ಹವಾಮಾನ ವೈಪರೀತ್ಯ: ಫಸಲು ಇಳಿಮುಖ ಸಾಧ್ಯತೆ
Team Udayavani, Oct 11, 2022, 4:01 PM IST
ದೇವನಹಳ್ಳಿ: ಜಿಲ್ಲಾದ್ಯಂತ ಹವಾಮಾನ ವೈಪರೀತ್ಯ ದಿಂದ ಏರಿಳಿತದಿಂದ ಫಸಲು ಕುಸಿತ ಆಗುವ ಸಾಧ್ಯತೆ ಇದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮಳೆಯಾಶ್ರಿತ ಪ್ರದೇಶವಾಗಿದ್ದು, ಈ ಪ್ರದೇಶಗಳಲ್ಲಿ ಯಾವುದೇ ನದಿಮೂಲಗಳಿಲ್ಲದೆ ಮಳೆಯನ್ನೆ ನಂಬಿ ಕೃಷಿ ಮಾಡುವ ಪರಿಸ್ಥಿತಿ ಇದೆ. ಅತಿ ಹೆಚ್ಚು ರೈತರು ರಾಗಿ ಬೆಳೆಗೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಅ.ತಿಂಗಳಿಗೆ 1,237 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರದ ಬೇಡಿಕೆಯಿದ್ದು, ಜಿಲ್ಲೆಯಲ್ಲಿ 660 ಟನ್ ಯೂರಿಯಾ ಸಂಗ್ರಹ ಇದೆ. ಬೇಡಿಕೆ ಹೆಚ್ಚಿದ್ದರೆ ಪೂರೈಕೆ ಮಾಡಲಾಗುತ್ತದೆ.
98.39 ಬಿತ್ತನೆ ಪೂರ್ಣ: ಕೃಷಿ ಇಲಾಖೆಯು ಜಿಲ್ಲೆಯ 4 ತಾಲೂಕು ಸೇರಿದಂತೆ ಒಟ್ಟು 69,800 ಹೆಕ್ಟೇರ್ ಬಿತ್ತನೆ ಗುರಿಯನ್ನು ಹೊಂದಲಾಗಿತ್ತು. ಇದರಲ್ಲಿ ಶೇ.98.39 ರಷ್ಟು ಬಿತ್ತನೆ ಗುರಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 57,777 ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿದೆ.ಕಳೆದ ಬಾರಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ 7,635 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಆದರೆ, ಈ ಬಾರಿ 8 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವ ನಿರೀಕ್ಷೆಯಿತ್ತು. ಮಳೆಯ ಏರುಪೇರಿನ ಪರಿಣಾಮ ಈ ಬಾರಿಯು ಕೂಡ ಮೆಕ್ಕೆಜೋಳ ಬೆಳೆಯ ವ್ಯಾಪ್ತಿ ಜಿಲ್ಲೆಯಲ್ಲಿ ಹೆಚ್ಚಳವಾಗಲು ಸಾಧ್ಯವಾಗಿಲ್ಲ. ರಾಗಿ ಬೆಳೆಯ ಪ್ರಮುಖ ತಾಣಗಳಲ್ಲಿ ಒಂದಾದ ಜಿಲ್ಲೆಯ 4 ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿನ ವಾಡಿಕೆ ಮಳೆ 625 ಮಿ.ಮೀ. ಗಿಂತ ಈ ಬಾರಿ ಶೇ.86ರಷ್ಟು ಹೆಚ್ಚಿನ ಮಳೆಯಾಗುವ ಮೂಲಕ ದಾಖಲೆ ಬರೆದಿದೆ. ಮಳೆಯ ಆರ್ಭಟದಿಂದ ಕೃಷಿ ಚಟುವಟಿಕೆ ಏರುಪೇರಾಗಿದ್ದು, ರೈತರಿಗೆ ಸಮಸ್ಯೆಯಾಗಿದೆ.
ಬಿತ್ತನೆ ತಡವಾಗಿದೆ: ಜಿಲ್ಲೆಯಲ್ಲಿ ಜುಲೈ, ಆಗಸ್ಟ್ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಭರ್ಜರಿ ಮಳೆಯಾಗಿತ್ತು. ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಗಸ್ಟ್ 2 ನೇ ವಾರದಲ್ಲಿ ಮುಕ್ತಾಯವಾಗಬೇಕಿದ್ದ ಬಿತ್ತನೆ ತಡವಾಗಿದೆ. ಇದರಿಂದ ಕೆಲವೆಡೆ ರೈತರು ರಾಗಿ, ಮೆಕ್ಕೆಜೋಳ ಹೊರತುಪಡಿಸಿ ಪರ್ಯಾಯ ಬೆಳೆಗಳಾದ ಹುರುಳಿ ಹಾಗೂ ಇತರೆ ಬೆಳೆಗಳ ಕಡೆಗೆ ಮುಖ ಮಾಡಿದ್ದಾರೆ. ಇದೀಗ ಮಳೆ ಕಡಿಮೆಯಾಗಿದೆ.
ಫಸಲು ಇಳಿಮುಖ: ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ತಾಲೂಕು ಸೇರಿದಂತೆ ಎಲ್ಲೆಡೆ ಭರ್ಜರಿ ಮಳೆಯಾಗಿದೆ. ಈ ವರ್ಷ ಜನವರಿ ತಿಂಗಳಿಂದ ಅ.6ರವರೆಗೆ ಒಟ್ಟು 625 ಮಿ.ಮೀ. ವಾಡಿಕೆ ಮಳೆ ಆಗಿದೆ. ಆದರೆ, ಈ ಬಾರಿ ಸುರಿದ ಹೆಚ್ಚಿನ ಮಳೆಯ ಪರಿಣಾಮ ಫಸಲು ಇಳಿಮುಖ ಆಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ. ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಮಳೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕು ಪೈಕಿ ಈ ಬಾರಿ ದೊಡ್ಡಬಳ್ಳಾಪುರದಲ್ಲಿ ಹೆಚ್ಚಿನ ಮಳೆಯಾಗಿದೆ. ದೊಡ್ಡಬಳ್ಳಾಪುರದಲ್ಲಿ ಶೇ.98,ದೇವನಹಳ್ಳಿ ಶೇ.88, ಹೊಸಕೋಟೆ ಶೇ.61, ನೆಲಮಂಗಲ ಶೇ. 60ರಷ್ಟು ಹೆಚ್ಚಿನ ಮಳೆಯಾಗಿದೆ.
ಕಳೆದ ಒಂದು ವಾರದಲ್ಲಿ ಹೊಸಕೋಟೆಯಲ್ಲಿ ಶೇ. 64 ಮಳೆ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ದೊಡ್ಡಬಳ್ಳಾಪುರದಲ್ಲಿ ಶೇ. 34,ದೇವನಹಳ್ಳಿ ಶೇ.24ರಷ್ಟು ಹಾಗೂ ನೆಲಮಂಗಲದಲ್ಲಿ ಶೇ.37ರಷ್ಟು ಮಳೆಯ ಪ್ರಮಾಣ ಕುಸಿತ ಕಂಡಿದೆ. ರಾಜ್ಯಾದ್ಯಂತ ಅಬ್ಬರಿಸಿ ಬೊಬ್ಬೆರೆದ ಮಳೆರಾಯ ಈಗ ಸೈಲೆಂಟ್ ಆಗಿದ್ದಾನೆ. ಬಯಲುಸೀಮೆ ಜಿಲ್ಲೆಯಲ್ಲೂ ಕಳೆದ ಒಂದು ತಿಂಗಳಿಂದ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಸೆ.30ರಿಂದ ಅಕ್ಟೋಬರ್ 6ರವರೆಗೆ 46 ಮಿ.ಮೀ. ವಾಡಿಕೆ ಮಳೆ ಆಗಬೇಕಿದ್ದು, ಕೇವಲ 28 ಮಿ.ಮೀ. ಮಳೆಯಾಗಿದೆ. ಪ್ರಸ್ತುತ ಬೆಳೆಗೆ ಮಳೆಯ ಕೊರತೆ : ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವ್ಯಾಪಕ ಮಳೆಯ ಪರಿಣಾಮ ಒಂದು ತಿಂಗಳಿಗೂ ಹೆಚ್ಚು ಕಾಲ ಬಿತ್ತನೆ ತಡವಾಗಿತ್ತು. ಇದರಿಂದ ಕೆಲ ಕಡೆ ರೈತರು ಬಿತ್ತನೆ ಕೈಬಿಟ್ಟಿದ್ದಾರೆ. ಕೆಲವೆಡೆ ಮಳೆ ಹೆಚ್ಚಾದ ಹಿನ್ನೆಲೆ ಬಿತ್ತನೆ ಹಾಳಾಗಿದೆ. ತೇವಾಂಶ ಬೆಳೆಗೆ ತೊಡಕಾಗಿತ್ತು. ಪ್ರಸ್ತುತ ಬೆಳೆಗೆ ಮಳೆಯ ಕೊರತೆಯಿಂದ ಜಿಲ್ಲೆಯ ಒಟ್ಟು ಫಸಲಿನ ಶೇ. 5ರಿಂದ 10ರಷ್ಟು ಫಸಲು ಇಳಿಮುಖವಾಗುವ ಸಾಧ್ಯತೆ ಇದೆ.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವ್ಯಾಪಕ ಮಳೆಯ ಪರಿಣಾಮ ಒಂದು ತಿಂಗಳಿಗೂ ಹೆಚ್ಚು ಕಾಲ ಬಿತ್ತನೆ ತಡವಾಗಿತ್ತು. ಇದರಿಂದ ಕೆಲ ಕಡೆ ರೈತರು ಬಿತ್ತನೆ ಕೈಬಿಟ್ಟಿದ್ದಾರೆ. ಕೆಲವೆಡೆ ಮಳೆ ಹೆಚ್ಚಾದ ಹಿನ್ನೆಲೆ ಬಿತ್ತನೆ ಹಾಳಾಗಿದೆ. ತೇವಾಂಶ ಬೆಳೆಗೆ ತೊಡಕಾಗಿತ್ತು. ಪ್ರಸ್ತುತ ಬೆಳೆಗೆ ಮಳೆಯ ಕೊರತೆಯಿಂದ ಜಿಲ್ಲೆಯ ಒಟ್ಟು ಫಸಲಿನ ಶೇ. 5ರಿಂದ 10ರಷ್ಟು ಫಸಲು ಇಳಿಮುಖವಾಗುವ ಸಾಧ್ಯತೆ ಇದೆ. ● ಮುನಿರಾಜು, ರೈತ
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ರೈತರಿಗೆ ಬಿತ್ತನೆ ಕಾಲದಲ್ಲಿ ಬಿತ್ತನೆ ಬೀಜಗಳನ್ನು ಒದಗಿಸಲಾದೆ. ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯಲ್ಲಿ ಶೇ. 98.39ರಷ್ಟು ಬಿತ್ತನೆ ಪೂರ್ಣಗೊಂಡಿದೆ. ರಾಗಿಯನ್ನು ಶೇ.57,777 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವ್ಯಾಪಕ ಮಳೆಯ ಪರಿಣಾಮ ಒಂದು ತಿಂಗಳಿಗೂ ಹೆಚ್ಚು ಕಾಲ ಬಿತ್ತನೆ ತಡವಾಗಿತ್ತು. ಇದರಿಂದ ಕೆಲ ಕಡೆ ರೈತರು ಬಿತ್ತನೆ ಕೈಬಿಟ್ಟಿ¨ªಾರೆ. ಕೆಲವೆಡೆ ಮಳೆ ಹೆಚ್ಚಾದ ಹಿನ್ನೆಲೆ ಬಿತ್ತನೆ ಹಾಳಾಗಿದೆ. ತೇವಾಂಶ ಬೆಳೆಗೆ ತೊಡಕಾಗಿತ್ತು. ಪ್ರಸ್ತುತ ಬೆಳೆಗೆ ಮಳೆಯ ಕೊರತೆಯಿಂದ ಜಿಲ್ಲೆಯ ಒಟ್ಟು ಫಸಲಿನ ಶೇ. 5ರಿಂದ 10ರಷ್ಟು ಫಸಲು ಇಳಿಮುಖವಾಗುವ ಸಾಧ್ಯತೆ ಇದೆ. ಪ್ರಸ್ತುತ ಬೆಳೆಗೆ ಮಳೆಯ ಕೊರತೆ – ಜಯಸ್ವಾಮಿ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.