ಸಾಹಿತ್ಯ ಅಕಾಡೆಮಿ ಪುಸ್ತಕಗಳ ಭರ್ಜರಿ ಮಾರಾಟ; 345 ಪುಸ್ತಕ ಒಳಗೊಂಡ ಸೆಟ್‌ಬಾಕ್ಸ್
ಮಲ್ಲೇಪುರಂ ಜಿ.ವೆಂಕಟೇಶ ಅವರ "ದೇಶಿಯ ದರ್ಶನ ಮಾಲೆ" ಕೃತಿಗಳನ್ನು ಅಧಿಕ ಸಂಖ್ಯೆಯಲ್ಲಿ ಓದುಗರು ಖರೀದಿಸಿದ್ದಾರೆ.
Team Udayavani, Oct 14, 2022, 9:52 AM IST
ಬೆಂಗಳೂರು: ಹಣ ಕೊಟ್ಟು ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಮಾತಿಗೆ ಅಪವಾದ ಎಂಬಂತೆ ಕರ್ನಾಟಕ ಸಾಹಿತ್ಯಅಕಾಡೆಮಿ ರಾಜ್ಯದ ವಿವಿಧ ಕಾಲೇಜು ಮತ್ತು ವಿವಿಗಳಲ್ಲಿ ಹಮ್ಮಿಕೊಂಡಿದ್ದ ಶೇ.50ರ ರಿಯಾಯ್ತಿ ದರದ ಪುಸ್ತಕಗಳ ಮಾರಾಟದಲ್ಲಿ ಭರ್ಜರಿ ಖರೀದಿ ವಹಿವಾಟು ನಡೆದಿದೆ.
ಬೆಂಗಳೂರಿನಿಂದ ಆರಂಭವಾದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಬಸವ ಕಲ್ಯಾಣದಲ್ಲಿ ಮುಕ್ತಾಯವಾಗಿದ್ದು ಸುಮಾರು 5 ಸಾವಿರಕ್ಕೂ ಹೆಚ್ಚಿನ ವಿವಿಧ ಶೀರ್ಷಿಕೆ ಗಳ ಪುಸ್ತಕಗಳ ಮಾರಾಟವಾಗಿವೆ. ಸುಮಾರು 35ಲಕ್ಷ ರೂ.ಗಳ ಖರೀದಿ ವಹಿವಾಟು ನಡೆದಿದೆ.
ಹಿರಿಯ ಸಾಹಿತಿಗಳ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಅಕಾಡೆಮಿಯ ಉತ್ಸಾಹ ಇಮ್ಮಡಿಸಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಕಾಡೆಮಿ ರಾಜ್ಯದ 75 ಪದವಿ, ಪದವಿ ಪೂರ್ವ ಕಾಲೇಜು ಹಾಗೂ ಕೆಲ ವಿಶ್ವವಿದ್ಯಾಲಯಗಳಲ್ಲಿ ತಾನು ಪ್ರಕಟಿಸಿದ್ದ ಪುಸ್ತಕಗಳ ಪ್ರದರ್ಶನ, ಮಾರಾಟವನ್ನು ಏರ್ಪಡಿಸಿತ್ತು. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು.
ಆ ಹಿನ್ನೆಲೆಯಲ್ಲಿ ಅಕಾಡೆಮಿ ಕೂಡ ದೇಶದ ಸ್ವಾತಂತ್ರ ಸಾಧಕರ ಕುರಿತು ಕನ್ನಡ ಭಾಷೆಯಲ್ಲಿ 75 ಪುಸ್ತಕಗಳ ಮಾಲೆಯನ್ನು ಹೊರತಂದಿತ್ತು. ಇದಾದ ಬಳಿಕ ಸಾಕ್ಷ್ಯ ಚಿತ್ರದ ಜತೆಗೆ ರಾಜ್ಯದ 31 ಜಿಲ್ಲೆಗಳ ಪದವಿ ಮತ್ತು ಪದವಿ ಪೂರ್ವ ಮತ್ತು ವಿವಿಗಳಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿತ್ತು. ಇಲ್ಲಿ ಭರ್ಜರಿಯಾಗಿಯೇ ಪುಸ್ತಕ ಖರೀದಿಯ ವಹಿವಾಟು ನಡೆದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಹೇಳುತ್ತಾರೆ.
ಗಿರಡ್ಡಿ, ಬರಗೂರು, ಸಿದ್ದಲಿಂಗಯ್ಯ ಪುಸ್ತಕಗಳಿಗೆ ಬೇಡಿಕೆ: ಅಕಾಡೆಮಿ ಪುಸ್ತಕ ಮಾರಾಟದಲ್ಲಿ ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ “ಸಾಹಿತ್ಯ ಪರಿಭಾಷಿಕ ಮಾಲೆ” (16 ಪುಸ್ತಕಗಳು), ಬರಗೂರು ರಾಮಚಂದ್ರ ಅವರ “ಕನ್ನಡ ಸಾಹಿತ್ಯ ಸಂಗಾತಿ’, ಹಿರಿಯ ಕವಿ ಸಿದ್ದಲಿಂಗಯ್ಯ ಮತ್ತು ಎಂ.ಎಚ್.ಕೃಷ್ಣಯ್ಯ ಸಂಪಾದನೆಯ “ಸಾಲು ದೀಪಗಳು’ ಹಾಗೂ ಮಲ್ಲೇಪುರಂ ಜಿ.ವೆಂಕಟೇಶ ಅವರ “ದೇಶಿಯ ದರ್ಶನ ಮಾಲೆ” ಕೃತಿಗಳನ್ನು ಅಧಿಕ ಸಂಖ್ಯೆಯಲ್ಲಿ ಓದುಗರು ಖರೀದಿಸಿದ್ದಾರೆ.
ರಿಯಾಯ್ತಿ ಪುಸ್ತಕ ಮಾರಾಟದಲ್ಲಿ ಸ್ನಾತಕೋತ್ತರ ಮತ್ತು ಪದವೀಧರ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳನ್ನು ಖರೀದಿಸಿದ್ದಾರೆ. ಜತೆಗೆ ಕಾಲೇಜು ಉಪನ್ಯಾಸಕರು, ಸಾಹಿತ್ಯಆಸಕ್ತರು ಕೂಡ ಅಕಾಡೆಮಿ ಹೊರತಂದಿರುವ ವಿವಿಧ ಕೃತಿಗಳನ್ನು ಮಾರಾಟ ಕೇಂದ್ರಕ್ಕೆ ಬಂದು ಕೊಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಅಕಾಡೆಮಿ ಅಧಿಕಾರಿಗಳು ಹೇಳುತ್ತಾರೆ.
345 ಪುಸ್ತಕಗಳ ಒಳಗೊಂಡ ಸೆಟ್‌ಬಾಕ್ಸ್
ಅಕಾಡೆಮಿ ರಿಯಾಯ್ತಿ ಪುಸ್ತಕ ಮಾರಾಟಕ್ಕಾಗಿ 15,435 ರೂ. ಮುಖ ಬೆಲೆಯ 345 ಪುಸ್ತಕಗಳ ಒಳಗೊಂಡ ಸೆಟ್ ಸಿದ್ಧಪಡಿಸಿತ್ತು. ಇದರಲ್ಲಿ ಸುಮಾರು 22 ಸೆಟ್ ಬಾಕ್ಸ್‌ಗಳು ಮಾರಾಟವಾಗಿದೆ. ಬಹುತೇಕ ಸೆಟ್ ಬಾಕ್ಸ್ ಪುಸ್ತಕಗಳನ್ನು ವಿವಿಗಳು ಮತ್ತು ಕಾಲೇಜುಗಳು ಖರೀದಿ ಮಾಡಿವೆ. ಈ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಆಯೋಜನೆಯಿಂದಾಗಿ ಅಕಾಡೆಮಿಯಲ್ಲಿ ಉತ್ತಮ ಪುಸ್ತಕಗಳು ಇವೆ ಎಂಬುವುದು ಕಾಲೇಜು ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಗಮನಕ್ಕೆ
ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಕಾಡೆಮಿ ರಾಜ್ಯದ 75 ಸ್ಥಳಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ರಿಯಾಯ್ತಿ ದರದಲ್ಲಿ ಪುಸ್ತಕಗಳ ಮಾರಾಟವನ್ನು ಹಮ್ಮಿಕೊಂಡಿತ್ತು. 35 ಲಕ್ಷ ರೂ. ಖರೀದಿ ವಹಿವಾಟು ನಡೆದಿದ್ದು, ಇದು ಕನ್ನಡ ಪುಸ್ತಕ ಓದುಗರಿಗೆ ಬರವಿಲ್ಲ ಎಂಬುವುದನ್ನು ತೋರಿಸುತ್ತದೆ.
● ಡಾ.ಬಿ.ವಿ. ವಸಂತಕುಮಾರ್,
ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ
*ದೇವೇಶ ಸೂರುಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.