ಶಾಸ್ತ್ರೀ ವೃತ್ತ: ಕಾಮಗಾರಿ ಪೂರ್ತಿ ಆಗಿಲ್ಲ

ಸಿದ್ಧಗೊಳ್ಳುತ್ತಿದೆ ಶಾಸ್ತ್ರೀ ಪ್ರತಿಮೆ; ಉದ್ಯಾನ, ತಡೆಬೇಲಿ, ಬೆಳಕಿನ ವ್ಯವಸ್ಥೆ ಬಾಕಿ

Team Udayavani, Oct 14, 2022, 12:30 PM IST

11

ಕುಂದಾಪುರ: ನಗರದ ಪ್ರವೇಶದ್ವಾರ ಶಾಸ್ತ್ರೀ ವೃತ್ತದಲ್ಲಿ ವಿನೂತನ ಮಾದರಿಯಲ್ಲಿ ರಚನೆಯಾಗುತ್ತಿರುವ ಕಾಮಗಾರಿ ಎಂದೋ ಮುಗಿಯಬೇಕಿದ್ದುದು ಇನ್ನೂ ಪೂರ್ತಿಯಾಗಿಲ್ಲ.

ಬದಲಾದ ವಿನ್ಯಾಸ

ಆರಂಭದಲ್ಲಿ ಇದನ್ನು ಮೈಸೂರು ಜಯಚಾಮ ರಾಜೇಂದ್ರ ವೃತ್ತದ ಮಾದರಿಯಲ್ಲಿ ವಿನ್ಯಾಸವಾಗಲಿದೆ ಎಂದು ತಿಳಿಸಲಾಗಿತ್ತು. ಆನಂತರ ವಿನ್ಯಾಸ ಬದಲಾಯಿತು. ಸಿಮೆಂಟ್‌ ಬದಲು ಕಲ್ಲು ಬಳಸಲಾಯಿತು. ನಿಗದಿ ಪಡಿಸಿದ ಮೊತ್ತವೂ ಹೆಚ್ಚಾಯಿತು. ಅದು ಸಾಮಾಜಿಕ ಜಾಲತಾಣ ದಲ್ಲಿ ಬಂದು ಪುರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಯಿತು. ಒಂದಷ್ಟು ವಿವಾದ, ಟೀಕೆ ಎಲ್ಲ ಆಯಿತು. ಕೊನೆಗೆ ವೃತ್ತ ಮಾಡಿ ಕಾಮಗಾರಿ ನಿಲ್ಲಿಸಿದೆ. ಮುಂದಿನ ಕಾಮಗಾರಿ ವಿಳಂಬಗತಿಯಲ್ಲಿದೆ. ಜನರ, ತಮ್ಮದೇ ಪಕ್ಷದ ಜನಪ್ರತಿನಿಧಿಗಳ ಟೀಕೆಗೆ ಅಂಜಿದ ಆಡಳಿತ ಸರಕಾರದ ದುಡ್ಡು ಬಳಸುವುದೋ ಖಾಸಗಿಗೆ ಮೊರೆ ಹೋಗುವುದೋ ಎಂಬ ಡೋಲಾಯಮಾನದಲ್ಲಿದೆ.

ಸರ್ಕಲ್‌ ಅವಶ್ಯ

ಕುಂದಾಪುರ ಶಾಸ್ತ್ರೀ ಸರ್ಕಲ್‌, ಶಾಸ್ತ್ರೀ ಪಾರ್ಕ್‌ ಹೆಸರು ವಾಸಿ. ಕುಂದಾಪುರಕ್ಕೆ ಎಲ್ಲಿಂದಲೇ ಬಂದರೂ ಬಸ್ಸಿನಿಂದಿಳಿಯಲು ಸೂಚನೆ ಕೊಡುವುದು ಇದೇ ವೃತ್ತವನ್ನು. ಯಾವುದೇ ಸ್ಥಳದ ಗುರುತು ಪರಿಚಯ ಹೇಳಬೇಕಾದರೂ ಶಾಸ್ತ್ರೀ ಸರ್ಕಲನ್ನು ಹೆಸರಿಸುತ್ತಾರೆ. ಇಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟರ ಹೆಸರಿನಲ್ಲಿ ಎಸ್‌ಎಸ್‌ಎನ್‌ ಕನ್‌ಸ್ಟ್ರಕ್ಷನ್‌ ಕಂಪೆನಿ ನೀಡಿದ ಲಾಲ್‌ಬಹದ್ದೂರ್‌ ಶಾಸ್ತ್ರೀಗಳ ಸುಂದರ ಪ್ರತಿಮೆಯಿತ್ತು. ಅದೆಷ್ಟೋ ವರ್ಷಗಳಿಂದ ಹಸುರು ಹುಲ್ಲಿನ ನಡುವೆ ಶಿಲೆಯ ಮೇಲೆ ಕೂರಿಸಲ್ಪಟ್ಟ ಶಾಸ್ತ್ರೀ ವಿಗ್ರಹವುಳ್ಳ ಸರ್ಕಲ್‌ ಈಚಿನ ದಿನಗಳಲ್ಲಿ ಬೀಡಾಡಿ ಗಳ ತಾಣವಾಗಿತ್ತು. ಈಗ ಇವರೆಲ್ಲ ಫ್ಲೈಓವರ್‌ ಅಡಿಗೆ ಸ್ಥಳಾಂತರಗೊಂಡಿದ್ದಾರೆ!

ಪಾಳು ಬಿದ್ದಂತೆ ಇತ್ತು

ಶಾಸ್ತ್ರೀ ಪ್ರತಿಮೆಗೂ ಸೂಕ್ತ ಭದ್ರತೆ ಇರಲಿಲ್ಲ. ಶಾಸ್ತ್ರೀ ಸರ್ಕಲ್‌ನ ಸೌಂದರ್ಯ ಹೆಚ್ಚಿಸಬೇಕೆಂದು ಅನೇಕ ಸಮಯದಿಂದ ಬೇಡಿಕೆ ಇತ್ತು. ಅನೇಕ ವರ್ಷಗಳಿಂದ ಕುಂದಾಪುರದ ಸ್ವಾಗತ ದ್ವಾರ ಎಂದೇ ಪರಿಗಣಿಸಲ್ಪಟ್ಟಿರುವ ಶಾಸ್ತ್ರೀ ವೃತ್ತ ಸೌಂದರ್ಯಹೀನವಾಗಿತ್ತು. ಫ್ಲೈಓವರ್‌, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕವಂತೂ ಅನಾಥವಾದಂತಿತ್ತು. ನಗರಕ್ಕೆ ಪ್ರವೇಶ ಮಾಡುವಾಗಲೇ ದೊರೆಯುವ ವೃತ್ತ ಇದಾದ ಕಾರಣ ಇದರ ಸೌಂದರ್ಯ ಕಂಡೇ ಸುಂದರ ಕುಂದಾಪುರ ಕಲ್ಪನೆಗೆ ಪೂರಕ ಮನಃಸ್ಥಿತಿ ನಿರ್ಮಾಣವಾಗುತ್ತದೆ ಎಂದು ಪುರಸಭೆ ಆಡಳಿತ ಭಾವಿಸಿದೆ. ಈ ನಿಟ್ಟಿನಲ್ಲಿ ಪುರಸಭೆ ವೃತ್ತ ನಿರ್ಮಾಣಕ್ಕೆ ಮುಂದಾಗಿದೆ.

ಪ್ರತಿಮೆ, ಉದ್ಯಾನವನ ಆಗಿಲ್ಲ

ಶಾಸ್ತ್ರೀ ಸರ್ಕಲ್‌ ಪುರ ಸಭೆ ವ್ಯಾಪ್ತಿಗೆ ಬರುತ್ತದೆ. ಅದರ ಉಸ್ತುವಾರಿ, ನಿರ್ವಹಣೆ, ನವೀಕರಣ ಎಲ್ಲವೂ ಪುರಸಭೆ ಪಾಲಿಗೆ. ಆದರೆ ಈವರೆಗೆ ನವೀಕರಣ ಕಾರ್ಯ ನಡೆದಿರಲಿಲ್ಲ. ಏಕೆಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 10 ವರ್ಷಗಳ ಕಾಲ ಇಲ್ಲಿ ಹೆದ್ದಾರಿ ಕಾಮಗಾರಿ ಎಂದು ದಿನ ದೂಡಿತ್ತು. ವಸ್ತುಗಳನ್ನು ತಂದು ರಾಶಿ ಹಾಕಿತ್ತು. ರಸ್ತೆ ಅಗೆದು ಹೊಸ ರಸ್ತೆ ಮಾಡದೇ ಬಾಕಿ ಯಾದ ಕಾರಣ ವೃತ್ತದ ಆಧುನೀಕರಣ ಮಾತ್ರ ಸಾಧ್ಯವಾಗಿರಲಿಲ್ಲ. ಈಗ ವೃತ್ತದ ಮಂಟಪ ಆಗಿದ್ದು ಪ್ರತಿಮೆ, ಉದ್ಯಾನವನ, ಸುತ್ತಲಿನ ಕಬ್ಬಿಣದ ತಡೆ, ಬೆಳಕಿನ ವ್ಯವಸ್ಥೆ ಆಗಿಲ್ಲ, ಹೈಮಾಸ್ಟ್‌ ಲೈಟ್‌ ಸ್ಥಳಾಂತರ ಕಾರ್ಯ ಆಗಿಲ್ಲ.

ಶಾಸಕರ ಮಧ್ಯಪ್ರವೇಶ: ಕಾಮಗಾರಿ ಕುರಿತು ಶಾಸಕರವರೆಗೆ ದೂರು ಹೋಯಿತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪರಾಮರ್ಶೆ ನಡೆಸಿದರು. ಈ ಹಿಂದೆ ಶಾಸ್ತ್ರೀ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿದ್ದ ಎಸೆಸೆಲ್ಸಿ ಸಂಸ್ಥೆಯನ್ನು ಸಂಪರ್ಕಿಸಿ ಚಾರ್ಮಕ್ಕಿ ನಾರಾಯಣ ಶೆಟ್ಟರ ನೆನಪಿನಲ್ಲಿ ನೀಡಿದ ಪ್ರತಿಮೆಯ ಸ್ಥಳದಲ್ಲಿ ನೂತನ ವೃತ್ತಕ್ಕೆ ಆಗುವಂತಹ ಪ್ರತಿಮೆ ನೀಡಲು ಮನವಿ ಮಾಡಿದರು. ಅದರಂತೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಪುಸ್ತಕ ಹಿಡಿದು ನಡೆಯುವ ಭಂಗಿಯ ಶಾಸ್ತ್ರೀಗಳ ಕಂಚಿನ ಪ್ರತಿಮೆ ನಿರ್ಮಾಣ ಹಂತದಲ್ಲಿದೆ. ಮೈಸೂರಿನಲ್ಲಿ ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿಯ ಶಿಲ್ಪಿ ಪ್ರತಿಮೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಅಧಿಕ ವೆಚ್ಚ

ಮೊದಲ ಹಂತದ ಕಾಮಗಾರಿಗೆ 25 ಲಕ್ಷ, ಎರಡನೆ ಹಂತದ ಕಾಮಗಾರಿಗೆ 25 ಲಕ್ಷ, ಮೂರನೆ ಹಂತದಲ್ಲಿ ಮತ್ತೆ 10 ಲಕ್ಷ ರೂ. ಬೇಕಾಗಬಹುದು ಎಂದು ವೆಚ್ಚದ ಕುರಿತು ಆಕ್ಷೇಪ ಕೇಳಿ ಬಂದಿತ್ತು. ಪುರಸಭೆ ಸಾಮಾನ್ಯ ಸಭೆಯಲ್ಲೂ ಈ ಕುರಿತು ಚರ್ಚೆ ನಡೆದಿತ್ತು. ಕಾಮಗಾರಿ ಹಂತದಲ್ಲಿ ಬಳಸುವ ವಸ್ತುಗಳು ಬದಲಾದ ಕಾರಣ ವೆಚ್ಚ ಹೆಚ್ಚಾಗಿದೆ ಎಂದು ಸಮರ್ಥನೆ ನೀಡಲಾಗಿತ್ತು. ಎರಡು ಬಾರಿ ಟೆಂಡರ್‌ ಆಹ್ವಾನಿಸಿದಾಗಲೂ ಒಂದೇ ಟೆಂಡರ್‌ ಬಂದು ಮೂರನೆಯ ಬಾರಿ ಟೆಂಡರ್‌ ಅಂಗೀ ಕಾರವಾಗಿ ಈಗ ಎರಡನೆ ಹಂತದ ಕಾಮಗಾರಿಗೂ ಏಕ ಟೆಂಡರ್‌ ಬಂದಿದ್ದು ಪ್ರಕ್ರಿಯೆ ಮುಂದುವರಿಯಲಿಲ್ಲ.

ಪ್ರತಿಮೆ ಆಗುತ್ತಿದೆ: ಹೊಸ ಪ್ರತಿಮೆ ಶಾಸಕರ ಮೂಲಕ ದಾನಿಗಳಿಂದ ಮಂಜೂರಾಗಿದ್ದು ಈವರೆಗೆ ಇದ್ದ ಪ್ರತಿಮೆಯನ್ನು ಫೆರ್ರಿ ಪಾರ್ಕ್‌ನಲ್ಲಿ ಇರಿಸಲಾಗಿದ್ದು ಅಲ್ಲೇ ಶಾಶ್ವತವಾಗಿ ಇರಿಸುವಂತೆ ಅಲ್ಲಿನ ಪುರಸಭೆ ಸದಸ್ಯ ಅಬ್ಬು ಮಹಮ್ಮದ್‌ ಅವರೂ ಮನವಿ ಮಾಡಿದ್ದಾರೆ. ಶಾಸ್ತ್ರೀ ಸರ್ಕಲ್‌ ಕಾಮಗಾರಿ ಶೀಘ್ರದಲ್ಲಿ ನಡೆಯಲಿದೆ. ಸರ್ಕಲ್‌ನ ಉಳಿಕೆ ಕಾಮಗಾರಿಗಳಿಗೂ ದಾನಿಗಳಿದ್ದರೆ ಪ್ರಯತ್ನಿಸಲಾಗುವುದು. –ವೀಣಾ ಭಾಸ್ಕರ ಮೆಂಡನ್‌ ಅಧ್ಯಕ್ಷೆ, ಪುರಸಭೆ

ಶೀಘ್ರ ಪೂರ್ಣ: ಪ್ರತಿಮೆ ತಯಾರಿ ನಡೆಯುತ್ತಿದ್ದು ಎರಡನೆ ಹಂತದ ಕಾಮಗಾರಿಯ ಟೆಂಡರ್‌ನ ವೆಚ್ಚ ತಗ್ಗಿಸಲಾಗಿದೆ. ಸುಂದರವಾಗಿ ಕಾಣುವಂತೆ ಕಾಮಗಾರಿ ನಡೆಯಲಿದ್ದು ಶೀಘ್ರ ಪೂರ್ಣಗೊಳ್ಳಲಿದೆ. –ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

 

 

ಟಾಪ್ ನ್ಯೂಸ್

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

6

Koteshwara: ಕೊಡಿಹಬ್ಬದ ಪೂರ್ವಭಾವಿಯಾಗಿ ಶ್ರೀ ಕೋಟಿಲಿಂಗೇಶ್ವರನಿಗೆ ಸಮುದ್ರ ಸ್ನಾನ

5

Gangolli: ಮಲ್ಯರಮಠ ಶ್ರೀ ವೆಂಕಟರಮಣ ದೇಗುಲ; ವಿಶ್ವರೂಪ ದರ್ಶನ ಸೇವೆ

3

Mullikatte-ಅರಾಟೆ: ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆಗಳ ಸರಮಾಲೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4(1)

Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್‌ ಹೊಂಡಗಳು!

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

3

Mangaluru: ಬೇಕು ಇಂದೋರ್‌ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.