ನವರೂಪ: ಭಾರತೀಯ ಸಂಸ್ಕೃತಿಯ ಅನಾವರಣ; ವಿದ್ಯಾಶ್ರೀ ರಾಧಾಕೃಷ್ಣ

ಉದಯವಾಣಿ "ನವರೂಪ ಉತ್ಸವ' ವಿಜೇತರಿಗೆ ಬಹುಮಾನ ವಿತರಣೆ

Team Udayavani, Oct 11, 2022, 5:13 PM IST

24

ಮಹಾನಗರ: ನವರಾತ್ರಿಯು ದೇವಿಯ ಉಪಾಸನೆಯೊಂದಿಗೆ ಬದುಕಿಗೆ ಅರ್ಥವನ್ನು ತುಂಬುವ ಬಣ್ಣಗಳ ಪರಿಕಲ್ಪನೆಯೊಂದಿಗೆ ಜೋಡಿಸಿಕೊಂಡಿದೆ. ಜನಮನದ ಜೀವನಾಡಿ ಉದಯವಾಣಿ “ನವರೂಪ’ ಉತ್ಸವದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಸ್ತೃತ ರೂಪದಲ್ಲಿ ಅನಾವರಣಗೊಳಿಸಿದೆ ಎಂದು ಗಾನನೃತ್ಯ ಅಕಾಡೆಮಿಯ ಸಂಸ್ಥಾಪಕಿ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ನವರಾತ್ರಿ ಪ್ರಯುಕ್ತ ಉದಯವಾಣಿ ಹಮ್ಮಿಕೊಂಡಿದ್ದ ನವರೂಪ ಉತ್ಸವದಲ್ಲಿ ವಿಜೇತರಾದವರಿಗೆ ಮಂಗಳೂರಿನ ಬೆಸೆಂಟ್‌ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ನವರಾತ್ರಿ ದೇವಿಶಕ್ತಿಯ ಆರಾಧನೆ ಮಾತ್ರವಲ್ಲದೆ ನಾರೀಶಕ್ತಿ ಅನಾವರಣ ಕೂಡ ಆಗಿದೆ. ಒಂಬತ್ತು ದಿನಗಳಲ್ಲಿ ದೇವಿಯನ್ನು ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತಿದೆ. ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ತೊಡಿಸಲಾಗುತ್ತಿದೆ. ಈ ಒಂದೊಂದು ಬಣ್ಣ ಅದರದ್ದೆ ಆದ ಮಹತ್ವವನ್ನು ಹೊಂದಿದೆ. ಆದರ ಹಿಂದೆ ಆಧ್ಯಾತ್ಮಿಕ ನೆಲಗಟ್ಟಿನ ಸಂದೇಶಗಳಿವೆ. ನವರೂಪ ಉತ್ಸವ ಮಹಿಳೆಯರಿಗೆ ಇದರ ಮಹತ್ವದ ಅರಿವು ಮೂಡಿಸುವುದರ ಜತೆಗೆ ನವರಾತ್ರಿ ಉತ್ಸವವನ್ನು ಭಕ್ತಿಯ ಜತೆಗೆ ಸಂಭ್ರಮಿಸುವಂತೆ ಮಾಡಿದೆ ಎಂದರು.

ಇಂದಿನ ಪೀಳಿಗೆಗೆ ಭಾರತೀಯ ಉಡುಗೆತೊಡುಗೆಗಳತ್ತ ಒಲವು ಕಡಿಮೆಯಾಗುತ್ತಿದೆ. ಆದರೆ ವಿದೇಶಗಳಲ್ಲಿ ನಮ್ಮ ಉಡುಗೆ ತೊಡುಗೆಗಳು, ಆಚಾರ – ವಿಚಾರಗಳತ್ತ ಒಲವು ಹೆಚ್ಚುತ್ತಿದೆ. ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯನ್ನು ಇದರಲ್ಲಿ ಸಮ್ಮಿಳಿತಗೊಳಿಸುವ ಕಾರ್ಯ ಅಗತ್ಯ. ಉದಯವಾಣಿ ನವರೂಪ ಉತ್ಸವ ಈ ನಿಟ್ಟಿನಲ್ಲಿ ಮಹತ್ತರ ಪರಿಕಲ್ಪನೆಯಾಗಿದ್ದು, ಜನಮಾನಸದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿರುವುದು ಇದು ಗಳಿಸಿರುವ ಯಶಸ್ಸಿನ ಪ್ರತಿಬಿಂಬವಾಗಿದೆ. ನವರಾತ್ರಿ ಉತ್ಸವವನ್ನು ಆಯೋಜಿಸಿರುವ ಉದಯವಾಣಿಯನ್ನು ಅಭಿನಂದಿಸುತ್ತೇನೆ ಎಂದರು.

ನೀತಿಬೋಧಕ ಜಾನಪದ ಗೀತೆಯೊಂದನ್ನು ಹಾಡಿದರು. ಉದಯವಾಣಿ ಉಪಾಧ್ಯಕ್ಷ (ಮ್ಯಾಗಜಿನ್‌ ಮತ್ತು ಸ್ಪೆಶಲ್‌ ಪ್ರಾಜೆಕ್ಟ್) ರಾಮಚಂದ್ರ ಮಿಜಾರು ಸ್ವಾಗತಿಸಿ, ಪ್ರಸ್ತಾವನೆಗೈದು, ರೇಷ್ಮೆ ಸೀರೆಯೊಂದಿಗೆ ದೀಪಾವಳಿ, ಯಶೋದಾ ಕೃಷ್ಣ ಸಹಿತ ವಿನೂತನ ಪರಿಕಲ್ಪನೆಗಳ ಮೂಲಕ ಹಬ್ಬಗಳನ್ನು ಓದುಗ ಸಮೂಹದೊಂದಿಗೆ ಸಂಭ್ರಮಿಸುತ್ತಾ ಬಂದಿರುವ ಉದಯವಾಣಿಯ ಈ “ನವರೂಪ ಉತ್ಸವ’ದಲ್ಲಿ ಕರಾವಳಿಯ ಜಿಲ್ಲೆಗಳ ಸಾವಿರಾರು ಮಹಿಳೆಯರು ಭಾಗವಹಿಸಿದ್ದು, ಅಭೂತ ಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಫೋಟೋಗಳನ್ನು ಆಯ್ಕೆ ಮಾಡುವುದು ನಮಗೆ ಅತ್ಯಂತ ಕಠಿನ ಸವಾಲು ಆಗಿತ್ತು ಎಂದರು.

ನವರೂಪ ಉತ್ಸವದಲ್ಲಿ ಅತ್ಯಂತ ಸಂಭ್ರಮದಿಂದ ಪಾಲ್ಗೊಂಡ ಎಲ್ಲರನ್ನು ಉದಯವಾಣಿ ಅಭಿನಂದಿಸುತ್ತದೆ ಎಂದರು.

ನವರೂಪ ವಿಜೇತರು ಪ್ರತಿಭಾ ಮತ್ತು ಬಳಗ, ಯು.ಎಸ್‌. ಮಲ್ಯ ನಗರ ಬಿಕರ್ನಕಟ್ಟೆ, ಸುಭಾಷ್‌ನಗರ ಫ್ರೆಂಡ್ಸ್‌ ಮೂಡುಬಿದಿರೆ, ಟೀಂ ನೀಲಾಂಬರಿ ಮಂಗಳೂರು. ಸುಶೀಲಾ ಮತ್ತು ಕುಟುಂಬ ಕಾಟಿಪಳ್ಳ, ಶುಭಾ ಎಸ್‌.ಎನ್‌. ಭಟ್‌ ಮತ್ತು ಬಳಗ ಮುಡಿಪು, ದಿವ್ಯಾಶ್ರೀ ಮತ್ತು ಬಳಗ ಪೆರ್ಲತ್ತಡ್ಕ ಕಾಸರಗೋಡು, ಲಕ್ಷ್ಮೀ ನಿವಾಸ ಕುಟುಂಬ ಬಲ್ಲಾಳ್‌ಬಾಗ್‌, ಚೇತನಾ, ಗೆಳತಿಯರು ಅಳಪೆ ಪಡೀಲ್‌, ಮಂಜುಳಾ ಮತ್ತು ಕುಟುಂಬ ಕುದ್ರೋಳಿ ಅವರಿಗೆ ವಿದ್ಯಾಶ್ರೀ ರಾಧಾಕೃಷ್ಣ ಅವರು ಬಹುಮಾನಗಳನ್ನು ಪ್ರದಾನ ಮಾಡಿದರು.

ಉದಯವಾಣಿ ಪ್ರಾದೇಶಿಕ ಪ್ರಬಂಧಕ ಸತೀಶ್‌ ಮಂಜೇಶ್ವರ ಬಹುಮಾನ ವಿಜೇತರ ವಿವರ ನೀಡಿದರು. ಸಹಾಯಕ ಪ್ರಬಂಧಕ ಉಮೇಶ್‌ ಎನ್‌. ಶೆಟ್ಟಿ ವಂದಿಸಿದರು.

ಹಿರಿಯ ವರದಿಗಾರ ದಿನೇಶ್‌ ಇರಾ ನಿರೂಪಿಸಿದರು. ಸಂಭ್ರಮಿಸಿದ್ದೇವೆ ಪ್ರಶಸ್ತಿ ವಿಜೇತರ ಪೈಕಿ ಗೀತಾ ವಿ. ಮೈಂದನ್‌ ಮಾತನಾಡಿ, ನವರಾತ್ರಿಯ ಸಂದರ್ಭ ಉದಯವಾಣಿ ಪ್ರಸ್ತುತಪಡಿಸಿರುವ ನವರೂಪ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದೇವೆ. ಸಂತೋಷ ಪಟ್ಟಿದ್ದೇವೆ. ಈ ರೀತಿಯ ಅವಕಾಶವನ್ನು ಓದುಗ ಬಳಗಕ್ಕೆ ಒದಗಿಸಿಕೊಟ್ಟ ಉದಯವಾಣಿ ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ರೀತಿಯ ಇನ್ನಷ್ಟು ಉತ್ತಮ ಪರಿಕಲ್ಪನೆಗಳು ಮೂಡಿಬರಲಿ ಎಂದು ಹಾರೈಸುತ್ತೇನೆ ಎಂದು ನವರೂಪ ಉತ್ಸವ ಆಯೋಜನೆಗೆ ಹರ್ಷ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Anwar-Manippady

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

Pocso

Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.