳಲ್ಲಿರುವ ಮಲ್ಟಿಫ್ಲೆಕ್ಸ್‌ಗಳಿಗೂ ಜನ ಹೋಗುವುದು ಕಡಿಮೆಯಾಗಿದೆ. ನಗರವಾಸಿಗಳಿಗೆ ದಿನಸಿ ವಸ್ತುಗಳಿಂದ ಆಹಾರದ ವರೆಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳು ತಮ್ಮ ಮನೆ ಬಾಗಿಲಲ್ಲೆ ಸಿಗುವ ವ್ಯವಸ್ಥೆ ಬಂದಿದೆ. ಹೀಗಾಗಿ ಮಾಲ್‌ಗ‌ಳತ್ತ ಬೆಂಗಳೂರಿಗರು ಚಿತ್ತ ಹರಿಸುವುದು ಕಡಿಮೆ ಮಾಡಿದ್ದಾರೆ. ಈ ಕುರಿತು ಒಂದು ರೌಂಡಪ್‌ ಇಂದಿನ ಸುದ್ದಿ ಸುತ್ತಾಟದಲ್ಲಿ.

ಬೆಂಗಳೂರು: ರಜಾ ದಿನಗಳು ಬಂತೆಂದರೆ ಶಾಪಿಂಗ್‌ ಮಾಲ್‌ಗ‌ಳಲ್ಲೇ ಕಾಲ ಕಳೆಯುತ್ತಿದ್ದ ಜನ ಈಗ ಕಣ್ಮರೆಯಾಗಿದ್ದಾರೆ. ಬಟ್ಟೆ, ಪಾದರಕ್ಷೆ, ಸಿನೆಮಾ ವೀಕ್ಷಣೆ ಹೀಗೆ ಪ್ರತಿಯೊಂದಕ್ಕೂ ಮಾಲ್‌ಗ‌ಳನ್ನೇ ನೆಚ್ಚಿನ ತಾಣವಾಗಿಸಿಕೊಂಡಿದ್ದ ಜನ ಇದೀಗ ಮಾಲ್‌ ಸಂಸ್ಕೃತಿಯಿಂದ ವಿಮುಕ್ತರಾಗುತ್ತಿದ್ದಾರೆ. ಹೀಗಾಗಿಯೇ ಪ್ರಮುಖ ಶಾಪಿಂಗ್‌ ಮಾಲ್‌ಗ‌ಳಲ್ಲಿಯೇ ಮಳಿಗೆಗಳು ಖಾಲಿಯಾಗಿದ್ದು, ನಗರ ಶಾಪಿಂಗ್‌ ಮಾಲ್‌ಗ‌ಳಲ್ಲಿ ಶೇ. 15.6 ಮಳಿಗೆಗಳು ಖಾಲಿಯಿವೆ. ಒಂದೇ ಸೂರಿನಲ್ಲಿ ಎಲ್ಲ ವಸ್ತುಗಳನ್ನು ಖರೀದಿಸುವುದರ ಜತೆಗೆ ತಮ್ಮ ನೆಚ್ಚಿನವರೊಂದಿಗೆ ಸ್ವಲ್ಪ ಸಮಯ ಕಳೆಯುವ ಉದ್ದೇಶದಿಂದ ಜನರು ಶಾಪಿಂಗ್‌ ಮಾಲ್‌ಗ‌ಳತ್ತ ಬರುತ್ತಿದ್ದರು. ಆದರೆ 2020ರಲ್ಲಿ ಕೊರೊನಾ ಸೋಂಕು ಸೃಷ್ಟಿಸಿದ ಆತಂಕ, ಲಾಕ್‌ಡೌನ್‌ ಸೇರಿ ಇನ್ನಿತರ ಕ್ರಮಗಳಿಂದಾಗಿ ಜನರು ಮನೆಯಿಂದ ಹೊರಬರದ ಮನಸ್ಥಿತಿಗೆ ತಲುಪಿದ್ದಾರೆ. ಅದರಲ್ಲೂ 2020 ಮತ್ತು 2021ರಲ್ಲಿನ ಕಾಣಿಸಿಕೊಂಡ ಕೊರೊನಾ ಎರಡೂ ಅಲೆಗಳಿಂದಾಗಿ ಜನರು ಬೆಂಗಳೂರನ್ನೇ ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ನಂತರವೂ ನಗರದ ಶಾಪಿಂಗ್‌ ಮಾಲ್‌ಗ‌ಳಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. ಅದರ ಜತೆಗೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಇ-ಕಾಮರ್ಸ್‌ ಕ್ಷೇತ್ರ, ಒಟಿಟಿಯಂತಹ ವಿನೂ ತನ ವೇದಿಕೆಗಳ ಸೃಷ್ಟಿಯಿಂ ದಾಗಿ ಬೆಂಗಳೂರಿನ ಶಾಪಿಂಗ್‌ ಮಾಲ್‌ಗ‌ಳಲ್ಲಿನ ಮಳಿಗೆಗಳು ಖಾಲಿಯಾಗುವಂತಾಗಿದೆ.

ಶೇ. 15.6 ಖಾಲಿ: ದೇಶದಲ್ಲಿ ಸದ್ಯ 271 ಶಾಪಿಂಗ್‌ ಮಾಲ್‌ಗ‌ಳು ಕಾರ್ಯನಿರ್ವಹಿಸು ತ್ತಿವೆ. ಅದರಲ್ಲಿ ಬೆಂಗಳೂರಿನಲ್ಲಿಯೇ 40ಕ್ಕೂ ಹೆಚ್ಚಿನ ಶಾಪಿಂಗ್‌ ಮಾಲ್‌ಗ‌ಳಿವೆ. ಅದರಲ್ಲಿ 36 ಮಿಲಿಯನ್‌ ಚದರ ಅಡಿ ವಿಸ್ತೀರ್ಣದ 15ಕ್ಕೂ ಹೆಚ್ಚಿನ ಮಳಿಗೆಗಳಿವೆ. ಉಳಿದಂತೆ 29.1 ಮಿಲಿಯನ್‌ ಚದರ ಅಡಿ ವಿಸ್ತೀರ್ಣದ 20ಕ್ಕೂ ಹೆಚ್ಚು ಹಾಗೂ 27.8 ಚದರ ಅಡಿ ವಿಸ್ತೀರ್ಣದ ಸುಮಾರು 5ಕ್ಕೂ ಹೆಚ್ಚಿನ ಮಳಿಗೆಗಳಿವೆ. ಈ ಶಾಪಿಂಗ್‌ ಮಾಲ್‌ಗ‌ಳಲ್ಲಿ ಶೇ. 15.6 ಮಳಿಗೆಗಳು ಖಾಲಿಯಿವೆ. ಅಂದರೆ 1 ಸಾವಿರಕ್ಕೂ ಹೆಚ್ಚಿನ ಮಳಿಗೆಗಳು ಖಾಲಿಯಿದ್ದು, ವ್ಯಾಪಾರಿಗಳು ಇಲ್ಲದಂತಾಗಿದೆ.

ಘೋಸ್ಟ್‌ ಮಾಲ್‌ಗ‌ಳ ಸೃಷ್ಟಿ : ವ್ಯಾಪಾರಿಗಳು ವಿಮುಖರಾಗಿದ್ದು, ಜನರು ಶಾಪಿಂಗ್‌ ಮಾಲ್‌ಗ‌ಳತ್ತ ನಿರಾಸಕ್ತಿ ಹೊಂದಿದ ಪರಿಣಾಮ ಕಳೆದ ಎರಡೂ ವರ್ಷಗಳಿಂದ ನಗರದಲ್ಲಿ ಘೋಸ್ಟ್‌ ಮಾಲ್‌ (ಖಾಲಿ ಮಾಲ್‌ ಗಳು)ಗಳ ಸೃಷ್ಟಿಯಲ್ಲಿ ಏರಿಕೆಯಾಗಿದೆ. ದೇಶದ ಖಾಲಿ ಮಳಿಗೆಗಳ ಪೈಕಿ ಬೆಂಗಳೂರಿ ಶಾಪಿಂಗ್‌ ಮಾಲ್‌ ಗಳಲ್ಲಿಯೇ ಶೇ. 15.6 ಮಳಿಗೆಗಳು ಖಾಲಿಯಾಗುವಂತಾಗಿದೆ. 2021ರ ಜೂನ್‌ ನಂತರ ಕೊರೊನಾ ಪರಿಣಾಮ ಇಳಿಕೆಯಾದ ನಂತರದಿಂದಲೂ ಶಾಪಿಂಗ್‌ ಮಾಲ್‌ಗ‌ಳಿಗೆ ಬರುವ ಜನರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಇದರಿಂದಾಗಿ ಮಳಿಗೆಗಳ ಭರ್ತಿಯಲ್ಲಿ ಏರಿಕೆ ಕಾಣದೆ ಮಾಲ್‌ಗ‌ಳು ಭಣಗುಡುವಂತಾಗಿದೆ.

ಮಲ್ಟಿಪ್ಲೆಕ್ಸ್‌ಗಳಿಗೂ ಪ್ರೇಕ್ಷಕರ ಬರ: ಬೆಂಗಳೂರಿನಲ್ಲಿ ಶಾಪಿಂಗ್‌ ಮಾಲ್‌ಗ‌ಳಲ್ಲಿ 50ಕ್ಕೂ ಹೆಚ್ಚಿನ ಮಲ್ಟಿಪ್ಲೆಕ್‌ ಥಿಯೇಟರ್‌ಗಳಿವೆ. ಈ ಮಲ್ಟಿಪ್ಲೆಕ್ಸ್‌ಗಳು ಆರಂಭವಾದ ನಂತರದಿಂದ ನಗರದಲ್ಲಿನ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಿಗೆ ಭಾರಿ ಪ್ರಮಾಣದಲ್ಲಿ ಹೊಡೆತ ಬಿದ್ದಂತಾಗಿದೆ. ಹಲವು ಚಿತ್ರಮಂದಿರಗಳು ಈಗಾಗಲೆ ಮುಚ್ಚಿವೆ. ಆದರೀಗ ಒಟಿಟಿ ಪ್ಲಾಟ್‌ಫಾರ್ಮ್ ಶಾಪಿಂಗ್‌ ಮಾಲ್‌ಗ‌ಳಲ್ಲಿನ ಮಲ್ಟಿಪ್ಲೆಕ್ಸ್‌ಗಳಿಗೆ ಹೊಡೆತ ಕೊಡುತ್ತಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳು ಗರಿಷ್ಠ ಒಂದು ತಿಂಗಳೊಳಗಾಗಿ ಒಟಿಟಿ ಆ್ಯಪ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಇದರಿಂದಾಗಿ ಜನರು ಮಲ್ಟಿಪ್ಲೆಕ್ಸ್‌ಗಳಿಗೆ ಬರುವುದೂ ಕಡಿಮೆಯಾಗಿದೆ. ಇದು ಹಲವು ಮಲ್ಟಿಪ್ಲೆಕ್ಸ್‌ಗಳು ಮುಚ್ಚುವುದಕ್ಕೆ ನಾಂದಿ ಹಾಡಿದೆ. ಒಂದು ವರದಿಯ ಪ್ರಕಾರ ಬೆಂಗಳೂರಿನಲ್ಲಿ 87 ಲಕ್ಷ ಜನರು ಅಮೆಜಾನ್‌, ಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌ ಸೇರಿ ಇನ್ನಿತರ ಒಟಿಟಿ ಆ್ಯಪ್‌ನ ಬಳಕೆದಾರರಾಗಿದ್ದಾರೆ.

ನಗರ ಖಾಲಿ ಮಾಡಿದ ಜನರು : 2020ರ ಮಾರ್ಚ್‌ ವೇಳೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾದ ನಂತರ ಲಾಕ್‌ಡೌನ್‌ ಘೋಷಿಸಲಾಯಿತು. ಅದರಿಂದ ಎಲ್ಲ ವ್ಯಾಪಾರ ವಹಿವಾಟುಗಳು ಸ್ಥಗಿತಗೊಳ್ಳುವಂತಾಯಿತು. ಜತೆಗೆ ಕೊರೊನಾ ಭೀತಿ ಹಾಗೂ ಜೀವನ ಸಾಗಿಸುವುದು ಕಷ್ಟ ಎನ್ನುವಂತಾದ ಕಾರಣ ಜನರು ಬೆಂಗಳೂರನ್ನು ತೊರೆಯಲಾರಂಭಿಸಿದರು. 1.20 ಕೋಟಿ ಜನಸಂಖ್ಯೆಯಿದ್ದ ಬೆಂಗಳೂರಿನಲ್ಲಿ ಕೊರೊನಾ ಮೊದಲ ಲಾಕ್‌ಡೌನ್‌ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚಿನ ಜನರು ನಗರ ತೊರೆದು ತಮ್ಮ ಊರುಗಳಿಗೆ ತೆರಳಿದರು. ಅದೇ ರೀತಿ 2ನೇ ಲಾಕ್‌ಡೌನ್‌ ಅವಧಿಯಲ್ಲೂ 10 ಲಕ್ಷಕ್ಕೂ ಹೆಚ್ಚಿನ ಜನ ಮಹಾನಗರವನ್ನು ತೊರೆದರು. ಇದು ನಗರದ ಶಾಪಿಂಗ್‌ ಮಾಲ್‌ ಸೇರಿ ಎಲ್ಲ ರೀತಿಯ ವ್ಯಾಪಾರಕ್ಕೂ ಹೊಡೆತ ಬೀಳುವಂತಾಯಿತು.

ಕೊರೊನಾ:ವ್ಯಾಪಾರಕ್ಕೆ ಕುತ್ತು: 2020 ಮತ್ತು 2021ರ ಕೊರೊನಾ ಸೋಂಕು ಹಾಗೂ ಲಾಕ್‌ಡೌನ್‌ ಸೇರಿ ಇನ್ನಿತರ ಕ್ರಮಗಳಿಂದಾಗಿ ಬೆಂಗಳೂರಿನ ಹಲವು ಉದ್ಯಮಗಳಿಗೆ 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ನಷ್ಟವುಂಟಾಗಿದೆ. ಅದರಲ್ಲೂ ಶಾಪಿಂಗ್‌ ಮಾಲ್‌ ಸೇರಿ ಸಗಟು ವ್ಯಾಪಾರಕ್ಕೆ 50 ಸಾವಿರ ಕೋಟಿ ರೂ.ಗೂ ಹೆಚ್ಚಿನ ವ್ಯಾಪಾರ ನಷ್ಟವುಂಟಾಗುವಂತಾಗಿತ್ತು. ಎರಡೂ ವರ್ಷಗಳಲ್ಲಿ 6 ತಿಂಗಳಿಗೂ ಹೆಚ್ಚಿನ ಕಾಲ ಶಾಪಿಂಗ್‌ ಮಾಲ್‌ ಗಳು ಕಾರ್ಯನಿರ್ವಹಿಸದ ಕಾರಣ ಮಳಿಗೆದಾರರು ತಮ್ಮ ಠೇವಣಿ ಹಿಂಪಡೆದು ಮಳಿಗೆ ಖಾಲಿ ಮಾಡಿದರು. 2020 ಮತ್ತು 2021ರಲ್ಲಿಯೇ ಶೇ. 70ಕ್ಕೂ ಹೆಚ್ಚಿನ ಮಳಿಗೆದಾರರು ವ್ಯಾಪಾರದಿಂದ ವಿಮುಖರಾ ಗುವಂತಾಗಿತ್ತು.

ಆನ್‌ಲೈನ್‌ ವ್ಯಾಪಾರದಲ್ಲಿ ಏರಿಕೆ : ಶಾಪಿಂಗ್‌ ಮಾಲ್‌ ಸೇರಿ ಸಗಟು ವ್ಯಾಪಾರಗಳತ್ತ ಜನರು ಮುಖ ಮಾಡದಿರುವ ಇನ್ನೊಂದು ಪ್ರಮುಖ ಕಾರಣ ಆನ್‌ಲೈನ್‌ ಶಾಪಿಂಗ್‌(ಇ ಕಾಮರ್ಸ್‌) ಕಡೆಗೆ ಗ್ರಾಹಕರು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು. ಬಟ್ಟೆ, ಪಾದರಕ್ಷೆಗಳಿಂದ ಎಲೆಕ್ಟ್ರಾನಿಕ್‌ ವಸ್ತುಗಳು, ತರಕಾರಿ ಹಣ್ಣುಗಳಿಂದ ಸಿದ್ಧ ಆಹಾರಗಳನ್ನೆಲ್ಲವನ್ನು ಕುಳಿತಲ್ಲಿಯೇ ತರಿಸಿಕೊಳ್ಳಬಹುದು. ಹೀಗಾಗಿ ಜನರು ಸಾಲುಸಾಲು ರಜೆಗಳಿದ್ದರೂ ಮನೆಯಿಂದ ಹೊರಬರದೆ ಮನೆಯಲ್ಲಿ ಕುಳಿತೇ ಎಲ್ಲವನ್ನೂ ತರಿಸಿಕೊಳ್ಳುತ್ತಾರೆ. ಅದರ ಜತೆಗೆ ಹಬ್ಬಗಳು ಸೇರಿ ಇನ್ನಿತರ ಪ್ರಮುಖ ದಿನಗಳಲ್ಲಿ ವಸ್ತುಗಳ ಮೇಲೆ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ. ಹಾಗೆಯೇ, ಕಳೆದ ಐದಾರು ವರ್ಷಗಳಿಂದ ಸ್ಮಾರ್ಟ್‌ಫೋನ್‌ ಮತ್ತು ಅಂತರ್ಜಾಲ ಬಳಕೆಯು ಹೆಚ್ಚಾಗಿದೆ. ಶೇ. 95ಕ್ಕೂ ಹೆಚ್ಚಿನ ಮಂದಿಯ ಬಳಿ ಸ್ಮಾರ್ಟ್‌ ಫೋನ್‌ಗಳಿವೆ ಹಾಗೂ ಕಡಿಮೆ ಬೆಲೆಗೆ ಅಂತರ್ಜಾಲ ಸೇವೆ ಪಡೆಯಬಹುದಾಗಿದೆ. ಇದರಿಂದಾಗಿ ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ ಬಳಸುವುದು ಸುಲಭವಾಗಿದೆ. 2021ರಲ್ಲಿ 52 ಬಿಲಿಯನ್‌ ಡಾಲರ್‌ನಷ್ಟಿದ್ದ ಆನ್‌ಲೈನ್‌ ಶಾಪಿಂಗ್‌ ವಹಿವಾಟು 2020ರ ವೇಳೆಗೆ 68 ಬಿಲಿಯನ್‌ ಡಾಲರ್‌ಗೆ ಎರಿಕೆಯಾಗಿದೆ. ಅದನ್ನು ಗಮನಿಸಿದರೆ ಒಂದು ವರ್ಷದಲ್ಲೇ ಶೇ. 30 ಹೆಚ್ಚಾದಂತಾಗಿದೆ. ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆಯ ನಂತರ ಆನ್‌ ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾ ಗಿದೆ. ಈ ಕಾರಣದಿಂದಲೇ ನಗರದಲ್ಲಿ ವೇರ್‌ಹೌಸ್‌ ಮತ್ತು ಲಾಜಿಸ್ಟಿಕ್ಸ್‌ ಉದ್ಯಮವು ಲಾಭದಾಯಕವಾಗಿ ಪರಿಣಮಿಸಿದೆ.

2-3ನೇ ಹಂತದ ನಗರಗಳಲ್ಲಿ ಶಾಪಿಂಗ್‌ ಮಾಲ್‌ ಸಂಸ್ಕೃತಿ : ಕರೊನಾ ಸೋಂಕಿನ ತೀವ್ರತೆ ಹೆಚ್ಚಿದ್ದಾಗ ಲಕ್ಷಾಂತರ ಜನರು ಬೆಂಗಳೂರು ತೊರೆದು ಎರಡು ಮತ್ತು ಮೂರನೇ ಹಂತದ ನಗರಗಳತ್ತ ಗುಳೆ ಹೋಗಿದ್ದರು. ಅವರಲ್ಲಿ ಶೇ. 50 ಜನರಷ್ಟೇ ಮಹಾನಗರಕ್ಕೆ ವಾಪಾಸು ಬಂದಿದ್ದಾರೆ. ಹೀಗೆ 2 ಮತ್ತು 3ನೇ ಹಂತದ ನಗರಗಳಲ್ಲಿ ಜನರ ಸಂಖ್ಯೆ ಹೆಚ್ಚಾದ ಪರಿಣಾಮ ಆ ನಗರಗಳಲ್ಲಿ ಶಾಪಿಂಗ್‌ ಮಾಲ್‌ಗ‌ಳ ಸಂಖ್ಯೆ ಹೆಚ್ಚಾಗಿದೆ.

ಕೊರೊನಾ ಕಾರಣದಿಂದಾಗಿ ಬೆಂಗಳೂರುನ ಬಹುತೇಕ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಅದರಲ್ಲೂ ಶಾಪಿಂಗ್‌ ಮಾಲ್‌ ಗಳಿಗೂ ನಷ್ಟದ ಪರಿಣಾಮ ಉಂಟಾಗಿದೆ. ಇದು ಅಲ್ಪಕಾಲದ ಪರಿಣಾಮವಾಗಿದ್ದು, ಶೀಘ್ರದಲ್ಲಿ ಮಾರುಕಟ್ಟೆ ಅದರಿಂದ ಹೊರಬರಲಿದೆ. ಜನರು ಕೂಡ ಶಾಪಿಂಗ್‌ ಮಾಲ್‌ಗ‌ಳತ್ತ ಬರಲಿದ್ದಾರೆ. – ಭಾಸ್ಕರ್‌ ಟಿ.ನಾಗೇಂದ್ರಪ್ಪ, ಕ್ರೆಡಾಯ್‌ ಅಧ್ಯಕ

 

– ಗಿರೀಶ್‌ ಗರಗ

ಟಾಪ್ ನ್ಯೂಸ್

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

1-vijayendra

CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ

vijayapura

Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ

Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ

3

Supplier: ಬೇಗ ಊಟ ತನ್ನಿ ಎಂದಿದ್ದಕ್ಕೆ ಆಶ್ಲೀಲ ಸನ್ನೆ ತೋರಿದ ಸಪ್ಲ್ಯೈಯರ್; ವೈರಲ್‌

ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್‌ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು

ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್‌ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು

MUST WATCH

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

ಹೊಸ ಸೇರ್ಪಡೆ

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.