ವಸ್ತು ಪ್ರದರ್ಶನ: ಆನ್ಲೈನ್ ವಂಚನೆ ಕುರಿತು ಜಾಗೃತಿ
Team Udayavani, Oct 11, 2022, 5:19 PM IST
ಮೈಸೂರು: ಆನ್ಲೈನ್ ಮೂಲಕ ಹ್ಯಾಕಿಂಗ್, ನೆಟ್ ಬ್ಯಾಕಿಂಗ್ ವಂಚನೆಗಳಿಂದ ಎಚ್ಚರಿಕೆ ವಹಿಸುವುದು ಹೇಗೆ, ಅಪರಿಚಿತರ ವಿಡಿಯೋ ಕಾಲ್ ಸ್ವೀಕರಿಸುವ ಮುನ್ನ ಅನುಸರಿಸಬೇಕಾದ ಕ್ರಮಗಳೇನು, ಆನ್ಲೈನ್ ವೇದಿಕೆಯಲ್ಲಿ ಹಣ ಹೂಡಿಕೆಗೂ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು ಮತ್ತು ಸಾರ್ವಜನಿಕರು ಅಪರಾಧ ದಾಖಲೆಗಳನ್ನು ಪಡೆಯುವ ಸುಲಭ ಮಾದರಿ ಹಾಗೂ ಪೊಲೀಸ್ ಇಲಾಖೆಯ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಒಂದೇ ಸೂರಿನಡಿ ಲಭ್ಯವಾಗುತ್ತಿದೆ.
ಹೌದು… ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸಿಐಡಿ, ನಗರ ಪೊಲೀಸ್ ಸಹಯೋಗದಲ್ಲಿ ತೆರೆದಿರುವ ಮಳಿಗೆಯಲ್ಲಿ ಸೈಬರ್ ಅಪರಾಧಗಳ ಕುರಿತು ಸಮಗ್ರ ಮಾಹಿತಿ, ವಂಚನೆಯಿಂದ ಪಾರಾಗುವ ಬಗೆಯ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ.
ಸೈಬರ್ ಅಪರಾಧ ತಡೆ ಸುರಕ್ಷಾ ಸಲಹೆ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಸ್ತುಪ್ರದರ್ಶನ ಆವರಣದಲ್ಲಿ ಪೊಲೀಸರು ಮಳಿಗೆ ತೆರೆದಿದ್ದು, ಸೈಬರ್ ಅಪರಾಧ ತಡೆ ಸುರಕ್ಷಾ ಸಲಹೆಗಳನ್ನು ನೀಡಲಾಗಿದೆ. ಬ್ಯಾಂಕಿಂಗ್ ಮಾಹಿತಿಗಳಾದ ಕಾರ್ಡ್ ನಂಬರ್, ಮುಕ್ತಾಯದ ಅವಧಿ, ಸಿವಿವಿ, ಒಟಿಪಿ, ಪಿನ್, ಯುಪಿಐ ಎಂಪಿಎನ್ ಮಾಹಿತಿಗಳನ್ನು ಯಾರೊಬ್ಬರಿಗೂ ನೀಡಬಾರದು. ಹಾಗೆಯೇ ಅಪರಿಚಿತ ಮೂಲದ ಸಂದೇಶ, ಇಮೇಲ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಸರ್ಚ್ ಎಂಜಿನ್‌ನಲ್ಲಿ ಕಂಡು ಬರುವ ಸಂಪರ್ಕ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತೆ ತಿಳಿಯಬೇಕು ಎಂಬ ಮಾಹಿತಿಯನ್ನು ಪ್ಲೇ ಕಾರ್ಡ್‌ನೊಂದಿಗೆ ಪೊಲೀಸರು ಅರಿವು ಮೂಡಿಸಿದರು. ಅನಧಿಕೃತ ಆ್ಯಪ್ ಬಳಸಬೇಡಿ: ಆನ್ ಲೈನ್ ಮೂಲಕ ಸಾಲ ನೀಡುವ ಅನ ಧಿಕೃತ ಆ್ಯಪ್ ಬಳಸ ಬಾರದು. ಉದ್ಯೋಗ ಕೊಡಿ ಸುವ ಹಣದ ಬೇಡಿಕೆ ಇಟ್ಟಲ್ಲಿ ಯಾವುದೇ ಕಾರಣಕ್ಕೂ ಹಣ ನೀಡಬಾರ ದು. ಮಕ್ಕಳ ಅಶ್ಲೀಲ ಚಿತ್ರ, ದೃಶ್ಯಾವಳಿ ಇತ್ಯಾದಿ ಆನ್‌ಲೈನ್ ನಲ್ಲಿ ಹುಡುಕುವುದು ಅಪ ರಾಧ ಎಂಬ ಮಾಹಿತಿ ಒದಗಿಸಲಾಗಿದೆ.
ಹಣ ಹೂಡಿಕೆಗೂ ಮುನ್ನಾ ಇರಲಿ ಎಚ್ಚರಿಕೆ: ಆನ್ಲೈನ್ ವೇದಿಕೆಯಲ್ಲಿ ಖಚಿತವಲ್ಲದ ಸಂಸ್ಥೆಗೆ ಹಣ ಹೂಡಿಕೆ ಮಾಡಬಾರದು. ವೆಬ್‌ಸೈಟ್, ಕಂಪನಿ, ವ್ಯಕ್ತಿಯನ್ನು ನಿರ್ಣಯಿಸಿ ಹೂಡಿಕೆ ಮಾಡುವುದು ಅಪಾಯಕಾರಿ. ಹಾಗೆಯೇ ಇ ಲಾಸ್ಟ್ ಮೊಬೈಲ್ ಅಪ್ಲಿಕೇಷನ್ ಮೂಲಕ ಮೊಬೈಲ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸಿಮ್ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮುಂತಾದ ವಸ್ತುಗಳು ಕಳೆದು ಹೋದರೆ ದೂರು ನೀಡುವ ಬಗ್ಗೆ ಮಾಹಿತಿ ಪಡೆಯಬಹುದು. ನಾಗರಿಕ ಕೇಂದ್ರಿತ ಪೋರ್ಟಲ್ ಸೇವೆಗಳ ಪಟ್ಟಿಯಲ್ಲಿ ಹಿರಿಯ ನಾಗರಿಕರ ನೋಂದಣಿ, ಬೀಗ ಹಾಕಿದ ಮನೆಯ ನೋಂದಣಿ ಮಾಡಿಸುವ ಬಗ್ಗೆ ಜನರಿಗೆ ತಿಳಿಸಿಕೊಡಲಾಯಿತು.
ಮಾಹಿತಿ ಮಳಿಗೆ ಉದ್ಘಾಟಿಸಿದ ಆಯುಕ್ತ : ಸೈಬರ್ ಅಪರಾಧದ ಬಗ್ಗೆ ಉಚಿತ ದೂ.112, 1930ಗೆ ಕರೆ ಮಾಡಿ ಅಥವಾ www.cybercrime.gov.in (national cyber crime reporting portal) ನಲ್ಲಿ ನೋಂದಾಯಿಸಬಹುದಾಗಿದೆ. ಇದಕ್ಕೂ ಮುನ್ನಾ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೈಬರ್ ಅಪರಾಧ ಸಂಬಂಧ ಮಾಹಿತಿಯ ಮಳಿಗೆಯನ್ನು ಉದ್ಘಾಟಿಸಿದರು. ಸಿಐಡಿ ಸೈಬರ್ ಕ್ರೈಂ ಎಸ್‌ಪಿ ಅನುಚೇತ್, ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಡಿಸಿಪಿ ಹಾಗೂ ಎಸಿಪಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಆನ್‌ಲೈನ್ ವಂಚನೆ ಮತ್ತು ದೈನಂದಿನ ವ್ಯವಹಾರದಲ್ಲಿ ನಡೆಯುವ ಅಪರಾಧ ಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಸ್ತುಪ್ರದರ್ಶನಲ್ಲಿ ಮಳಿಗೆ ಆರಂಭಿಸ ಲಾಗಿದೆ. ಜನರಿಗೆ ಜಾಗ್ರತೆವಹಿಸಿದರೆ ಅಪರಾಧಗಳು ಕಡಿಮೆಯಾಗುತ್ತದೆ. ಸಾರ್ವಜನಿಕರು ಮಳಿಗೆಗೆ ಬಂದು ಮಾಹಿತಿ ಪಡೆದುಕೊಳ್ಳಿ. – ಡಾ.ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ
ಸರ್ವರ್ ಹ್ಯಾಕ್, ಬ್ಲ್ಯಾಕ್ ಮೇಲ್, ಉದ್ಯೋಗ ಕೊಡಿಸುವುದಾಗಿ ಹಣ ಪಡೆ ಯುವುದು ಸೇರಿ ಅಂತರ್ಜಾಲ ಬಳಸಿ ಕೊಂಡು ವಂಚನೆ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದೆ. ಅಂತರ್ಜಾಲದ ಮೂಲಕ ವಂಚನೆ ಮಾಡುವವರಿಗೆ ಕನಿಷ್ಠ 3 ವರ್ಷದಿಂದ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. – ಅನುಚೇತ್, ಎಸ್‌ಪಿ, ಸಿಐಡಿ ಸೈಬರ್ ಕ್ರೈಂ.
-ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.