ಬಸವ ಮಹಾಮನೆಯಲ್ಲಿ ಕಲ್ಯಾಣ ಪರ್ವ; ಡಾ| ಉಮೇಶ ಜಾಧವ
ಈ ಧರ್ಮ ವಿಶ್ವವ್ಯಾಪ್ತಿಯಲ್ಲಿ ಪಸರಿಸುವ ಕೆಲಸ ನಿರಂತರವಾಗಿ ನಡೆಯಬೇಕು
Team Udayavani, Oct 10, 2022, 5:43 PM IST
ಬಸವಕಲ್ಯಾಣ: ಶರಣರು ಕಾಯಕಕ್ಕೆ ಮಹತ್ವ ನೀಡಿ ದಾಸೋಹಕ್ಕೆ ಆದ್ಯತೆ ನೀಡಿದ ಭೂಮಿ ಇದಾಗಿದೆ. ಈ ನೆಲ ಶ್ರೇಷ್ಠ ನೆಲವಾಗಿದೆ. ಕಾಶಿ, ಅಯೋಧ್ಯೆ ಅಭಿವೃದ್ಧಿ ಹೊಂದಿದ ಸ್ಥಾನದಲ್ಲಿವೆ. ಬಸವಕಲ್ಯಾಣ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಬಸವ ಕಲ್ಯಾಣದಲ್ಲಿ ವಿಮಾನ ವಿಲ್ದಾಣ ಸ್ಥಾಪಿಸಿದರೆ ಜನರಿಗೆ ಇಲ್ಲಿಗೆ ಆಗಮಿಸಲು ಅನುಕೂಲವಾಗಲಿದೆ ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಹೇಳಿದರು.
ನಗರದ ಬಸವ ಮಹಾಮನೆಯಲ್ಲಿ ಬಸವ ಧರ್ಮ ಪೀಠದಿಂದ ಹಮ್ಮಿಕೊಂಡ 21ನೇ ಕಲ್ಯಾಣ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಈ ಧರ್ಮ ವಿಶ್ವವ್ಯಾಪ್ತಿಯಲ್ಲಿ ಪಸರಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಲಿಂಗಾಯತರಿಗೆ ಒಂದು ಕಡೆ ಕೂತು ಸಭೆ ನಡೆಸಲು ಹಾಗೂ ಕೂಡಲ ಸಂಗಮ ಹಾಗೂ ಬಸವಕಲ್ಯಾಣ ಲಿಂಗಾಯತರ ತೀರ್ಥ ಹಾಗೂ ಪವಿತ್ರ ಕ್ಷೇತ್ರಗಳಾಗಿವೆ ಎಂದು ತೋರಿಸಿಕೊಟ್ಟವರು ಲಿಂ| ಲಿಂಗಾನಂದ ಅಪ್ಪಾಜಿ ಹಾಗೂ ಲಿಂ| ಡಾ| ಮಾತೆ ಮಹಾದೇವಿ ಅವರಾಗಿದ್ದಾರೆ ಎಂದರು.
ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಲಿಂ| ಡಾ| ಮಾತೆ ಮಹಾದೇವಿ ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವ ಹಾಗೂ ಕೂಡಲ ಸಂಗಮದಲ್ಲಿ ಶರಣ ಮೇಳ ಕಾರ್ಯಕ್ರಮವು ಬಸವ ಧರ್ಮ ಪೀಠದಿಂದ ಆರಂಭಿಸಿದ್ದಾರೆ. ಹೀಗಾಗಿ ಮಾತಾಜಿ ಅವರು ಬದುಕಿದ್ದ ಸಮಯದಲ್ಲಿ ಕೈಗೊಂಡ ಕಾರ್ಯಗಳು ಅದ್ಭುತವಾಗಿವೆ. ಅವರು ಹೇಳಿದ ಹಾಗೆ ಸಮಾಜ ಸಾಗಿದರೆ ಸುಧಾರಣೆಗೊಂಡು ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುತ್ತದೆ ಎಂದರು. ಬೀದರನ ಶಾಹೀನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಅಬ್ದುಲ್ ಖದೀರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬೀದರನ ಉದ್ಯಮಿ ಗುರುನಾಥ ಕೊಳ್ಳೂರ ಸನ್ಮಾನ ಸ್ವೀಕರಿಸಿದರು. ಬೆಂಗಳೂರನ ಹಿರಿಯ ಸಾಹಿತಿ ಟಿ.ಆರ್. ಚಂದ್ರಶೇಖರಯ್ನಾ ಅವರು ಕಲ್ಯಾಣ- ಮಾನವೀಯತೆಯ ಪುಣ್ಯಕ್ಷೇತ್ರ ಎಂಬ ವಿಷಯದ ಮೇಲೆ ಅನುಭಾವ ನೀಡಿದರು.
ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಡಾ| ಮಾತೆ ಗಂಗಾದೇವಿ, ಹೈದ್ರಾಬಾದನ ಬಸವ ಮಂಟಪದ ಶ್ರೀ ಅನಿಮಿಶಾನಂದ ಸ್ವಾಮೀಜಿ, ಜಗದ್ಗುರು ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಕಲ್ಯಾಣ ಪರ್ವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ರಾಜೇಂದ್ರಕುಮಾರ ಗಂದಗೆ, ಸುರೇಶ ಸ್ವಾಮಿ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಅಶೋಕ ನಾಗರಾಳೆ, ಆರ್.ಜಿ. ಶಟಗಾರ, ಕಿರಣ
ಚಾಕೋತೆ, ಸಿದ್ರಾಮಪ್ಪ ಲದ್ದೆ, ವಿರೂಪಾಕ್ಷ ಗಾದಗಿ, ಬಸವರಾಜ ಪಾಟೀಲ ಶಿವಪೂರ ಮತ್ತಿತರರು ಇದ್ದರು. ಬೀದರನ ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ವಚನಗಳ ಹಾಡಿನ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.