ಸೇನೆಯ ಶ್ವಾನ ವೀರರು


Team Udayavani, Oct 14, 2022, 6:10 AM IST

ಸೇನೆಯ ಶ್ವಾನ ವೀರರು

ಮೂರು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹೋರಾಡಿ,ಗಾಯಗೊಂಡಿದ್ದ ಸೇನೆಯ ಶ್ವಾನ “ಝೂಮ್‌’ ಗುರುವಾರ ಕೊನೆಯುಸಿರೆಳೆದಿದೆ. ಇದೇ ರೀತಿ ಈ ಹಿಂದೆಯೂ ಸೇನೆಯಲ್ಲಿ ನಿಯೋಜನೆಗೊಂಡಿದ್ದ ಅನೇಕ ಶ್ವಾನಗಳು ವಿವಿಧ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ದೇಶಕ್ಕಾಗಿ ಪ್ರಾಣ ತೆತ್ತಿವೆ ಮತ್ತು ಧೀರೋದಾತ್ತ ಹೋರಾಟ ನಡೆಸಿ ಹಲವರ ಜೀವ ರಕ್ಷಿಸಿವೆ. ಅಂಥ ಶ್ವಾನಗಳ ಪರಿಚಯ ಇಲ್ಲಿದೆ.

ಆ್ಯಕ್ಸೆಲ್‌ :

ಇದೇ ವರ್ಷದ ಜುಲೈಯಲ್ಲಿ ಸೇನೆಯ “ಅಸಾಲ್ಟ್ ಕೆನೈನ್‌’ ಆಗಿದ್ದ ಆ್ಯಕ್ಸೆಲ್‌ ಕಣಿವೆ ರಾಜ್ಯದಲ್ಲಿ ನಡೆದ ಉಗ್ರನಿಗ್ರಹ ಕಾರ್ಯಾಚರಣೆಯಲ್ಲಿ   ವೀರಮರಣ ವನ್ನಪ್ಪಿತ್ತು. ಸ್ವಾತಂತ್ರ್ಯ ದಿನದಂದು ಆ್ಯಕ್ಸೆಲ್‌ಗೆ ಮರಣೋತ್ತರ ಶೌರ್ಯ ಪದಕವನ್ನು ನೀಡಲಾಗಿತ್ತು. ಜು.30ರಂದು ಸೇನೆಯು “ಆಪರೇಶನ್‌ ವಾನಿಗಮ್‌ ಬಾಲಾ’ ಎಂಬ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ 7.62 ಮಿ.ಮೀ. ಎಕೆ-47 ರೈಫ‌ಲ್‌ ಹಿಡಿದುಕೊಂಡಿದ್ದ ಭಯೋತ್ಪಾದಕನ ಮೇಲೆರಗಿತ್ತು ಆ್ಯಕ್ಸೆಲ್‌. ಎಚ್ಚೆತ್ತು ಕೊಂಡ ಉಗ್ರ, ಆ್ಯಕ್ಸೆಲ್‌ ಮೇಲೆ ಗುಂಡಿನ ಮಳೆಗರೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದರೂ ಮತ್ತೆ ಆತನ ಮೇಲೆ ದಾಳಿ ನಡೆಸಲು ಆ್ಯಕ್ಸೆಲ್‌ ಪ್ರಯತ್ನಿಸಿತ್ತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಅಲ್ಲೇ ಕುಸಿದುಬಿತ್ತು. 3 ಗುಂಡುಗಳು ಆ್ಯಕ್ಸೆಲ್‌ನ ತಲೆಗೆ ಹೊಕ್ಕಿತ್ತು. ಪೋಸ್ಟ್‌ ಮಾರ್ಟಂ ವೇಳೆ ಶ್ವಾನದ ದೇಹದಲ್ಲಿ 10ಕ್ಕೂ ಹೆಚ್ಚು ಗುಂಡಿನ ಗಾಯಗಳಿದ್ದುದು ಕಂಡುಬಂತು.

ರೆಕ್ಸ್‌  :

1993ರಲ್ಲಿ ಜನಿಸಿದ ಗೋಲ್ಡನ್‌ ಲ್ಯಾಬ್ರಡಾರ್‌ ತಳಿಯ ಶ್ವಾನ. ಡೆಲ್ಟಾ ಫೋರ್ಸ್‌ನಡಿ 14 ಆರ್ಮಿ ಡಾಗ್‌ ಯುನಿಟ್‌ನಲ್ಲಿ ನಿಯೋಜನೆಗೊಂಡಿತ್ತು. 1995ರಲ್ಲಿ ಎನ್‌ಕೌಂಟರ್‌ವೊಂದರಲ್ಲಿ ಗಾಯಗೊಂಡು ಬಿದ್ದಿದ್ದ ಉಗ್ರನನ್ನು ರೆಕ್ಸ್‌ ಪತ್ತೆಹಚ್ಚಿತ್ತು. ಸತತ 4 ಗಂಟೆಗಳ ಕಾಲ ಬೆನ್ನು ಹತ್ತಿದ ಬಳಿಕ ಎಕೆ 56 ರೈಫ‌ಲ್‌ ಮತ್ತು 92 ಸುತ್ತು ಗುಂಡುಗಳಿದ್ದ ಚೀಲವನ್ನೂ ರೆಕ್ಸ್‌ ಪತ್ತೆಹಚ್ಚಿ ಕೊಟ್ಟಿತ್ತು. 1998ರಲ್ಲೂ ಅಡಗು ತಾಣ ವೊಂದ ರಲ್ಲಿ ಸತ್ತುಬಿದ್ದಿದ್ದ ಉಗ್ರ ನನ್ನು ಟ್ರೇಸ್‌ ಮಾಡಿತ್ತು. ರಜೌರಿಯಲ್ಲಿ ಮತ್ತೂಂದು ಆಪ ರೇಶನ್‌ ನಡೆಯುತ್ತಿ ದ್ದಾಗ, ಮೇಲಿಂದ ಜಿಗಿ ಯುವ ವೇಳೆ ರೆಕ್ಸ್‌ ಗಂಭೀರ ವಾಗಿ ಗಾಯ ಗೊಂಡಿತ್ತು. ಅದರ ಕರು ಳಿಗೆ ಗಂಭೀರ ಗಾಯ ವಾದ ಕಾರಣ 1999 ಸೆ.22ರಂದು ರೆಕ್ಸ್‌ ಅಸುನೀಗಿತು.

ಝೂಮ್‌ : ಮಲಿನಾಯ್ಸ ಅಥವಾ ಬೆಲ್ಜಿಯನ್‌ ಶೆಫ‌ರ್ಡ್‌ ಜಾತಿಯ ಶ್ವಾನ. ಇದಕ್ಕೆ ಕೇವಲ 2 ವರ್ಷಗಳಾಗಿದ್ದರೂ ಕಳೆದ 8 ತಿಂಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿತ್ತು. ಹಲವು ಸಕ್ರಿಯ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು. ಅನಂತ್‌ನಾಗ್‌ನಲ್ಲಿ ಅ.10ರಂದು ನಡೆದ ಆಪರೇಶನ್‌ ವೇಳೆ ಝೂಮ್‌ ಏಕಾಏಕಿ ಉಗ್ರರ ಮೇಲೆ ಎರಗಿತ್ತು. ಈ ವೇಳೆ ಝೂಮ್‌ನ ದೇಹವನ್ನು 2 ಗುಂಡುಗಳು ಹೊಕ್ಕಿದ್ದವು. ಹಾಗಿದ್ದರೂ ಅದು ಛಲ ಬಿಡದೇ ಹೋರಾಟ ನಡೆಸಿತ್ತು. ಪರಿಣಾಮ ಇಬ್ಬರು ಉಗ್ರರನ್ನು ಸದೆಬಡಿಯಲು ಭದ್ರತಾಪಡೆಗೆ ಸಾಧ್ಯವಾ ಯಿತು. ತೀವ್ರವಾಗಿ ಗಾಯಗೊಂಡಿದ್ದ ಝೂಮ್‌ಗೆ ಶಸ್ತ್ರಚಿಕಿತ್ಸೆ ಯನ್ನೂ ನಡೆಸಲಾಗಿತ್ತು. ಸ್ವಲ್ಪಮಟ್ಟಿಗೆ ಚೇತರಿಕೆಯಾದಂತೆ ಕಂಡು ಬಂದಿದ್ದ ಝೂಮ್‌ ಗುರುವಾರ ಇಹಲೋಕ ತ್ಯಜಿಸಿತು.

ರಾಕೆಟ್‌ :

1998ರಲ್ಲಿ ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ “ರಾಕೆಟ್‌’ನನ್ನು ರಣರಂಗಕ್ಕೆ ಇಳಿಸಲಾ ಯಿತು. ಉಗ್ರನೊಬ್ಬ ಬಿಟ್ಟುಹೋಗಿದ್ದ ಸಣ್ಣ ಸ್ಕಾಫ್ìವೊಂದನ್ನು ಮೂಸಿ ನೋಡಿದ್ದ ರಾಕೆಟ್‌, ನೇರವಾಗಿ ದೊಡ್ಡ ಮಟ್ಟದ ಶಸ್ತ್ರಾಸ್ತ್ರ ಕೋಠಿಯತ್ತ ಹೆಜ್ಜೆಹಾ ಕಿತ್ತು. ಅಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳು ಒಂದೆರ ಡಲ್ಲ, ಮಷೀನ್‌ ಗನ್‌ಗಳು, 3 ಎಕೆ47 ರೈಫ‌ಲ್‌ಗ‌ಳು, ಎರಡು ಎಕೆ-56ಗಳು, ಒಂದು ಸ್ನೆ„ಪರ್‌ ರೈಫ‌ಲ್‌, 2 9ಎಂ.ಎಂ. ಪಿಸ್ತೂಲುಗಳು, 7 ರೇಡಿಯೋ ಸೆಟ್‌, 11 ಐಇಡಿಗಳು, 26 ಹ್ಯಾಂಡ್‌ ಗ್ರೆನೇಡ್‌ಗಳು, 37 ಎಲೆಕ್ಟ್ರಿಕ್‌ ಡಿಟೋನೇಟರ್‌ಗಳು, 1500 ಸುತ್ತು ಗುಂಡುಗಳು… ಹೀಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಂದು ಸೇನೆ ವಶಪಡಿಸಿಕೊಳ್ಳುವಲ್ಲಿ ರಾಕೆಟ್‌ನ ಪಾತ್ರ ಮಹತ್ವದ್ದಾಗಿತ್ತು.

ಮಾನಸಿ :

2015ರ ಆಗಸ್ಟ್‌ನಲ್ಲಿ ಲ್ಯಾಬ್ರಡಾರ್‌ ಮಾನಸಿಗೆ 4 ವರ್ಷ ತುಂಬಿತ್ತು. ಕುಪ್ವಾರಾದ ಎಲ್‌ಒಸಿಯಲ್ಲಿ ಉಗ್ರರ ಚಲನವಲನ ಗಮನಕ್ಕೆ ಬರುತ್ತಿದ್ದಂತೆ ಮಾನಸಿ ಅಲರ್ಟ್‌ ಆದಳು. ಕೂಡಲೇ ತನ್ನ ಹ್ಯಾಂಡ್ಲರ್‌ ಬಶೀರ್‌ ಅಹ್ಮದ್‌ರನ್ನು ಸದ್ದು ಬಂದ ಕಡೆಗೆ ಎಳೆಯಲಾ ರಂಭಿಸಿದಳು. ಹಿಮ ತುಂಬಿದ್ದ ಕಾರಣ, ದೃಷ್ಟಿ ಗೋಚರತೆ ಸ್ಪಷ್ಟವಾಗಿರಲಿಲ್ಲ. ಹಾಗಿದ್ದರೂ ಬಶೀರ್‌, ಮಾನಸಿ ಸೇರಿದಂತೆ ಯೋಧರು ಉಗ್ರರಿಗಾಗಿ ಶೋಧ ಕಾರ್ಯ ನಡೆಸಿದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬಶೀರ್‌ ಮತ್ತು ಮಾನಸಿ ಇಬ್ಬರೂ ಕೊನೆಯುಸಿರೆಳೆದರು.

ಯಾವ ಜಾತಿಯ ಶ್ವಾನಗಳು? :

ಆಯಾಯ ಪ್ರದೇಶದ ಎತ್ತರ ಮತ್ತು ಹವಾಗುಣ ಅವಲಂಬಿಸಿ, ಸೇನೆಯು ಸಾಮಾನ್ಯವಾಗಿ ಲ್ಯಾಬ್ರಡಾರ್‌, ಮುಧೋಳ, ಬಖರ್ವಾಲ್‌, ಕಾಕರ್‌ ಸ್ಪೇನಿಯಲ್‌, ಗ್ರೇಟ್‌ ಸ್ವಿಸ್‌ ಮೌಂಟನ್‌, ಜರ್ಮನ್‌ ಶೆಫ‌ರ್ಡ್‌, ಬೆಲ್ಜಿಯನ್‌ ಶೆಫ‌ರ್ಡ್‌ ನಂಥ ಶ್ವಾನಗಳನ್ನು ನೇಮಕ ಮಾಡುತ್ತದೆ. ಸೇನೆಯ ಶ್ವಾನಗಳಿಗೆ ಹೆಚ್ಚಾಗಿ ಬಾಂಬ್‌ಗಳ ಪತ್ತೆ, ಶತ್ರುಗಳ ಬೇಟೆ, ಶತ್ರುಗಳ ರಹಸ್ಯ ತಾಣಗಳ ಪತ್ತೆ, ವಿಐಪಿಗಳ ಭದ್ರತೆ ಹಾಗೂ ಸಾಕ್ಷ್ಯಾಧಾರ ಸಂಗ್ರಹಿಸುವಂಥ ತರಬೇತಿ ನೀಡಲಾಗುತ್ತದೆ. ಕೆಲವು ವಾರಗಳ ಹಿಂದಷ್ಟೇ ಕನಕ್‌ ಎಂಬ ಲ್ಯಾಬ್ರಡಾರ್‌ ಬಾರಾಮುಲ್ಲಾದ ಹೆದ್ದಾರಿಯಲ್ಲಿದ್ದ ಐಇಡಿಯನ್ನು ಪತ್ತೆಹಚ್ಚಿ, 12ಕ್ಕೂ ಹೆಚ್ಚು ಯೋಧರ ಪ್ರಾಣ ಉಳಿಸಿತ್ತು.

-ಹಲೀಮತ್‌ ಸಅದಿಯಾ

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.