ಸ್ಯಾಮ್‍ಸಂಗ್‍ ಗೆಲಾಕ್ಸಿ ವಾಚ್‍ 5 ಪ್ರೊ: ಹಲವು ವೈಶಿಷ್ಟ್ಯಗಳುವುಳ್ಳ ಆಂಡ್ರಾಯ್ಡ್ ವಾಚ್‍


Team Udayavani, Oct 13, 2022, 10:27 AM IST

ಸ್ಯಾಮ್‍ಸಂಗ್‍ ಗೆಲಾಕ್ಸಿ ವಾಚ್‍ 5 ಪ್ರೊ: ಹಲವು ವೈಶಿಷ್ಟ್ಯಗಳುವುಳ್ಳ ಆಂಡ್ರಾಯ್ಡ್ ವಾಚ್‍

ಈಗ ಸ್ಮಾರ್ಟ್ ವಾಚ್‍ ಧರಿಸುವುದು ಟ್ರೆಂಡ್‍ ಆಗಿದೆ. ಒಂದೆರಡು ವರ್ಷಗಳ ಹಿಂದೆ ಸ್ಮಾರ್ಟ್‍ ಬ್ಯಾಂಡ್‍ಗಳನ್ನು ಕಟ್ಟುತ್ತಿದ್ದವರೆಲ್ಲ ಈಗ ಸ್ಮಾರ್ಟ್ ವಾಚ್‍ ಗೆ ಅಪ್‍ ಡೇಟ್‍ ಆಗಿದ್ದಾರೆ. 1500 ರೂ. ಗಳಿಂದ ಹಿಡಿದು, 50-60 ಸಾವಿರ ರೂ.ಗಳವರೆಗೂ ಸ್ಮಾರ್ಟ್‍ ವಾಚ್‍ಗಳು ಭಾರತದ ಮಾರುಕಟ್ಟೆಯಲ್ಲಿವೆ. ಭಾರತದ ಮಾರುಕಟ್ಟೆಯಲ್ಲಿ ಸ್ಯಾಮ್‍ ಸಂಗ್‍ ವಾಚ್‍ಗಳು ಪ್ರಮುಖ ಸ್ಥಾನವನ್ನು ಅಲಂಕರಿಸಿವೆ. ಪ್ರೀಮಿಯಂ ವಾಚ್‍ ಗಳ ವಿಭಾಗದಲ್ಲಿ ಸ್ಯಾಮ್ ಸಂಗ್‍ ಅಗ್ರಗಣ್ಯವಾಗಿದೆ.  ಸ್ಯಾಮ್‍ ಸಂಗ್‍ ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಹೊಸ ವಾಚ್‍ ಗೆಲಾಕ್ಸಿ ವಾಚ್‍ 5 ಪ್ರೊ.

ಇದರಲ್ಲಿ ಎರಡು ಆವೃತ್ತಿಗಳಿವೆ. ವಾಚ್‍ 5 ಪ್ರೊ ಎಲ್‍ಟಿಇ (ಇ ಸಿಮ್‍ ವರ್ಷನ್‍), ವಾಚ್‍ 5 ಪ್ರೊ ಬಿಟಿ (ಬ್ಲೂ ಟೂತ್‍ ವರ್ಷನ್‍). ಕ್ರಮವಾಗಿ ಇವುಗಳ ದರ, 49,999 ರೂ. ಹಾಗೂ 44,999 ರೂ. ಈ ವಾಚಿನ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.

ವಿನ್ಯಾಸ: ಈ ವಾಚಿನ ಕೇಸ್‍ 45 ಮಿ.ಮೀ. ಇದೆ. ಇದರ ತೂಕ 47 ಗ್ರಾಂ ಇದೆ. (ಬೆಲ್ಟ್ ಹೊರತುಪಡಿಸಿ). ಇದು ಟೈಟಾನಿಯಂ ಕೇಸ್‍ ಹೊಂದಿದೆ.  ಸ್ಯಾಫೈರ್‍ ಗಾಜಿನ ಡಿಸ್‍ಪ್ಲೇ ಹೊಂದಿದೆ. ಇದು ಡಿಸ್‍ಪ್ಲೇ ತರಚು, ಗೀರು ಆಗದಂತೆ ರಕ್ಷಿಸುತ್ತದೆ.  ಐಪಿ 68 ರೇಟಿಂಗ್‍ ಹೊಂದಿದ್ದು, ಧೂಳು, ನೀರು ನಿರೋಧಕವಾಗಿದೆ. ವಾಚಿನ ವೃತ್ತಾಕಾರದ ಕೇಸಿನ ತುಸು ಆಚೆ ಬರುವಂತೆ ಎರಡು ಸಣ್ಣ ಬಟನ್‍ ನೀಡಲಾಗಿದೆ. ಇದನ್ನು ಮೆಲ್ಲಗೆ ಒತ್ತಿದಾಗ ಮೆನು ಆಯ್ಕೆಗೆ ಹೋಗಬಹುದು ಮತ್ತು ಮೆನುವಿನಿಂದ ಹೊರ ಬರಬಹುದು.

ವಾಚಿನ ಬೆಲ್ಟ್ ವಿನ್ಯಾಸ ಬಹಳ ಅನುಕೂಲಕರವಾಗಿದೆ. ಬೆಲ್ಟಿನಲ್ಲೇ ಚೈನಿನಂತೆ  ನಮ್ಮ ಕೈ ಅಳತೆಗೆ ಎಷ್ಟು ಬೇಕೋ ಅಷ್ಟು ಸೈಜಿಗೆ ಕಟ್ಟಿಕೊಳ್ಳಬಹುದಾದ  ಆಯ್ಕೆಯಿದೆ. ಸಾಮಾನ್ಯವಾಗಿ ಬೆಲ್ಟ್ ವಾಚುಗಳಲ್ಲಿ ರಂಧ್ರಗಳಿರುತ್ತವೆ. ನಿಮಗೆ ಬೇಕಾದ ಅಳತೆಗೆ ಕಟ್ಟಿಕೊಳ್ಳಬೇಕು. ಆದರೆ ಇದರಲ್ಲಿ ರಂಧ್ರಗಳಿಲ್ಲ. ಬೆಲ್ಟ್ ನಲ್ಲೇ ಬಕಲ್‍ ನೀಡಲಾಗಿದೆ. ಅದನ್ನು ನಿಮ್ಮ ಕೈಗೆ ಬೇಕಾದ ಅಳತೆಗೆ ಹೊಂದಿಸಿಕೊಳ್ಳಬಹುದು.          ಸಿಲಿಕಾನ್‍ ಬೆಲ್ಟ್ ನೀಡಲಾಗಿದೆ. ಬೆಲ್ಟ್ ನ ಗುಣಮಟ್ಟ ಚೆನ್ನಾಗಿದೆ. ವಾಚು ಕೈಯಲ್ಲಿ ಕಟ್ಟಿಕೊಂಡಾಗ ಸ್ವಲ್ಪ ದಪ್ಪ ಎನಿಸುತ್ತದೆ. ಆದರೆ ಅದು ಈಗಿನ ಟ್ರೆಂಡ್‍ ಆದ್ದರಿಂದ  ನೋಡಲು ಪ್ರೀಮಿಯಂ ಲುಕ್‍ ಹೊಂದಿದೆ.

ಪರದೆ: ಸ್ಯಾಮ್‍ ಸಂಗ್‍  ಫೋನ್‍ ಗಳ  ಡಿಸ್‍ಪ್ಲೇ ಗುಣಮಟ್ಟಕ್ಕೆ ಪ್ರಸಿದ್ಧಿ. ಹಾಗೆಯೇ ಈ ವಾಚಿನಲ್ಲಿ 1.4 ಇಂಚಿನ ಸುಪರ್ ಅಮೋಲೆಡ್‍ ಡಿಸ್‍ ಪ್ಲೇ ಗೂ ಕೂಡ ಇದು ಅನ್ವಯಿಸುತ್ತದೆ. ಸುಂದರವಾದ ಡಿಸ್‍ಪ್ಲೇ, ಬಣ್ಣಗಳ ಹೊಂದಾಣಿಕೆ, ಅಕ್ಷರಗಳ ಸ್ಪಷ್ಟತೆ ಮತ್ತು ಚುರುಕಾದ ಟಚ್‍ ಸ್ಕ್ರೀನ್‍ ಅನುಭವ ದೊರಕುತ್ತದೆ.

ಟ್ಯಾಪ್‍ ಮಾಡುವಾಗ, ಸ್ವೈಪ್‍ ಮಾಡುವಾಗ ಯಾವುದೇ ಅಡೆತಡೆಯಿಲ್ಲದಂತೆ ಸರಾಗವಾದ ಅನುಭವ ನೀಡುತ್ತದೆ.

ಓಎಸ್‍: ಸ್ಯಾಮ್ ಸಂಗ್‍ ಮಾತೃ ತಯಾರಿಕೆಯಾದ ಎಕ್ಸಿನಾಸ್‍ ಡಬ್ಲೂ 920 ಪ್ರೊಸೆಸರ್ ಅನ್ನು ಇದು ಒಳಗೊಂಡಿದೆ.  ಇದು ಗೂಗಲ್‍ನ  ವಿಯರ್‍ ಓಎಸ್‍ ಕಾರ್ಯಾಚರಣೆ ಹೊಂದಿದ್ದು,  ಸ್ಯಾಮ್‍ಸಂಗ್‍ ಒನ್‍ ಯೂಐ ಜೊತೆಗಿದೆ. ಮುಂಚೆ ಸ್ಯಾಮ್‍ ಸಂಗ್‍ ವಾಚ್‍ಗಳಿಗೆ ಟೈಜನ್‍ ಓಎಸ್‍ ಬಳಸುತ್ತಿತ್ತು. ಇದರಲ್ಲಿ ಗೂಗಲ್‍ ಪ್ಲೇ ಸ್ಟೋರ್ ಇದೆ. ಗೂಗಲ್‍ ಮ್ಯಾಪ್‍ ಸೇರಿದಂತೆ ಇನ್ನಿತರ ಗೂಗಲ್‍ ಆಪ್‍ಗಳನ್ನು ಇನ್‍ ಸ್ಟಾಲ್ ಮಾಡಿಕೊಳ್ಳಬಹುದು. ಸ್ಯಾಮ್‍ ಸಂಗ್‍  ಫೋನಿನಲ್ಲಿ ನೋಡುವ ಬಹುತೇಕ ಆಂಡ್ರಾಯ್ಡ್ ಆಪ್‍ಗಳು ಮೊದಲೇ ಇನ್ ಸ್ಟಾಲ್‍ ಆಗಿವೆ.

ಇದು 1.5 ರ್ಯಾಮ್‍ ಮತ್ತು 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಈಗಾಗಲೇ ಇನ್‍ ಸ್ಟಾಲ್‍ ಆಗಿರುವ  ಆಪ್‍ಗಳ ಸಂಗ್ರಹ ಕಳೆದರೆ ಇನ್ನು 7.5 ಜಿಬಿ  ಆಂತರಿಕ ಸಂಗ್ರಹ ಇದೆ.

ಇದರ ಓಎಸ್‍, ಯೂಸರ್ ಇಂಟರ್‍ ಫೇಸ್‍ ಆಕರ್ಷಕವಾಗಿವೆ. ಬಜೆಟ್‍ ವಾಚ್‍ಗಳಿಗೂ ಇಂತಹ ವಾಚ್‍ಗಳಿಗೂ ಎಷ್ಟೊಂದು ವ್ಯತ್ಯಾಸ ಇರುತ್ತದೆ ಎಂದು ತಿಳಿಯುತ್ತದೆ.  ವಾಚನ್ನು ಟಚ್‍ ಮೂಲಕ ನಿರ್ವಹಣೆ ಮಾಡಿದಾಗ ಬಹಳ ವೇಗವಾಗಿ ಕಾರ್ಯಾಚರಿಸುತ್ತದೆ. ಯಾವುದೇ

ಇಂತಹ ಸ್ಮಾರ್ಟ್ ವಾಚುಗಳನ್ನು ಬಳಸುವುದೇ ದಿನ ನಿತ್ಯದ ವ್ಯಾಯಾಮ, ಓಟ, ನಿದ್ರೆ, ಇತ್ಯಾದಿಗಳ ಪ್ರಮಾಣ ಅಳೆಯುವ ಸಲುವಾಗಿ. ಇದರಲ್ಲಿ ನಡಿಗೆ, ಓಟ, ಸೈಕ್ಲಿಂಗ್‍, ರನ್ನಿಂಗ್ ಕೋಚ್‍, ಈಜು,  ಟ್ರೆಡ್‍ಮಿಲ್‍, ಭಾರ ಎತ್ತುವಿಕೆ, ಏರೋಬಿಕ್ಸ್, ಫುಟ್‍ ಬಾಲ್‍, ಬಿಲ್ವಿದ್ಯೆ ಮುಂತಾದ 90 ಬಗೆಯ ವರ್ಕೌಟ್‍ ಗಳನ್ನು ಆಯ್ಕೆ ಮಾಡಿಕೊಂಡು ಅದರ ಚಟುವಟಿಕೆಗಳನ್ನು ಮಾಪನ ಮಾಡಬಹುದಾಗಿದೆ. ಆಯಾ ಚಟುವಟಿಕೆಗಳನ್ನು ಮಾಡುತ್ತಿರುವ ಸಮಯ,  ಕ್ಯಾಲರಿಗಳ ಬರ್ನಿಂಗ್‍,  ಹೃದಯ ಬಡಿತಗಳ ಸಂಖ್ಯೆ ಇತ್ಯಾದಿಗಳನ್ನು ತೋರಿಸುತ್ತದೆ. ಹೊರಾಂಗಣದಲ್ಲಿ ಸೈಕ್ಲಿಂಗ್‍ ಹೋದಾಗ ನೀವು ಹೋದ ದಾರಿಯಲ್ಲೇ ವಾಪಸ್‍ ಬರುವ ನ್ಯಾವಿಗೇಷನ್‍ ಅನ್ನು ಸಹ ಇದು ತೋರಿಸುತ್ತದೆ.

ಬಾಡಿ ಕಂಪೋಸಿಷನ್‍ ಎನ್ನುವ ವೈಶಿಷ್ಟ್ಯ ಆನ್‍ ಮಾಡಿದಾಗ ನಮ್ಮ ದೇಹದೊಳಗಿನ ಅನೇಕ ಅಂಶಗಳ ಮಾಪನ ದೊರಕುತ್ತದೆ. ಬಾಡಿ ಮಾಸ್‍ ಇಂಡೆಕ್ಸ್ ಅನ್ನು ಎರಡು ಕೀಗಳಿಗೆ ಮಧ್ಯದ ಮತ್ತು ಉಂಗುರದ ಬೆರಳನ್ನು ಇಡುವ ಮೂಲಕ ಪರೀಕ್ಷಿಸಬಹುದು. ಇದರಲ್ಲಿ ದೇಹದ ಕೊಬ್ಬಿನ ಪ್ರಮಾಣ, ದೇಹದಲ್ಲಿರುವ ನೀರಿನ ಅಂಶ, ಬಿಎಂಆರ್‍ ಇತ್ಯಾದಿ ತಿಳಿಯುತ್ತದೆ.

ಒತ್ತಡ ಮಾಪಕ ಇದೆ. ಒತ್ತಡವನ್ನು ನಿಯಂತ್ರಿಸಲು ಉಸಿರನ್ನು ಒಳಗೆ ಹಾಗೂ ಹೊರಗೆ ಹಾಕುವ ಸಮಯ ಮಾಪಕ ಇದೆ. ಇದು ಪ್ರಾಣಾಯಾಮ ಮಾಡುವವರಿಗೆ ಅತ್ಯಂತ ಅನುಕೂಲಕರ ಫೀಚರ್‍ ಆಗಿದೆ.

ಇಸಿಮ್‍ ಬಳಕೆ : ಅನೇಕ ಸ್ಮಾರ್ಟ್‍ ವಾಚ್‍ಗಳಲ್ಲಿ ಬ್ಲೂಟೂತ್‍ ಮೂಲಕ ಫೋನ್‍ ಗೆ ಸಂಪರ್ಕ ಮಾಡಿಕೊಂಡಾಗ ಕರೆ ಸ್ವೀಕರಿಸುವ, ಕರೆ ಮಾಡುವ ಆಯ್ಕೆ ಇದೆ. ಆದರೆ ಈ ವಾಚ್‍ನಲ್ಲಿ  ನೀವು ಫೋನ್‍ ನಲ್ಲಿ ಬಳಸುತ್ತಿರುವ ಸಿಮ್‍ ನ ನಂಬರ್‍ ಅನ್ನೇ ವಾಚ್‍ನಲ್ಲಿರುವ ಇ ಸಿಮ್‍ ಫೀಚರ್‍ ಗೆ ಸೆಟಿಂಗ್‍ ಮಾಡಿಕೊಂಡು ಪ್ರತ್ಯೇಕವಾಗಿ ಬಳಸಬಹುದು. ಜಿಯೋ ಸಿಮ್‍ ಗೆ ಈ ಆಯ್ಕೆ ಇದೆ. ಇದರಿಂದಾಗಿ ವಾಚ್‍ 5 ಪ್ರೊ ಬ್ಲೂಟೂತ್‍ ಮೂಲಕ ಫೋನ್‍ಗೆ ಕನೆಕ್ಟ್ ಆಗಿಲ್ಲದಾಗಲೂ ಕೂಡ, ನಮ್ಮ ನಂಬರ್ ಗೆ ಕರೆಗಳು ಬಂದಾಗ ಫೋನ್‍ ನಲ್ಲೇ ನೊಟಿಫಿಕೇಷನ್‍ ಬರುತ್ತದೆ. ಅಲ್ಲೇ ಕರೆ ಸ್ವೀಕರಿಸಿ ಮಾತನಾಡಬಹುದು. ಮತ್ತು ಕರೆಗಳನ್ನು ಮಾಡಬಹುದು. ಮನೆಯಲ್ಲಿ ಫೋನ್‍ ಮರೆತು ಹೋದರೂ, ಈ ವಾಚ್‍ ಇದ್ದರೆ ಫೋನ್‍ ನಂತೆ ಬಳಸಬಹುದು. ಇಯರ್‍ ಬಡ್‍ ಅನ್ನು ಬಳಸಿದರೆ ವಾಚನ್ನು ಕಿವಿಯಲ್ಲಿ ಹಿಡಿಯದೇ ಮಾತನಾಡಬಹುದು.

ಬ್ಯಾಟರಿ: ಇದು 590 ಎಂಎಎಚ್‍ ಬ್ಯಾಟರಿ ಹೊಂದಿದೆ. ಸಾಮಾನ್ಯ ಬಳಕೆಗೆ 80 ಗಂಟೆ ಹಾಗೂ ಜಿಪಿಎಸ್‍ ಆನ್‍ ಮಾಡಿದರೆ 20 ಗಂಟೆಗಳ ಬಾಳಿಕೆ ಬರುತ್ತದೆ ಎಂದು ಕಂಪೆನಿ ಹೇಳುತ್ತದೆ. ಆದರೆ ಇ- ಸಿಮ್‍ ಫೀಚರ್ ಬಳಸಿದಾಗ ಬ್ಯಾಟರಿ ಬಾಳಿಕೆ ಕಡಿಮೆ ಆಗುತ್ತದೆ.

ಒಟ್ಟಾರೆ, ಆಂಡ್ರಾಯ್ಡ್ ಬಳಕೆದಾರರಿಗೆ ಇದೊಂದು ಅತ್ಯುತ್ತಮ ವಾಚ್‍. ಫಿಟ್‍ನೆಸ್‍, ಸ್ಪೋಟ್ಸ್ಸ್, ಸ್ಟೈಲ್‍, ಕರೆ ಮಾಡಲು, ಸಂಗೀತ ಕೇಳಲು ಸೇರಿದಂತೆ ಅನೇಕ ಅನುಕೂಲಕರ ವೈಶಿಷ್ಟ್ಯಗಳಿರುವ ಒಂದು ಮಾದರಿ ವಾಚ್‍ ಇದು ಎನ್ನಲಡ್ಡಿಯಿಲ್ಲ.

 

-ಕೆ. ಎಸ್‍. ಬನಶಂಕರ ಆರಾಧ್ಯ.

 

ಟಾಪ್ ನ್ಯೂಸ್

Mohua Moitra

NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

Maruti Suzuki Epic New:ಮಾರುತಿ ಸುಜುಕಿ ಎಪಿಕ್‌ ನ್ಯೂಸ್ವಿಫ್ಟ್ ನ 500 ಕಾರುಗಳ ಡೆಲಿವರಿ

Maruti Suzuki Epic New:ಮಾರುತಿ ಸುಜುಕಿ ಎಪಿಕ್‌ ನ್ಯೂಸ್ವಿಫ್ಟ್ ನ 500 ಕಾರುಗಳ ಡೆಲಿವರಿ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mohua Moitra

NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್

National Highway ವಾಹನಗಳ ವೇಗ ನಿಯಂತ್ರಣಕ್ಕೆ ಲೇಸರ್ ಟ್ರ್ಯಾಕ್ ಅಳವಡಿಕೆ

National Highway ವಾಹನಗಳ ವೇಗ ನಿಯಂತ್ರಣಕ್ಕೆ ಲೇಸರ್ ಟ್ರ್ಯಾಕ್ ಅಳವಡಿಕೆ

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.