ಜಾನುವಾರು ಚರ್ಮಗಂಟು ರೋಗ: ಬಂಟ್ವಾಳದಲ್ಲಿ ಮೊದಲ ಶಂಕಿತ ಪ್ರಕರಣ ಪತ್ತೆ; 1 ದನ ಸಾವು
Team Udayavani, Oct 14, 2022, 7:50 AM IST
ಬಂಟ್ವಾಳ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ಜಾನುವಾರುಗಳ ಚರ್ಮಗಂಟು ರೋಗ ಇದೇ ಮೊದಲ ಬಾರಿಗೆ ದ.ಕ.ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಒಂದೇ ಮನೆಯ ಮೂರು ದನಗಳಲ್ಲಿ ಶಂಕಿತ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ಒಂದು ದನ ಈಗಾಗಲೇ ಮೃತಪಟ್ಟಿದ್ದು, ಎರಡು ದನಗಳು ಚಿಕಿತ್ಸೆಯ ಬಳಿಕ ಬಹುತೇಕ ಗುಣಮುಖವಾಗಿವೆ.
ದ.ಕ.ಜಿಲ್ಲಾ ಪಶು ಪಾಲನ ಇಲಾಖೆಯ ಮಾಹಿತಿ ಪ್ರಕಾರ ಬಿಳಿಯೂರಿನ ಮಲ್ಲಡ್ಕದಲ್ಲಿ ಕಾಣಿಸಿಕೊಂಡ ಶಂಕಿತ ಪ್ರಕರಣಕ್ಕೆ ಅ. 8ರಿಂದ ಕೆಎಂಎಫ್ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಒಂದು ದನ ಅ. 11ರಂದು ಮೃತಪಟ್ಟಿದೆ. ಆದರೆ ಉಳಿದ 2 ದನಗಳು
ಬಹುತೇಕ ಗುಣಮುಖವಾಗಿವೆ. ದನ ಚರ್ಮಗಂಟು ರೋಗ ದಿಂದ ಸತ್ತಿಲ್ಲ, ಅದಕ್ಕೆ ಬೇರೆ ಕಾಯಿಲೆಯೂ ಇತ್ತು ಎನ್ನಲಾಗಿದೆ.
ಈ ಖಾಯಿಲೆಯ ಮುಂಜಾಗ್ರತ ಕ್ರಮವಾಗಿ ಪ್ರಕರಣ ಕಂಡುಬಂದ ಮನೆಯ ಸುತ್ತಲೂ ಸೇರಿದಂತೆ ಗ್ರಾಮದ ಬಹುತೇಕ ಜಾನುವಾರುಗಳಿಗೆ ಎಲ್‌ಎಸ್‌ಡಿ ಲಸಿಕೆ ನೀಡಲಾಗಿದ್ದು, ಜತೆಗೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಕಾರ್ಯವನ್ನೂ ಮಾಡಲಾಗಿದೆ. ಜತೆಗೆ ಪ್ರದೇಶದ ಮನೆಗಳಿಗೆ ಮುಂಜಾಗ್ರತ ಕ್ರಮಗಳನ್ನೂ ತಿಳಿಸಲಾಗಿದೆ.
ಬಿಳಿಯೂರು ಪ್ರದೇಶದಲ್ಲಿ ಸುಮಾರು 600 ದನಗಳಿಗೆ ಲಸಿಕೆಗಳನ್ನು ನೀಡಲಾಗಿದ್ದು, ಉಳಿದಂತೆ ಜಿಲ್ಲೆಗೆ ಪೂರೈಕೆಯಾಗಿ ರುವ 2000 ಲಸಿಕೆಗಳಲ್ಲಿಗೋಶಾಲೆಗಳ ದನಗಳಿಗೆ ನೀಡುವ ಕಾರ್ಯಮಾಡಲಾಗಿದೆ. ಸತ್ತಿರುವ ದನದ ಕುರಿತು ಇಲಾಖೆಯು ಸರಕಾರಕ್ಕೆ ವರದಿ ನೀಡಿದ್ದು, 20 ಸಾವಿರ ರೂ. ಪರಿಹಾರ ಸಿಗುವ ಸಾಧ್ಯತೆ ಇದೆ.
ಲಸಿಕೆ-ಫಾಗಿಂಗ್ ಕಾರ್ಯ :
ಬಿಳಿಯೂರಿನಲ್ಲಿ ಜಿಲ್ಲೆಯ ಮೊದಲ ಶಂಕಿತ ಪ್ರಕರಣ ಕಂಡುಬಂದಿದ್ದು, ಈಗಾಗಲೇ ಸುತ್ತಮುತ್ತಲ ಪ್ರದೇಶದಲ್ಲಿ ಲಸಿಕೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಕಾರ್ಯವನ್ನು ನಡೆಸಿದ್ದೇವೆ. ಜಿಲ್ಲೆಗೆ ಬಂದಿರುವ 2 ಸಾವಿರ ಲಸಿಕೆಗಳನ್ನು ಈಗಾಗಲೇ ನೀಡಲಾಗಿದ್ದು, ಹೆಚ್ಚಿನ ಲಸಿಕೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಜತೆಗೆ ಸತ್ತಿರುವ ದನಕ್ಕೆ ಸರಕಾರದಿಂದ ಸಿಗುವ ಪರಿಹಾರಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.– ಅರುಣ್‌ಕುಮಾರ್ ಶೆಟ್ಟಿ ಉಪನಿರ್ದೇಶಕರು, ಪಶು ಪಾಲನಾ ಇಲಾಖೆ. ದ.ಕ.ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.