ಪುತ್ತೂರು: ಉದಯವಾಣಿ ನವರೂಪ ಬಹುಮಾನ ವಿತರಣಾ ಸಮಾರಂಭ

ಬದುಕಿನಲ್ಲಿ ಹೊಸತನ ಮೂಡಿಸಿದ ನವರೂಪ : ವಂದನಾ ಶಂಕರ್‌

Team Udayavani, Oct 10, 2022, 6:38 PM IST

1-a

ಪುತ್ತೂರು: ಬೆಳಕು ದೇಹಕ್ಕೆ ಖುಷಿ ಭಾವ ತುಂಬಿ ಜೀವನೋತ್ಸಾಹ ತುಂಬುವ ವಸ್ತು. ಇವೆರೆಡು ಪ್ರತಿ ವ್ಯಕ್ತಿಯ ಬದುಕಿನ ಆವಶ್ಯಕತೆಯೂ ಹೌದು ಎಂದು ವಿವೇಕಾನಂದ ಕಾಲೇಜು ಆಫ್‌ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸಂಸ್ಥೆಯ ಅಡ್ಮಿಷನ್‌ ಮತ್ತು ಪ್ಲೇಸ್‌ಮೆಂಟ್‌ ವಿಭಾಗದ ಮುಖ್ಯಸ್ಥೆ ವಂದನಾ ಶಂಕರ್‌ ಹೇಳಿದರು.

ಪುತ್ತೂರು ಟೌನ್‌ಬ್ಯಾಂಕ್‌ ಸಭಾಂಗಣದಲ್ಲಿ ಸೋಮವಾರ ಉದಯವಾಣಿಯ ವತಿಯಿಂದ ಹಮ್ಮಿಕೊಂಡಿದ್ದ ‘ನವರೂಪ’ದ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಎಳೆಯ ಮಗುವಿನಿಂದ ಇಳಿ ವಯಸ್ಸಿನವರ ತನಕ ಬಣ್ಣ, ಬೆಳಕು ಬೀರುವ ಪರಿಣಾಮ ಆಗಾಧವಾದದು. ವೈಜ್ಞಾನಿಕ ದೃಷ್ಟಿಯಿಂದಲೂ ಬಣ್ಣ, ಬೆಳಕಿನ ಕಡೆಗೆ ಕಣ್ಣಿನ ದೃಷ್ಟಿ ಹರಿದಾಗ ಖುಷಿ ಮೂಡಿ ದೇಹದಲ್ಲಿ ನವೋಲ್ಲಾಸದ ಭಾವ ಮೂಡುತ್ತದೆ ಎನ್ನುವುದು ದೃಢಪಟ್ಟಿದೆ ಎಂದರು.

ಉದಯವಾಣಿಯ ನವರೂಪ ಮನಸ್ಸು ಮನಸ್ಸನ್ನು ಬೆಸೆಯಲು ದೊರೆತ ಒಂದು ಅವಕಾಶ. ಎಲ್ಲರೂ ಒಂದುಗೂಡಿ ಹೊಸತನಕ್ಕೆ ಒಗ್ಗಿಕೊಳ್ಳುವ ವೇದಿಕೆ. ನಾವು ಜತೆ ಜತೆಗಿದ್ದರೆ ಬದುಕು ಬಣ್ಣದಂತೆ ಹೊಳಪಿನಿಂದ ಕೂಡಿರುತ್ತದೆ ಎನ್ನುವ ಸಂದೇಶ ನೀಡುವ ಈ ನವರೂಪ ಅತ್ಯುತ್ತಮ ಚಟುವಟಿಕೆ ಎಂದವರು ಪ್ರಶಂಸಿದರು.

ಬಣ್ಣ ಬೆಳಕು ಎರಡು ಜತೆಗಿದ್ದರೆ ಬದುಕು ಬಂಗಾರ ಆಗುತ್ತದೆ. ನವರೂಪ ಪ್ರತಿ ದಿನವು ಪ್ರತಿಯೊಬ್ಬರ ಮುಖದಲ್ಲಿಯು ಉಲ್ಲಾಸ ತುಂಬಿದ ದಿನ. ಆಯಾ ದಿನ ಬಣ್ಣದ ಆಯ್ಕೆ, ಪೋಟೋ ತೆಗೆಯುವ ಉತ್ಸಾಹ ಹೀಗೆ ನವರೂಪ ದಿನವಿಡೀ ಸಂಭ್ರಮದ ಚಟುವಟಿಕೆಯ ರೂಪವಾಗಿಯು ಬದಲಾಗಿತ್ತು ಎಂದರು.

ಉದಯವಾಣಿ ಅಭಿಮಾನದ ಪತ್ರಿಕೆ
ನಾನು ಇಪ್ಪತ್ತಾರು ವರ್ಷದ ಹಿಂದೆ ಪುತ್ತೂರಿಗೆ ಕಾಲಿಟ್ಟಾಗ ನ್ಯೂಸ್‌ ಪೇಪರ್‌ ಅಂದರೆ ಉದಯವಾಣಿ ಎನ್ನುವ ಮಾತಿತ್ತು. ಅಂದಿನಿಂದ ಈ ತನಕವು ಉದಯವಾಣಿ ಓದುತ್ತಲೇ ಬಂದಿದ್ದೇನೆ. ಎಷ್ಟೇ ಪತ್ರಿಕೆಗಳನ್ನು ಓದಿದರೂ ಉದಯವಾಣಿ ಓದದೆ ಇದ್ದರೆ ಆ ದಿನ ಪತ್ರಿಕೆ ಓದು ಅಪೂರ್ಣ ಎಂದೆನಿಸುತ್ತದೆ. ಅಂತಹ ಗುಣಮಟ್ಟವನ್ನು ಪತ್ರಿಕೆ ಹೊಂದಿದ್ದು ಉದಯವಾಣಿ ನಮ್ಮ ಅಭಿಮಾನದ ಪತ್ರಿಕೆ ಎಂದು ವಂದನಾ ಶಂಕರ್‌ ನುಡಿದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಮಾತನಾಡಿ, ಈ ಬಾರಿಯ ನವರೂಪಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪೋಟೋಗಳು ಬಂದಿವೆೆ. ಈ ಅಭೂತಪೂರ್ವ ಪ್ರತಿಕ್ರಿಯೆ ನವರೂಪದ ಸಂಭ್ರಮ ಎಷ್ಟರ ಮಟ್ಟಿಗೆ ಇತ್ತು ಅನ್ನುವುದಕ್ಕೆ ಉದಾಹರಣೆ ಎಂದರು.

ಸವಾಲಿನ ಕಾಲಘಟ್ಟ ಇದು. ಮಹಿಳಾ ಸಬಲೀಕರಣದ ಜತೆಗೆ ಮತ್ತಷ್ಟು ಬಣ್ಣಗಳನ್ನು ಅವರ ಬದುಕಿಗೆ ತುಂಬುವುದು, ಮತ್ತಷ್ಟು ಜನರನ್ನು ಸ್ಪಂದಿಸುವ, ಪ್ರೀತಿಸುವ, ಒಪ್ಪಿಕೊಳ್ಳುವ ಮನೋಭಾವ ಸೃಷ್ಟಿಸುವ ಮೂಲಕ ಒಂದು ಸುಂದರ ಸಮಾಜದ ನಿರ್ಮಾಣದ ಆಶಯ ಉದಯವಾಣಿ ನವರೂಪದ್ದು ಎಂದರು.

ಬಹುಮಾನ ವಿತರಣೆ
ಪುಂಜಾಲಕಟ್ಟೆ ಕುಕ್ಕುಳ ಪ್ರಂಡ್ಸ್‌ ಸಮೂಹ, ಪುತ್ತೂರು ವೈಷ್ಣವಿ ತಂಡ, ಅಜ್ಜಿಬೆಟ್ಟು ವಠಾರ ಪ್ರಂಡ್ಸ್‌, ಬೆಳ್ಳಾರೆ ಪಡ್ಪು ಗೆಳತಿಯರ ಬಳಗ, ಧೀಶಕ್ತಿ ಮಹಿಳಾ ಯಕ್ಷ ಬಳಗ, ಗುರುವಾಯನಕೆರೆ ಶಾರಾದ ಮತ್ತು ಬಳಗ, ಐವರ್ನಾಡು ಸಂಗಮ ತಂಡಕ್ಕೆ ಮುಖ್ಯ ಅತಿಥಿ ವಂದನಾ ಶಂಕರ್‌ ಅವರು ಬಹುಮಾನ ವಿತರಿಸಿದರು. ಬಹುಮಾನ ಪಡೆದ ಸದಸ್ಯೆಯರು ಉದಯವಾಣಿಯ ನವರೂಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಸೀನಿಯರ್‌ ಎಕ್ಸಿಕ್ಯೂಟಿವ್‌ ಹರ್ಷ ಎ ಪುತ್ತೂರು ಬಹುಮಾನಿತ ಪಟ್ಟಿ ವಾಚಿಸಿದರು. ಬಂಟ್ವಾಳ ಮಾರುಕಟ್ಟೆ ವಿಭಾಗದ ಎಕ್ಸಿಕ್ಯೂಟಿವ್‌ ಶ್ರೀವತ್ಸ ಸುದೆಂಬಳ ವಂದಿಸಿದರು. ವರದಿಗಾರ ಕಿರಣ್‌ ಪ್ರಸಾದ್‌ ಕುಂಡಡ್ಕ ನಿರೂಪಿಸಿದರು.

ಟಾಪ್ ನ್ಯೂಸ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯಲ್ಲಿತ್ತು ಡೆತ್ ನೋಟ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

1-pawan-kalyana

Andhra DCM 11 ದಿನಗಳ ವ್ರತ; ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಪವನ್ ಕಲ್ಯಾಣ್

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

Delhi Drug Bust: ಬೃಹತ್‌ ಮಾದಕ ದ್ರವ್ಯ ಜಾಲ-2000 ಕೋಟಿ ರೂ. ಮೌಲ್ಯದ ಕೊಕೇನ್‌ ವಶ

Delhi Drug Bust: ಬೃಹತ್‌ ಮಾದಕ ದ್ರವ್ಯ ಜಾಲ-2000 ಕೋಟಿ ರೂ. ಮೌಲ್ಯದ ಕೊಕೇನ್‌ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ಪುತ್ತೂರು: 33ರಲ್ಲಿ 29 ಗ್ರಾಮಾಡಳಿತ ಕಚೇರಿಗೆ ಸ್ವಂತ ಕಟ್ಟಡ ಇಲ್ಲ

ಪುತ್ತೂರು: 33ರಲ್ಲಿ 29 ಗ್ರಾಮಾಡಳಿತ ಕಚೇರಿಗೆ ಸ್ವಂತ ಕಟ್ಟಡ ಇಲ್ಲ

Bantwala: ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಕಪ್ಪು ಹೊಗೆ.!

Bantwala: ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಪರಿಸರ ಮಾಲಿನ್ಯ!

Belthangady: ನದಿಗೆ ಇಳಿದಿದ್ದ ವೃದ್ಧೆಯ ಮೃತ ದೇಹ ಪತ್ತೆ

Belthangady: ನದಿಗೆ ಇಳಿದಿದ್ದ ವೃದ್ಧೆಯ ಮೃತ ದೇಹ ಪತ್ತೆ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

10-shirva

Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್‌

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯಲ್ಲಿತ್ತು ಡೆತ್ ನೋಟ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.