ಸಸ್ಪೆನ್ಸ್ ಥ್ರಿಲ್ಲರ್ ಖೆಯೊಸ್ ತೆರೆಗೆ ಸಿದ್ಧ
Team Udayavani, Oct 11, 2022, 5:35 PM IST
“ಖೆಯೊಸ್’- ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದೊ ಇದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ವೈದ್ಯಕೀಯ ಲೋಕದಲ್ಲಿ ನಡೆವ ಸಂಗತಿ, ವೈದ್ಯಕೀಯ ವಿದ್ಯಾರ್ಥಿಗಳ ಬದುಕಿನ ಕುರಿತು ವೆಂಕಟೇಶ್ ತಿಳಿದಿದ್ದಾರೆ.
ಅವರೇ ಹೇಳುವಂತೆ, “ಇದು ಒಂದು ಸಸ್ಪೆನ್ಸ್ , ಥ್ರಿಲ್ಲರ್ ಕಂ ಆ್ಯಕ್ಷನ್ ಜಾನರ್ ಚಿತ್ರ. ವೈದ್ಯಕೀಯ ವೃತ್ತಿಯಲ್ಲಿ ನಡೆದ ಕೆಲವಷ್ಟು ಸಂದರ್ಭವನ್ನು ಇಟ್ಟುಕೊಂಡು, ಅದಕ್ಕೊಂದು ಕಥೆ ಸೇರಿಸಿ, ಥ್ರಿಲ್ಲರ್ ಶೈಲಿಯಲ್ಲಿ ಚಿತ್ರವನ್ನು ಮಾಡಿದ್ದೇವೆ. ಭಿನ್ನ ಟೈಟಲ್‌ನಲ್ಲಿ , ಭಿನ್ನ ಕಥೆಯಲ್ಲಿ ಮೂಡಿಬಂದಿರುವ ಚಿತ್ರ ಇದಾಗಿದ್ದು, ಸಂಪೂರ್ಣವಾಗಿ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯಕೀಯ ಜಗತ್ತಿನ ಸುತ್ತ ಕಥೆ ಸಾಗಲಿದೆ’ ಎನ್ನುತ್ತಾರೆ.
ಚಿತ್ರದ, ಕಥೆ, ಚಿತ್ರ-ಕಥೆ, ನಿರ್ದೇಶನ ಎಲ್ಲದರ ಜವಾಬ್ದಾರಿಯನ್ನು ಹೊತ್ತಿರುವ ವೆಂಕಟೇಶ್ ಪ್ರಸಾದ್, “ಚಿತ್ರದ ಕಥೆಯೇ ಚಿತ್ರದ ಜೀವಾಳ. ನಾನು ಚಿತ್ರರಂಗದಲ್ಲಿ ಅನುಭವಸ್ಥ ಅಲ್ಲ. ಆದರೂ, ಅದಿತಿ ಪ್ರಭುದೇವಾ ಅವರು ನನ್ನ ಕಥೆ ನರೇಶನ್ ಕೇಳಿ ಚಿತ್ರಕಥೆ ಉತ್ತಮವಾಗಿದೆ ಅಭಿನಯಿಸುತ್ತೇನೆ ಎಂದು ಸಿದ್ಧರಾದರು. ನಂತರ ಶಶಿಕುಮಾರ್ ಸರ್ ಕೂಡಾ ಕಥೆ ಇಷ್ಟಪಟ್ಟು ಅಕ್ಷಿತ್ ಅವರ ಡೇಟ್ ಹೊಂದಿಸಿಕೊಟ್ಟರು. ಇನ್ನು ಮೊದಲನೇ ಭೇಟಿಗೆ ಕಲಾವಿದರು ಒಪ್ಪಲು ನಾನು ಚಿತ್ರರಂಗದಲ್ಲಿ ಹೆಸರು ಮಾಡಿರುವ ನಿರ್ದೇಶಕನಲ್ಲ. ಆದರೂ ಅವರಿಬ್ಬರೂ ಒಪ್ಪಿದ ಕಾರಣವೇ ಕಥೆ. ಚಿತ್ರದ ಜೀವಾಳವೇ ಆಗಿದೆ’ ಎಂಬುದು ವೆಂಕಟೇಶ್ ಮಾತು.
“ದಿ ಬ್ಲಾಕ್ ಪಬೆಲ್ ಎಂಟರ್‌ಟೈನ್ಮೆಂಟ್’ ಬ್ಯಾನರ್ ನಿರ್ಮಿಸಿ ಸ್ನೇಹಿತರಾದ ಪಾರುಲ್ ಅಗರ್‌ವಾಲ್, ಹೇಮಚಂದ್ರ ರೆಡ್ಡಿ ಮುಂತಾದ ಸ್ನೇಹಿತರ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿದ್ದಾರಂತೆ. ಇನ್ನು ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಉಳಿದಂತೆ ಕಿರಿತೆರೆಯ ಕಲಾವಿದರಾದ, ಅಪ್ಪಣ್ಣ, ಮಿಮಿಕ್ರಿ ಗೋಪಿ, ಆರ್ ಕೆ ಚಂದನ್, ಸಿದ್ದು ಮೂಲಿಮನಿ ಮುಂತಾದವರು ಅಭಿನಯಿಸಿದ್ದಾರೆ.
ಸಂದೀಪ ವಲ್ಲೂರಿ, ದುಲೀಪ್ ಕುಮಾರ್ ಛಾಯಾಗ್ರಹಣವಿದ್ದು, ನಾಲ್ಕು ಹಾಡುಗಳಿರುವ ಚಿತ್ರಕ್ಕೆ ವಿಜಯ್ ಹರಿತ್ಸ್ ಸಂಗೀತ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.