ಪ್ರಾಕೃತಿಕ ಸಂಪತ್ತಿನ ಊರಿಗೆ ಅಭಿವೃದ್ಧಿಯ ಸೌಕರ್ಯ ಸಿಗಲಿ
ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ, ಸ್ಥಳೀಯ ಬೇಡಿಕೆಗಳಿಗೆ ಸ್ಪಂದನೆ ಅಗತ್ಯ
Team Udayavani, Oct 11, 2022, 12:49 PM IST
ಉಳ್ಳಾಲ: ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ವಿರುವ ನೇತ್ರಾವತಿ ನದಿ ತಟದಲ್ಲಿರುವ ಪಾವೂರು ಗ್ರಾಮ ಅಭಿವೃದ್ಧಿಗೆ ಪೂರಕ ಯೋಜನೆಗಳ ಆವಶ್ಯಕತೆಯಿದೆ. ಗ್ರಾಮದ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಪ್ರದೇಶ ಅಭಿವೃದ್ಧಿಯಾಗಿದ್ದು, ಒಳಪ್ರದೇಶಗಳ ಅಭಿವೃದ್ಧಿಯಾಗಬೇಕಿದೆ.
ನೇತ್ರಾವತಿ ನದಿ ತಟದಲ್ಲಿರುವ ಈ ಗ್ರಾಮಕ್ಕೆ ಹರೇಕಳ- ಅಡ್ಯಾರ್ ಸಂಪರ್ಕಿಸುವ ನೂತನ ಸೇತುವೆಯ ನದಿ ತಟದಿಂದ ಪಾವೂರು ಇನೋಳಿ – ಸಜಿಪ ಸಂಪರ್ಕ ರಸ್ತೆ ಅಭಿವೃದ್ಧಿ, ಕೃಷಿ ಭೂಮಿಗೆ ನೀರು ನುಗ್ಗುವುದನ್ನು ತಡೆಯಲು ತಡೆಗೋಡೆ, ಪಾವೂರು ಉಳಿಯಕ್ಕೆ ತೂಗು ಸೇತುವೆ ಸಂಪರ್ಕ ಕಲ್ಪಿಸಿದರೆ ಗ್ರಾಮ ಕೃಷಿ, ಪ್ರವಾಸೋದ್ಯಮದೊಂದಿಗೆ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯ.
ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು 25 ಕಿ. ಮೀ. ದೂರವಿರುವ ಪಾವೂರು ಪ್ರಾಕೃತಿಕವಾಗಿ ಅತೀ ಸುಂದರ ಗ್ರಾಮ. ಗುಡ್ಡಬೆಟ್ಟಗಳಿಂದ ಸೇರಿದ ಈ ಗ್ರಾಮದ ಒಂದು ಬದಿ ನೇತ್ರಾವತಿ ನದಿ ತಟವನ್ನು ಹೊಂದಿದ್ದು, ಇನೋಳಿ ದೇವಂದಬೆಟ್ಟ ಧಾರ್ಮಿಕ ಪ್ರವಾಸೋದ್ಯಮ ಮತ್ತು ನಡುಗುಡ್ಡೆಗಳನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ.
ಪೊಡಾರ್ ಸೈಟ್, ಗಾಡಿಗದ್ದೆ, ಮಲಾರ್, ಖಂಡಿಗ, ಉಳಿಯ, ಕಿಲ್ಲೂರು, ಇನೋಳಿ, ಕಂಬಳಪದವು ಮುಂತಾದ ಪ್ರದೇಶಗಳನ್ನು ಹೊಂದಿದ್ದು ಪಾವೂರು ಉಳಿಯ ಇಲ್ಲಿನ ಪ್ರಮುಖ ಪ್ರದೇಶಗಳು. ಗ್ರಾಮದಲ್ಲಿ ಒಂದು ಪ್ರೌಢ ಶಾಲೆ, ಮೂರು ಹಿರಿಯ ಪ್ರಾಥಮಿಕ ಶಾಲೆ, 8 ಅಂಗನವಾಡಿ ಕೇಂದ್ರಗಳಿದ್ದು, ಆರೋಗ್ಯ ಕೇಂದ್ರ, ಪಶುಚಿಕಿತ್ಸಾ ಕೇಂದ್ರವಿದೆ.
ತೂಗು ಸೇತುವೆ ಹಲವು ವರ್ಷದ ಬೇಡಿಕೆ:
ಸುಮಾರು 38 ಕುಟುಂಬಗಳು, ಒಂದು ಕ್ರೈಸ್ತರ ಧರ್ಮಕೇಂದ್ರವನ್ನು ಹೊಂದಿರುವ ನೇತ್ರಾವತಿ ತಟದ ದ್ವೀಪ ಪಾವೂರು ಉಳಿಯಕ್ಕೆ ಮೇಲಿನ ಅಡ್ಯಾರ್‌ನಿಂದ ತೂಗು ಸೇತುವೆ ಬೇಡಿಕೆ ಕಳೆದ 20 ವರುಷಗಳಿಂದ ಇದೆ. ತೂಗು ಸೇತುವೆಗೆ 6.5 ಕೋಟಿ ರೂ. ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಮಲೆನಾಡು ಅಭಿವೃದ್ಧಿ ಯೋಜನೆಯಡಿ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಬಳಿಕ ತಾಂತ್ರಿಕ ಕಾರಣಗಳಿಂದ ಯೋಜನೆ ನನೆಗುದಿಗೆ ಬಿತ್ತು ಎನ್ನುತ್ತಾರೆ ಗ್ರಾ.ಪಂ.ಮತ್ತು ತಾ. ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು. ಹಿಂದೆ ಬೇಸಗೆ ಕಾಲದಲ್ಲಿ ನದಿಯಲ್ಲಿ ನಡೆದಾಡಿಕೊಂಡು ದಾಟುತ್ತಿದ್ದು, ಮರಳು ಮಾಫಿಯಾದ ಕಾರಣ ನದಿ ಆಳವಾಗಿದೆ. ಕಳೆದ ಐದು ವರುಷಗಳಿಂದ ಬೇಸಗೆ ಕಾಲದಲ್ಲಿ ತಾತ್ಕಾಲಿಕ ಸೇತುವೆಯ ಮೂಲಕ ಜನರು ಪಟ್ಟಣ ಸೇರಿದರೆ, ಮಳೆಗಾಲದಲ್ಲಿ ಸೇತುವೆ ಕಳಚಿ ದೋಣಿಯಲ್ಲೇ ದೈನಂದಿನ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿ ಗಳು ಪರದಾಡುವಂತಾಗಿದೆ.
ಹರೇಕಳ-ಅಡ್ಯಾರ್ ಸೇತುವೆಯಿಂದ ಇನೋಳಿವರೆಗೆ ನದಿ ತಟದಲ್ಲಿ ರಸ್ತೆಯೊಂದಿಗೆ ಕೃಷಿಭೂಮಿಗೆ ನೀರು ಹರಿಯದ ಹಾಗೆ ತಡೆಗೋಡೆ ನಿರ್ಮಾಣವಾದರೆ ಗ್ರಾಮದ ಜನರಿಗೆ ಮಂಗಳೂರು ಸಂಪರ್ಕ 10 ಕಿ. ಮೀ. ಉಳಿತಾಯದೊಂದಿಗೆ ಕೃಷಿ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಯೋಜನೆಗೆ ಸರ್ವೇ ಕಾರ್ಯ ನಡೆದಿದ್ದು, ಯೋಜನೆ ಅನುಷ್ಠಾನವಾಗಬೇಕಾಗಿದೆ. ಇದರೊಂದಿಗೆ ಧಾರ್ಮಿಕ ಪ್ರವಾಸೋದ್ಯಮವಾಗಿರುವ ದೇವಂದಬೆಟ್ಟದ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೂ ಸಂಪರ್ಕ ಕಲ್ಪಿಸಲು ಸಾಧ್ಯವಿದ್ದು ಈ ಪ್ರದೇಶ ಪ್ರವಾಸೋದ್ಯಮ ತಾಣವಾಗಲಿದೆ.
ವಿವಿಧ ಬೇಡಿಕೆಗಳು:
ಪಜೀರು, ಬೋಳಿಯಾರ್ ಸಂಪರ್ಕಿಸುವ ಈ ಗ್ರಾಮಕ್ಕೆ ಪದವಿಪೂರ್ವ ಕಾಲೇಜು, ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ಕೊರತೆ ನಿವಾರಣೆ, ಆರೋಗ್ಯ ಕೇಂದ್ರ ಮೇಲ್ದರ್ಜೆಗೆ, ಪಶುಚಿಕಿತ್ಸಾ ಕೇಂದ್ರಕ್ಕೆ ವೈದ್ಯಾಧಿಕಾರಿ, ನಿವೇಶನ ರಹಿತರಿಗೆ ನಿವೇಶನ, ಆಟದ ಮೈದಾನ, ಸರಕಾರಿ ಬಸ್, ಕಂಬಳಪದವು ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿ ಪ್ರಮುಖ ಬೇಡಿಕೆಗಳು.
ಪಾವೂರು ಗ್ರಾಮದ ಭಂಡಾರ ಮನೆಯಿಂದ ಹರೇಕಳ ಕಡವು ಬಳಿಗೆ ಸಂಪರ್ಕರಸ್ತೆ, ಇನೋಳಿ ಮಲರಾಯ ದೈವಸ್ಥಾನ ರಸ್ತೆ ಮತ್ತು ಅಭಿವೃದ್ಧಿ, ವೈದ್ಯನಾಥ ದೈವಸ್ಥಾನಕ್ಕೆ ರಸ್ತೆ ಸಂಪರ್ಕ, ಅಲ್ ಮುಬಾರಕ್ ಜುಮಾ ಮಸೀದಿಯಿಂದ ಜುಮಾ ಮಸೀದಿಗೆ ಸಂಪರ್ಕ ರಸ್ತೆ, ಇನೋಳಿ ದೇವಸ್ಥಾನದಿಂದ ಇನೋಳಿ ಕೆಳಗಿನ ಕೆರೆ ರಸ್ತೆ ಅಭಿವೃದ್ಧಿ, ಪಾವೂರು ಗ್ರಾಮ ನಾಟ್ರಕೋಡಿಗ ರಸ್ತೆ ರಚನೆ, ಪಾವೂರು ಕೋರಿಯ ಪ್ರದೇಶಕ್ಕೆ ರಸ್ತೆ ರಚನೆ, ಇನೋಳಿ ಹಿಂದೂ ಶ್ಮಶಾನಭೂಮಿಗೆ ರಸ್ತೆ ಅಭಿವೃದ್ಧಿ, ಮಜಿಕಟ್ಟ ಕಾಲನಿ ರಸ್ತೆ ಅಭಿವೃದ್ಧಿ, ಉಗ್ಗನ ಬೈಲ್ ಸರಕಾರಿ ತೋಡಿಗೆ ಬದಿ ಕಟ್ಟುವುದು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬೇಡಿಕೆಯಿದೆ.
ಊರಿನ ಹಿನ್ನೆಲೆ
ಪಾವೂರು ಗ್ರಾಮದ ಬಗ್ಗೆ “ಪಾಂಬುನ + ಊರು “ಪಾಂಬೂರು’ ಕ್ರಮೇಣ ಪಾವೂರು ಆಯಿತು. ನದಿ ತೀರದ ಮುಳುಗಡೆ ಪ್ರದೇಶ ಅಥವಾ ನೆರೆ ನೀರಲ್ಲಿ ತೇಲುವ ಪ್ರದೇಶವನ್ನು ತುಳುವಿನಲ್ಲಿ ಪಾಂಬೂ /ಪಾಂಬುನ ಎನ್ನಲಾಗುತ್ತದೆ. ನೇತ್ರಾವತಿ ನದಿ ತೀರದ ಈ ಮುಳುಗಡೆಯಾಗುತ್ತಿದ್ದ ಪ್ರದೇಶದಲ್ಲಿ ಪಾವೂರು ಎಂಬ ಬಂಟ ಮನೆತನದ ಮನೆಯೊಂದಿತ್ತು. ಹೀಗೆ ಈ ಗ್ರಾಮಕ್ಕೆ ಪಾವೂರು ಎಂಬ ಹೆಸರು ಬಂದಿರಬಹುದು ಎಂಬುದು ಐತಿಹ್ಯ.
ಹಿಂದೆ ಬೇಸಗೆ ಕಾಲದಲ್ಲಿ ನಡೆದಾಡಿಕೊಂಡು ಹೋಗುತ್ತಿದ್ದು, ಮರಳುಗಾರಿಕೆ ಆರಂಭದ ಬಳಿಕ ಬೇಸಗೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿ ದೈನಂದಿನ ಕಾರ್ಯಚಟುವಟಿಕೆ ನಡೆಸುತ್ತಿದ್ದೇವೆ. ಇದೀಗ ಅಡ್ಯಾರ್-ಹರೇಕಳ ಸೇತುವೆ ನಿರ್ಮಾಣದ ಬಳಿ ಡ್ಯಾಂನಲ್ಲಿ ನೀರು ನಿಲ್ಲಿಸುವುದರಿಂದ ಮುಂದಿನ ಬೇಸಗೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸುವುದು ಕಷ್ಟ ಸಾಧ್ಯ. ಈಗಾಗಲೇ ಸಣ್ಣ ದೋಣಿಯಲ್ಲಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದ್ದು, ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿಸಿದವರಿಗೆ ತೊಂದರೆಯಾಗಲಿದೆ. ಸ್ಥಳೀಯ ಶಾಸಕರು ಇಲ್ಲಿನ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದು, ಬೇಡಿಕೆ ಈಡೇರಿಕೆಗೆ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಪಂಚಾಯತ್ ಆಡಳಿತ ಮುಂದೆ ಬರಬೇಕು.. – ಗಿಲ್ಬರ್ಟ್ ಡಿ’ಸೋಜಾ, ಪಾವೂರು ಉಳಿಯ ನಿವಾಸಿ
ಪಾವೂರು ಗ್ರಾಮದ ಗಡಿಭಾಗವಾಗಿರುವ ಹರೇಕಳ ಕಡವು ಬಳಿ ಸೇತುವೆ ಕಂ ಡ್ಯಾಂ ನಿರ್ಮಾಣವಾಗಿರುವುದರಿಂದ ಪಕ್ಕದ ಕೃಷಿಭೂಮಿಗೆ ನೀರು ನುಗ್ಗಿ ಹಾನಿಯಾಗುವ ಸಂಭವವಿದ್ದು, ಈ ಪ್ರದೇಶದಲ್ಲಿ ಶಾಶ್ವತ ಕ್ರಮವಾಗಿ ತಡೆಗೋಡೆ ನಿರ್ಮಾಣದೊಂದಿಗೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಗ್ರಾಮದ ಇತರ ಸಮಸ್ಯೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು. – ಕಮರುನ್ನೀಸಾ ಅಕ್ಷರ ನಗರ, ಅಧ್ಯಕ್ಷರು, ಪಾವೂರು ಗ್ರಾಮ ಪಂಚಾಯತ್
ವಸಂತ್ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.