ಹಾರಂಗಿ: ಸಾಕಾನೆ ಶಿಬಿರ, ವೃಕ್ಷೋದ್ಯಾನದ ಆಕರ್ಷಣೆ

Team Udayavani, Oct 11, 2022, 10:40 AM IST

ಹಾರಂಗಿ: ಸಾಕಾನೆ ಶಿಬಿರ, ವೃಕ್ಷೋದ್ಯಾನದ ಆಕರ್ಷಣೆ

ಮಡಿಕೇರಿ : ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣ ಹಾರಂಗಿ ಜಲಾಶಯದ ಬಲ ದಂಡೆಯ ಮೇಲಿನ 40 ಎಕ್ರೆ ಪ್ರದೇಶದಲ್ಲಿ ನಿರ್ಮಿಸಿರುವ ವೃಕ್ಷೋದ್ಯಾನ ಮತ್ತು ಸಾಕಾನೆಗಳ ನೂತನ ಶಿಬಿರವನ್ನು ಉದ್ಘಾಟಿಸಲಾಯಿತು.

ಯೋಜನೆಗಳನ್ನು ಉದ್ಘಾಟಿಸಿದ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಹಾರಂಗಿಯಲ್ಲಿ ಸಾಕಾನೆ ಶಿಬಿರ ಆರಂಭಿಸಲಾಗಿದೆ. ಹಸುರಿದ್ದರೆ ಮಾತ್ರ ಉಸಿರು, ಹಾಗಾಗಿ ಅರಣ್ಯ ಇಲಾಖೆ ಎಲ್ಲೆಡೆಗಳಲ್ಲಿ ಟ್ರೀ ಪಾರ್ಕ್‌ ನಿರ್ಮಿಸುತ್ತಿದೆ. ಆನೆ ಸಫಾರಿ ಮೊದಲಾದ ಚಟುವಟಿಕೆಗಳನ್ನು ಹಂತ ಹಂತವಾಗಿ ತೆರೆಯಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ್‌ ಮಾತನಾಡಿ, ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಈ ಸ್ಥಳ ಪ್ರಮುಖ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದರು.

ದುಬಾರೆ ಮತ್ತು ಮತ್ತಿಗೋಡು ಸಾಕಾನೆಗಳ ಶಿಬಿರಗಳ ಸಾಲಿನಲ್ಲಿ ಮೂರನೆ ಶಿಬಿರ ಇದಾಗಿದೆ. ದುಬಾರೆ ಶಿಬಿರದಲ್ಲಿ ಆನೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಒತ್ತಡ ಹಾಗೂ ನಿರ್ವಹಣೆ ಸಮಸ್ಯೆಯಿಂದ ಹೊಸ ಶಿಬಿರ ಆರಂಭಿಸಲಾಗಿದ್ದು, ಹಾರಂಗಿ ಜಲಾಶಯದ ಬಲಭಾಗದ ಅರಣ್ಯ ಇಲಾಖೆಗೆ ಸೇರಿದ ಟ್ರೀಪಾರ್ಕ್‌ಗೆ ಹೊಂದಿಕೊಂಡಿರುವ 10 ಎಕ್ರೆ ಶಿಬಿರ ನಿರ್ಮಿಸಲು ಸರಕಾರ 50 ಲಕ್ಷ ರೂ. ಅನುದಾನ ಒದಗಿಸಿತ್ತು. ದುಬಾರೆಯಲ್ಲಿ ಒಟ್ಟು 32 ಸಾಕಾನೆಗಳಿದ್ದು, 15 ಆನೆಗಳನ್ನು ಹಾರಂಗಿಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ದಸರಾದಲ್ಲಿ ಪಾಲ್ಗೊಂಡಿರುವ ವಿಜಯ ಆನೆ ಹೊಸ ಶಿಬಿರ ಸೇರಲಿದೆ. ಮಾವುತರು, ಕಾವಾಡಿಗರಿಗೆ 4 ವಸತಿಗೃಹ ನಿರ್ಮಿಸಲಾಗಿದ್ದು, 4 ಮನೆಗಳು ನಿರ್ಮಾಣ ಹಂತದಲ್ಲಿವೆ. ಪ್ರವಾಸಿಗರಿಗೆ 30 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗುವುದು. ಹಾರಂಗಿ ಹಿನ್ನೀರಿನಲ್ಲಿ 2 ಪೆಡಲ್‌ ಬೋಟ್‌ಗಳಿದ್ದು, ಬೋಟಿಂಗ್‌ ಮಾಡಲು ಪ್ರತ್ಯೇಕವಾಗಿ ಒಬ್ಬರಿಗೆ 50 ರೂ. ನಿಗದಿಪಡಿಸುವ ಯೋಜನೆ ಸಿದ್ಧಗೊಂಡಿದೆ.

ಇದನ್ನೂ ಓದಿ :ಅಂದುಕೊಂಡತೆ ನಡೆದರೆ ಈ ತಿಂಗಳು ಮಂಡ್ಯಕ್ಕೆ ಬರಲಿದ್ದಾರೆ ಯು.ಪಿ. ಸಿ.ಎಂ. 

ಟಾಪ್ ನ್ಯೂಸ್

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

New-CEC

CEC Appoint: ಜ್ಞಾನೇಶ್‌ ಕುಮಾರ್‌ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ 

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ

ಕಾಂಞಂಗಾಡ್‌ – ಕಾಣಿಯೂರು ಹಳಿ ನಿರ್ಮಾಣಕ್ಕೆ ಕರ್ನಾಟಕ ಅನುಮತಿ ನಿರೀಕ್ಷೆ: ಸಂಸದ ಉಣ್ಣಿತ್ತಾನ್‌

ಕಾಂಞಂಗಾಡ್‌ -ಕಾಣಿಯೂರು ಹಳಿ ನಿರ್ಮಾಣಕ್ಕೆ ಕರ್ನಾಟಕ ಅನುಮತಿ ನಿರೀಕ್ಷೆ: ಸಂಸದ ಉಣ್ಣಿತ್ತಾನ್‌

Aranthodu: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾರು ಅಪಘಾತ

Aranthodu: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾರು ಅಪಘಾತ

Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್‌ ಜಾಥಾ

Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್‌ ಜಾಥಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vinay-kulkarni1

Dharawad: ಜಲ ಜೀವನ್ ಮಿಷನ್‌ ಕಳಪೆ ಕಾಮಗಾರಿಗೆ ಗರಂ; ಕೆಟ್ಟ ಯೋಜನೆ ಎಂದ ವಿನಯ್ ಕುಲಕರ್ಣಿ

1-w-w-we

GBS Outbreak; ಸಾಂಕ್ರಾಮಿಕ ರೋಗದ ಬಗ್ಗೆ ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ

BR-patil1

ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಆರ್‌.ಪಾಟೀಲ್‌ಗೆ ಹೊಸ ಹುದ್ದೆ!

Vinaya-kulakarni

ಮಾರ್ಚ್ ಬಳಿಕ ಸಂಪುಟ ಪುನರ್ ರಚನೆ; ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ: ವಿನಯ್ ಕುಲಕರ್ಣಿ

1-sidda

Siddaramaiah; ಮಾರ್ಚ್ 3 ರಿಂದ ವಿಧಾನಸಭೆ ಅಧಿವೇಶನ, ಬಜೆಟ್ ದಿನಾಂಕ ತಿಳಿಸಿದ ಸಿಎಂ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-190: ಎಲ್ಲ ತಿಳಿದಿದೆ ಎಂಬ ಪ್ರಜ್ಞೆ ಅಪಾಯಕಾರಿ

Udupi: ಗೀತಾರ್ಥ ಚಿಂತನೆ-190: ಎಲ್ಲ ತಿಳಿದಿದೆ ಎಂಬ ಪ್ರಜ್ಞೆ ಅಪಾಯಕಾರಿ

tennis

ಫೆ. 24ರಿಂದ ಬೆಂಗಳೂರು ಓಪನ್‌ ಟೆನಿಸ್‌

1-s-n

ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಡರ್ಟ್‌ ಕಾರ್‌ ರೇಸ್‌ಗೆ ತೆರೆ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.