ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಗುರುಸಿದ್ದಪ್ಪ ಹಡಪದ

ಅಪ್ಪಟ ಗ್ರಾಮೀಣದಲ್ಲಿ ಬೆಳೆದು ಬಂದ ಪ್ರತಿಭೆ; ಸರ್ಕಾರದ ಸಹಾಯಕ್ಕಾಗಿ ಮನವಿ

Team Udayavani, Oct 10, 2022, 5:02 PM IST

16

ಮುಂಡಗೋಡ: ನಡುವೆಯೂ ತಾಲೂಕಿನ ಪುಟ್ಟ ಗ್ರಾಮದ ಯುವಕನೊಬ ತನ್ನ ಆರ್ಥಿಕ ಸಂಕಷ್ಟದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಶಿಪ್‌ ಸ್ಪರ್ಧೆಯಲ್ಲಿ ಬಂಗಾದ ಪದಕ ಪಡೆದು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾನೆ.

ಬಾಚಣಕಿ ಗ್ರಾ.ಪಂ ವ್ಯಾಪ್ತಿಯ ಅರಶಿಣಗೇರಿ ಗ್ರಾಮದ ಗುರುಸಿದ್ದಪ್ಪ ಚನ್ನಪ್ಪ ಹಡಪದ ಜೈಪುರದಲ್ಲಿ ನಡೆದ ಪ್ರಸಕ್ತ ಸಾಲಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನ 66ಕೆ.ಜಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿದ್ದಾನೆ.

ಗುರುಸಿದ್ದಪ್ಪ ಬಾಲ್ಯದಿಂದಲೂ ಕುಸ್ತಿಯಲ್ಲಿ ಆಸಕ್ತಿ ಹೊಂದಿದ್ದ. ಈತ 1 ರಿಂದ 4 ನೇ ತರಗತಿವರೆಗೂ ಅರಶಿಣಗೇರಿಯಲ್ಲಿ ವ್ಯಾಸಂಗ ಮಾಡಿ ನಂತರ ದಾವಣಗೆರೆಯಲ್ಲಿ ಎಸ್‌ಎಸ್‌ಎಲ್‌ಸಿ ಓದಿದ್ದಾರೆ. ಇವರ ಅಜ್ಜ, ತಂದೆ ಕುಸ್ತಿಪಟುವಾಗಿದ್ದರು. ಇವರ ತಂದೆ ಚನ್ನಪ್ಪ ಹಡಪದ ರಾಜ್ಯ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿ ಗೆದ್ದು ಹೆಸರು ವಾಸಿಯಾಗಿದ್ದರು. ಈಗ ಮಗ ಗುರುಸಿದ್ದಪ್ಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ.

ತಂದೆಯಿಂದ ಕುಸ್ತಿ ಕಲಿತಿದ್ದೇನೆ. ದಾವಣಗೆರೆಯಲ್ಲಿ ವಿದ್ಯಾಭ್ಯಾಸದ ಜತೆ ಕುಸ್ತಿ ತರಬೇತಿ ಪಡೆದಿದ್ದೆ. ನಂತರ ಧಾರವಾಡದಲ್ಲಿ ತರಬೇತಿ ಪಡೆದಿದ್ದೇನೆ. ಆ ವೇಳೆ ನ್ಯಾಸರ್ಗಿ ಗ್ರಾಮದ ಜಗದೀಶ ಕುರಬರ ಎಂಬವರು ಸಹಾಯ ಮಾಡಿದ್ದರು. ಸದ್ಯ ಧಾರವಾಡದಲ್ಲಿ ಏಳೆಂಟು ಯುವಕರಿಗೆ ಕುಸ್ತಿ ತರಬೇತಿ ನೀಡುತ್ತಿದ್ದೇನೆ. ನನಗೆ ಕೊನೆ ಅವಕಾಶ ಇದ್ದ ಕಾರಣ ಈ ಬಾರಿ ಸ್ಪರ್ಧೆಯಲ್ಲಿ ಭಾಗಿಯಾಗಿ ಬಂಗಾರ ಪದಕ ಗೆದ್ದು ಮುಂದಿನ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದೇನೆ. ದುಬೈ ಇಲ್ಲವೆ ಮಲೇಷಿಯಾದಲ್ಲಿ ಪಂದ್ಯಾವಳಿ ನಡೆಯುತ್ತದೆ. ನಮ್ಮ ತಂದೆ ಮಾಜಿ ಕುಸ್ತಿಪಟು. ಅವರಿಗೆ ಸರಕಾರದಿಂದ ಗೌರವ ಧನ ಬರುತ್ತಿದೆ. ನಮಗೆ ಯಾವುದೇ ರೀತಿಯ ಸಹಾಯ ಬರಲ್ಲ. ಆರ್ಥಿಕ ಸಮಸ್ಯೆ ನಡುವೆ ಕುಸ್ತಿ ಆಡುತ್ತಿದ್ದೇನೆ. ಸರಕಾರದಿಂದ ಸಹಾಯ ಮಾಡಿದರೆ ನಮ್ಮಂತ ಗ್ರಾಮೀಣ ಪ್ರತಿಭೆಗಳು ಇನ್ನು ಹೆಚ್ಚಿನ ಸಾಧನೆ ಮಾಡಬಹುದು ಎನ್ನುತ್ತಾರೆ ಗುರುಸಿದ್ದಪ್ಪ ಹಡಪದ.

ಗುರುಸಿದ್ದಪ್ಪ ಅವರು ದಸರಾ ಮೇಯರ ಕಪ್‌, ರಾಜ್ಯ ಒಲಿಪಿಂಕ್ಸ್‌ನಲ್ಲಿ ಬಂಗಾರದ ಪದಕ, ಆಲ್‌ ಇಂಡಿಯಾ ಜಮಖಂಡಿ ಚಾಂಪಿಯನ್‌ ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಜೈಪುರದಲ್ಲಿ ನಡೆದ ಸಿನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ಪದಕ ಪಡೆದಿದ್ದಾರೆ. ಹೀಗೆ ಹಲವಾರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಸರಕಾರದಿಂದ ಸಿಗಬೇಕಾದ ಸಹಾಯ ಮಾತ್ರ ಸಿಕ್ಕಿಲ್ಲ.

ಈತನು ಅಪ್ಪಟ ಗ್ರಾಮೀಣ ಪ್ರತಿಭೆ. ಈ ಹಿಂದೆ ತಾಲೂಕಿನಲ್ಲಿ ನಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುತ್ತಿದ್ದ. ಆರ್ಥಿಕ ಸಂಕಷ್ಟದ ನಡುವೆಯೂ ಕಷ್ಟಪಟ್ಟು ಶ್ರಮ ಹಾಕಿ ಸಾಧನೆ ಮಾಡಿದ್ದಾನೆ. ಕುಸ್ತಿಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿರುವುದು ಹೆಮ್ಮೆಯ ವಿಷಯ.  –ಎಸ್‌.ಬಿ. ಮಲ್ಲಡದ, ಅರಶಿಣಗೇರಿ ಶಿಕ್ಷಿಕ.

ಬಡತನದಲ್ಲಿಯೇ ಕುಸ್ತಿ ಕಲಿತಿದ್ದೇವೆ. ನಮ್ಮ ಕುಟುಂಬದಲ್ಲಿ ಕುಸ್ತಿ ರಕ್ತಗತವಾಗಿದೆ. ನಾನೂ ರಾಜ್ಯ ಪ್ರಶಸ್ತಿ ಗೆದ್ದಿದ್ದೇನೆ. ಈಗ ನನ್ನ ಮಗ ರಾಷ್ಟ್ರೀಯ ಮಟ್ಟಡದಲ್ಲಿ ಬಂಗಾರದ ಪದಕ ಗೆದ್ದಿದ್ದಾನೆ. ಇತ್ತೀಚೆಗೆ ನನ್ನ ಮೊಮ್ಮಗಳು ಗದಗನಲ್ಲಿ 33ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಆದರೆ ಸರಕಾರದಿಂದ ನನಗೆ ಗೌರವಧನ ಬರುತ್ತದೆ. ಹೊರೆತು, ಯಾವುದೇ ಸಹಾಯವಾಗಲಿ ಸೌಲಭ್ಯ ಒದಗಿಸಿಲ್ಲ. ಆರ್ಥಿಕ ತೊಂದರೆಯಲ್ಲಿದ್ದೇವೆ. ಮಗನಿಗೆ ಗ್ರಾಮದ ಮತ್ತು ಪಕ್ಕದ ಹಿರಿಯರು ಸೇರಿ ಆರ್ಥಿಕ ಸಹಾಯ ಮಾಡಿ ಸ್ಪರ್ಧೆಗೆ ಕಳಿಸಿದ್ದರು. ಆದರೆ ಇವರ ಆಸೆ ನಿರಾಸೆ ಮಾಡದೆ ಬಂಗಾರದ ಪದಕ ಗೆದ್ದು ಗ್ರಾಮದ ಕೀರ್ತಿ ತಂದಿದ್ದಾನೆ.  -ಚನ್ನಪ್ಪ ಹಡಪದ, ಮಾಜಿ ಕುಸ್ತಿಪಟು.

ಮುನೇಶ ತಳವಾರ

ಟಾಪ್ ನ್ಯೂಸ್

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

Pro Kabaddi: ಒಂದಂಕದಿಂದ ಸೋತ ಬೆಂಗಳೂರು ಬುಲ್ಸ್‌

Pro Kabaddi: ಒಂದಂಕದಿಂದ ಸೋತ ಬೆಂಗಳೂರು ಬುಲ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.