ನ.7ರಿಂದ ದತ್ತಮಾಲಾ ಅಭಿಯಾನ; ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಭಾಗವಹಿಸುವ ನಿರೀಕ್ಷೆ
ನ. 10ರಂದು ದತ್ತ ದೀಪೋತ್ಸವ, ನ. 12ರಂದು ಪಡಿ ಸಂಗ್ರಹ, ನ. 13ರಂದು ಶೋಭಾಯಾತ್ರೆ
Team Udayavani, Oct 11, 2022, 8:48 PM IST
ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ನ. 7ರಿಂದ 13ರವರೆಗೆ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7 ದಿನಗಳ ಕಾಲ ನಡೆಯಲಿರುವ ದತ್ತಮಾಲಾ ಅಭಿಯಾನದಲ್ಲಿ, ನ. 7ರಂದು ದತ್ತ ಭಕ್ತರು ದತ್ತಮಾಲೆ ಧರಿಸಲಿದ್ದಾರೆ. ನ. 10ರಂದು ದತ್ತ ದೀಪೋತ್ಸವ, ನ. 12ರಂದು ಪಡಿ ಸಂಗ್ರಹ (ಭಿûಾಟನೆ), ನ. 13ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, ದತ್ತಪೀಠದಲ್ಲಿ ಹೋಮ, ಹವನ, ಧರ್ಮಸಭೆ ನಡೆಯಲಿದೆ.
ದತ್ತಮಾಲಾ ಅಭಿಯಾನದಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಹಾರಾಷ್ಟ್ರ ಹಿಂದೂ ರಾಷ್ಟ್ರಸೇನೆಯ ಧನಂಜಯ್ ದೇಸಾಯಿ ಹಾಗೂ ಸಾಧು, ಸಂತರು ಭಾಗವಹಿಸಲಿದ್ದಾರೆ. ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಭಾಗವಹಿಸುವ ನಿರೀಕ್ಷೆ ಇದೆ. ದತ್ತಮಾಲಾ ಅಭಿಯಾನದಲ್ಲಿ 10 ಸಾವಿರಕ್ಕೂ ಅಧಿ ಕ ಜನ ಪಾಲ್ಗೊಳ್ಳಲಿದ್ದಾರೆ ಎಂದರು.
ಹಿಂದೂ ಅರ್ಚಕರ ನೇಮಿಸದಿದ್ದರೆ ಉಗ್ರ ಹೋರಾಟ
ಶ್ರೀರಾಮ ಸೇನೆ ದತ್ತಪೀಠ ವಿಚಾರವಾಗಿ 18 ವರ್ಷಗಳ ಸು ಧೀರ್ಘ ಹೋರಾಟ ನಡೆಸುತ್ತಿದೆ. ನ್ಯಾಯಾಲಯ ಹಿಂದೂ ಅರ್ಚಕರ ನೇಮಕ ಮಾಡುವಂತೆ ಆದೇಶಿಸಿದೆ. ಸದನ ಸಮಿತಿ ವರದಿ ನೀಡಿದೆ. ಆದರೆ, ಹಿಂದೂ ಅರ್ಚಕರ ನೇಮಕ ಮಾಡಲು ರಾಜ್ಯ ಸರಕಾರ ಮೀನಮೇಷ ಎಣಿಸುತ್ತಿದೆ. ನ. 13ರ ಒಳಗೆ ಹಿಂದೂ ಅರ್ಚಕರನ್ನು ನೇಮಕ ಮಾಡದಿದ್ದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು. ಅಹಿತಕರ ಘಟನೆ ಸಂಭವಿಸಿದರೆ ರಾಜ್ಯ ಸರಕಾರವೇ ಹೊಣೆ. ನಿರ್ಲಕ್ಷ್ಯ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಗಂಗಾಧರ್ ಕುಲಕರ್ಣಿ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.