ನ್ಯಾ| ಡಿ.ವೈ.ಚಂದ್ರಚೂಡ್ 50ನೇ ಸಿಜೆಐ ಸ್ಥಾನಕ್ಕೆ ನೇಮಕ ಶಿಫಾರಸು
ತಂದೆ ತೀರ್ಪು ಬದಲಿಸಿದ ಪುತ್ರ
Team Udayavani, Oct 12, 2022, 6:20 AM IST
ಸುಪ್ರೀಂಕೋರ್ಟ್‌ನ 50 ನೇ ಮುಖ್ಯನ್ಯಾಯ ಮೂರ್ತಿಯಾಗಿ ಡಿ.ವೈ.ಚಂದ್ರಚೂಡ್ ಅವರು ನೇಮಕವಾಗುವುದು ಖಚಿತ. ಮಂಗಳವಾರ ಹಾಲಿ ಸಿಜೆಐ ಯು.ಯು.ಲಲಿತ್ ಅವರು, ನ್ಯಾ| ಡಿ.ವೈ.ಚಂದ್ರಚೂಡ್ ಅವರ ಹೆಸರನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಹೀಗಾಗಿ ಹಿರಿತನದ ಆಧಾರದ ಮೇಲೆ ಇವರೇ ಮುಂದಿನ ಸಿಜೆಐ ಆಗಲಿದ್ದಾರೆ. ಇದೇ ಮೊದಲ ಬಾರಿಗೆ ತಂದೆ ಏರಿದ್ದ ಸ್ಥಾನಕ್ಕೆ ಪುತ್ರ ಏರುತ್ತಿರುವುದು ವಿಶೇಷ. ಅಂದರೆ ಇವರ ತಂದೆ ನ್ಯಾ| ವೈ.ವಿ.ಚಂದ್ರಚೂಡ್ ಅವರು 1978ರಲ್ಲಿ ಸಿಜೆಐ ಆಗಿದ್ದರು.
ಅಪ್ಪ-ಮಗನ ಸಿಜೆಐ ಹೊಣೆಗಾರಿಕೆಯಲ್ಲಿ ಒಂದು ಸಾಮ್ಯತೆ ಇದೆ. ನ್ಯಾ| ವೈ.ವಿ.ಚಂದ್ರಚೂಡ್ ಅವರು 1978ರಿಂದ 1985ರವರೆಗೆ, ಅಂದರೆ ಏಳು ವರ್ಷದ ವರೆಗೆ ಸಿಜೆಐ ಆಗಿದ್ದರು. ಇಡೀ ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಇಷ್ಟು ದೀರ್ಘಾವಧಿಗೆ ಸಿಜೆಐ ಆಗಿದ್ದವರು ಇವರೊಬ್ಬರೇ. ಈಗ ನ್ಯಾ| ಡಿ.ವೈ.ಚಂದ್ರಚೂಡ್ ಅವರೂ ಸುಮಾರು 2 ವರ್ಷಗಳ ಕಾಲ ಸಿಜೆಐ ಆಗಿರಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟು ದೀರ್ಘಾವಧಿಗೆ ಸಿಜೆಐ ಆಗಿ ಸೇವೆ ಸಲ್ಲಿಸುವವರೂ ಇವರೇ ಆಗಿದ್ದಾರೆ.
ತಂದೆಯ 2 ಕೇಸ್ ಉಲ್ಟಾ
ವಿಶೇಷವೆಂದರೆ ನ್ಯಾ| ಡಿ.ವೈ.ಚಂದ್ರಚೂಡ್ ಅವರು ತಂದೆ ನ್ಯಾ| ವೈ.ವಿ.ಚಂದ್ರಚೂಡ್ ನೀಡಿದ್ದ ಎರಡು ಪ್ರಮುಖ ಪ್ರಕರಣಗಳ ತೀರ್ಪನ್ನು ರದ್ದು ಮಾಡಿ ಹೊಸ ತೀರ್ಪು ನೀಡಿದ್ದಾರೆ. ತುರ್ತುಪರಿಸ್ಥಿತಿ ಕಾಲ, 1975ರಲ್ಲಿ ನ್ಯಾ| ವೈ.ವಿ.ಚಂದ್ರಚೂಡ್ ಅವರಿದ್ದ ಪೀಠ, ಖಾಸಗಿತನದ ಹಕ್ಕನ್ನು ನಿಯಂತ್ರಣದಲ್ಲಿ ಇರಿಸುವುದಕ್ಕೆ ಅವಕಾಶ ನೀಡಿತ್ತು. 2017ರಲ್ಲಿ ನ್ಯಾ| ಡಿ.ವೈ.ಚಂದ್ರಚೂಡ್ ಅವರ ಪೀಠ, ಎಲ್ಲರ ಖಾಸಗಿತನಕ್ಕೂ ಗೌರವವಿದೆ ಎಂದು ಹೇಳಿ, ತುರ್ತುಪರಿಸ್ಥಿತಿ ಕಾಲದ ತೀರ್ಪನ್ನು ರದ್ದು ಮಾಡಿತ್ತು.
ಇನ್ನು ಎರಡನೆಯದಾಗಿ, ವ್ಯಭಿಚಾರವನ್ನು ಅಪರಾಧವೆಂದು ಹೇಳಲಾಗುತ್ತಿದ್ದ ಕಾನೂನನ್ನು ರದ್ದು ಪಡಿಸಿದರು. ಏಕೆಂದರೆ ತಂದೆಯ ಕಾಲದಲ್ಲಿ ವಸಾಹತುಶಾಹಿ ಕಾಲದ ಈ ಕಾನೂನಿಗೆ ಮಾನ್ಯತೆ ಇದೆ ಎಂದು ತೀರ್ಪು ನೀಡಲಾಗಿತ್ತು.
ಹಾರ್ವರ್ಡ್ ವಿವಿಯ ಪದವೀಧರ
ಮಹಾರಾಷ್ಟ್ರ ಮೂಲದ ನ್ಯಾ| ಡಿ.ವೈ.ಚಂದ್ರಚೂಡ್ ಅವರು, ನಿವೃತ್ತ ಸಿಜೆಐ ಯಶವಂತ ವಿಷ್ಣು ಚಂದ್ರಚೂಡ್ ಮತ್ತು ಶಾಸ್ತ್ರೀಯ ಸಂಗೀತಗಾರ್ತಿ ಪ್ರಭಾ ಅವರ ಪುತ್ರ. ಮುಂಬಯಿ, ದಿಲ್ಲಿಯಲ್ಲಿ ಶಿಕ್ಷಣ ಮುಗಿಸಿದ ಇವರು, ಉನ್ನತ ವ್ಯಾಸಂಗಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ತೆರಳಿದ್ದರು. ಅಲ್ಲೇ ನ್ಯಾಯಾಂಗ ವಿಜ್ಞಾನಕ್ಕೆ ಸಂಬಂಧಿಸಿದಂತೆ 1986ರಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಬಳಿಕ ಭಾರತದಲ್ಲಿ ವಕೀಲಿಕೆ ಆರಂಭಿಸಿದ ಇವರು, ಫಾಲಿ ನಾರಿಮನ್ ಅವರ ಜ್ಯೂನಿಯರ್ ಆಗಿಯೂ ಕೊಂಚ ಕಾಲ ಸೇವೆ ಸಲ್ಲಿಸಿದರು. 39ನೇ ವಯಸ್ಸಿಗೇ ಹಿರಿಯ ವಕೀಲ ಎಂಬ ಗೌರವ ಪಡೆದವರು. 1998ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕವಾದರು. 2000ರಲ್ಲಿ ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ನೇಮಕವಾದರು. ಇಲ್ಲಿ 13 ವರ್ಷ ಸೇವೆ ಸಲ್ಲಿಸಿದ ಬಳಿಕ, 2013ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿಯಾದರು. ಇದಾದ ಮೂರು ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ಗೆ ಭಡ್ತಿ ಪಡೆದರು.
ಪ್ರಮುಖ ಕೇಸ್‌ಗಳು
1. ಅಯೋಧ್ಯಾ ರಾಮಮಂದಿರ
2. ಖಾಸಗಿತನದ ಹಕ್ಕು
3. ಆಧಾರ್‌ನ ಸಿಂಧುತ್ವ
4. ಹಾದಿಯಾ ವಿವಾಹ ಪ್ರಕರಣ
5. ಭಿಮಾ ಕೊರಂಗಾವ್ ಹೋರಾಟಗಾರರ ಬಂಧನ
6. ದಯಾಮರಣ ಪ್ರಕರಣ
7. ಶಬರಿಮಲೆ ಪ್ರಕರಣ
8. ನ್ಯಾಯಾಧೀಶ ಲೋಯಾ ಕೊಲೆ ಪ್ರಕರಣ
9. ದಿಲ್ಲಿಯ ಎಲ್‌ಜಿ ಮತ್ತು ರಾಜ್ಯ ಸರಕಾರದ ನಡುವಿನ ವಿವಾದ
10. ಕರ್ನಾಟಕದ ಮೀಸಲಾತಿ ಕುರಿತ ತೀರ್ಪು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.