ಬುಧವಾರದ ರಾಶಿ ಫಲ : ಈ ರಾಶಿಯವರು ಹಣಕಾಸಿನ ವ್ಯವಹಾರದ ಮೇಲೆ ಹೆಚ್ಚು ನಿಗಾ ವಹಿಸಿ
Team Udayavani, Oct 12, 2022, 7:21 AM IST
ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಮಾತೃ ಸಮಾನರಿಂದ ಪ್ರೋತ್ಸಾಹ. ಜವಾಬ್ದಾರಿಯುತ ಕಾರ್ಯಪ್ರವೃತ್ತಿಯಿಂದ ಕುಟುಂಬದಲ್ಲಿ ಮನ್ನಣೆ. ನಿರೀಕ್ಷಿಸಿದಷ್ಟು ಧನ ಸಂಪತ್ತು ಲಭಿಸಿದ್ದರೂ ಮನಃ ತೃಪ್ತಿಗೆ ಕೊರತೆಯಾಗದು.
ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಕೀರ್ತಿ ಸಂಪಾದನೆ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಅಧಿಕ ಧನ ಸಂಚಯನ. ಬಂಧುಗಳಿಂದ ಕುಟುಂಬವರ್ಗದವರಿಂದ ಪ್ರೋತ್ಸಾಹ. ಮಕ್ಕಳಿಂದ ಶ್ರೇಯ.
ಮಿಥುನ: ಚುರುಕುತನ ಪಟುತ್ವ, ವಿದ್ಯೆ ವಿನಯ ಸಂಪನ್ನತೆಯಿಂದ ದಿನಚರಿ ಆರಂಭ. ಸಮಾಜದಲ್ಲಿ ಸ್ಥಾನಮಾನ ಗೌರವಾದಿ ವೃದ್ಧಿ. ಕೀರ್ತಿ ಪ್ರಾಪ್ತಿ. ಸ್ಥಿರ ಸಂಪತ್ತು ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಕರ್ಕ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಿತ್ರರಿಂದ ನಿರೀಕ್ಷಿತ ಸಹಾಯ ಲಭ್ಯ. ಗುರುಹಿರಿಯರಲ್ಲಿ ಸಮಾದಾನದಿಂದ ವರ್ತಿಸಿ. ಅವರ ಮಾರ್ಗದರ್ಶನ ಸದುಪಯೋಗಿಸಿಕೊಳ್ಳುವುದರಿಂದ ಶ್ರೇಯಸ್ಸು ಲಭ್ಯ.
ಸಿಂಹ: ಆರೋಗ್ಯ ಗಮನಿಸಿ. ಸ್ಥಿರ ಬುದ್ಧಿಯಿಂದ ಕಾರ್ಯ ಪ್ರವೃತ್ತಿ. ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ. ಅಧಿಕ ಪರಿಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಸಫಲತೆ ಕಂಡೀತು.
ಕನ್ಯಾ: ದೂರ ಪ್ರಯಾಣ. ಬಂಧುಮಿತ್ರರ ಮಿಲನ. ಸಂತೋಷ ವೃದ್ಧಿ. ಸಾಂಸಾರಿಕ ಸುಖವೃದ್ಧಿ. ಗೃಹದಲ್ಲಿ ಮನೋರಂಜನೆಯ ವಾತಾವರಣ. ಮಕ್ಕಳಿಂದ ಸುಖ ಸಂತೋಷ ವಾರ್ತೆ. ಆರ್ಥಿಕ ಸುದೃಡತೆ ಇತ್ಯಾದಿ.
ತುಲಾ: ಜ್ಞಾನ ವಿವೇಕ ನಿಷ್ಠೆಯಿಂದ ಕೂಡಿದ ಧಾರ್ಮಿಕ ಚಟುವಟಿಕೆಗಳು. ಗುರುಹಿರಿಯರ ಸೂಕ್ತ ಮಾರ್ಗದರ್ಶನ ಲಾಭ. ಮಾನಸಿಕ ನೆಮ್ಮದಿ. ತೃಪ್ತಿದಾಯಕ ದಿನ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.
ವೃಶ್ಚಿಕ: ಆರೋಗ್ಯ ಗಮನಿಸಿ. ದೈಹಿಕವಾಗಿ ಹೆಚ್ಚು ಶ್ರಮ ವಹಿಸದೇ ಕಾರ್ಯ ಪ್ರವೃತ್ತರಾಗಿ. ದೀರ್ಘ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಅಧಿಕ ಚಿಂತಿಸದಿರಿ. ಪರರಿಗೆ ಜವಾಬ್ದಾರಿ ವಹಿಸುವುದರಿಂದ ತಿಳಿದು ನಿರ್ಣಯಿಸಿ.
ಧನು: ನಿರೀಕ್ಷಿತ ಸ್ಥಾನ ಮಾನ ಗೌರವಾದಿ ಸಿಕ್ಕಿದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ. ದಂಪತಿಗಳಿಂದ ಸಾಮರಸ್ಯ ಕಾಪಾಡಲು ಅಧಿಕ ಪರಿಶ್ರಮ ಎದುರಾದೀತು. ಹಣಕಾಸಿನ ವಿಚಾರದಲ್ಲಿ ಕೊರತೆಯಾಗದು.
ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಿದ ತೃಪ್ತಿ. ಅನಿರೀಕ್ಷಿತ ಧನವೃದ್ಧಿ. ಅತೀ ಬುದ್ಧಿವಂತಿಕೆಯಿಂದ ಕೂಡಿದ ಮಾತುಗಳಿಂದ ಕಾರ್ಯವೈಖರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಪರಿಶ್ರಮ ಹಾಗೂ ಸಫಲತೆ. ವಿದ್ಯಾರ್ಥಿಗಳಿಂದ ಸುವಾರ್ತೆ.
ಕುಂಭ: ಆಸ್ತಿ ಸಂಚಯನದಲ್ಲಿ ಪ್ರಗತಿ. ದೂರ ಪ್ರಯಾಣ. ಧಾರ್ಮಿಕ ಚಟುವಟಿಕೆಗಲ್ಲಿ ಭಾಗಿಯಾದ ಸಂತೋಷ. ಗುರುಹಿರಿಯರಿಂದ ಉತ್ತಮ ಸಹಕಾರ ಪ್ರೋತ್ಸಾಹ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ಪ್ರಗತಿ. ಸಾಲ ಬಾಧೆ ಕಾಡೀತು.
ಮೀನ: ಆರೋಗ್ಯ ವೃದ್ಧಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಮಿತ್ರರೊಂದಿಗೆ ತಾಳ್ಮೆಯಿಂದ ವಿವೇಚನದಿಂದ ನಡೆದುಕೊಳ್ಳಿ. ಅನಗತ್ಯ ಜವಾಬ್ದಾರಿ ತೆಗೆದುಕೊಳ್ಳದಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.