ಶಾರದೋತ್ಸವ ಫ್ಲೆಕ್ಸ್ಗಳಿಗೆ ಹಾನಿ: ಮೂವರ ಬಂಧನ
Team Udayavani, Oct 12, 2022, 12:41 AM IST
ಮಂಗಳೂರು: ವಾಮಂಜೂರು ಜಂಕ್ಷನ್ನ ಆಸುಪಾಸಿನಲ್ಲಿ ಶಾರದೋತ್ಸವ ಬಗ್ಗೆ ವಾಮಂಜೂರು ಫ್ರೆಂಡ್ಸ್ ಸಂಘಟನೆ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದ್ದ ಫ್ಲೆಕ್ಸ್ಗಳನ್ನು ಅ.8ರಂದು ರಾತ್ರಿ ಹರಿದು ಹಾಕಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಿತ್ ಹೆಗ್ಡೆ(25), ಯತೀಶ್ ಪೂಜಾರಿ (24) ಮತ್ತು ಪ್ರವೀಣ್ ಪೂಜಾರಿ(24) ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಲಿ ವೇಷ ತಂಡಗಳ ನಡುವಿನ ವೈಷಮ್ಯ
ಎರಡು ಹುಲಿವೇಷ ತಂಡಗಳ ನಡುವಿನ ವೈಮನಸ್ಸಿನ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎನ್ನಲಾಗಿದೆ. ವಾಮಂಜೂರಿನಲ್ಲಿ ವಾಮಂಜೂರು ಫ್ರೆಂಡ್ಸ್ ಹುಲಿ ವೇಷ ತಂಡದವರು ದಸರಾ ಸಂದರ್ಭ ಮತ್ತು ವಾಮಂಜೂರು ಟೈಗರ್ಸ್ ತಂಡದವರು ಗಣೇಶೋತ್ಸವ ಸಂದರ್ಭ ಹುಲಿ ವೇಷ ಹಾಕುತ್ತಿದ್ದರು.
ಬಂಧಿತ ಆರೋಪಿಗಳು ವಾಮಂಜೂರು ಟೈಗರ್ಸ್ ತಂಡದ ಸದಸ್ಯರು. ಧಾರ್ಮಿಕ ಭಾವನೆಗೆ ಧಕ್ಕೆ ತಂದು ಶಾಂತಿ ಕದಡುವ ಹುನ್ನಾರವೂ ಆರೋಪಿಗಳದ್ದಾಗಿತ್ತು ಎಂದು ತಿಳಿದು ಬಂದಿದೆ. ಆರೋಪಿಗಳ ಕೃತ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು ಅದರ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.