ಅಬ್ಬಬ್ಬಾ ಏನು ರುಚಿ…ಮೊಟ್ಟೆ ಪ್ರಿಯರಿಗಾಗಿ ಈ ರೆಸಿಪಿ..


ಶ್ರೀರಾಮ್ ನಾಯಕ್, Oct 14, 2022, 5:50 PM IST

thumb egg receipe web exclusive

ನಾನ್‌ ವೆಜ್‌ ಪ್ರಿಯರು ಮೊಟ್ಟೆಯಿಂದ ಮಾಡುವ ರೆಸಿಪಿ ತುಂಬಾನೇ ಇಷ್ಟ ಪಡುತ್ತಾರೆ.ಮೊಟ್ಟೆಯಿಂದ ನಾನಾ ರೆಸಿಪಿ ಮಾಡಬಹುದಾಗಿದೆ.ಉದಾಃ ಎಗ್‌ಬುರ್ಜಿ,ಎಗ್‌ ಆಮ್ಲೆಟ್‌,ಎಗ್‌ ರೋಸ್ಟ್‌,ಎಗ್‌ ಬೊಂಡಾ…ಹೀಗೆ ನಾನಾ ತರಹದ ಅಡುಗೆ ತಯಾರಿಸಬಹುದಾಗಿದೆ.ಅಷ್ಟೇ ಅಲ್ಲ ಇದು ಆರೋಗ್ಯಕ್ಕೂ ಉತ್ತಮ ಯಾಕೆಂದರೆ ಮೊಟ್ಟೆಯಲ್ಲಿ ಪೋಷಕಾಂಶಗಳಿರುವುದರಿಂದ ಮೊಟ್ಟೆಯಿಂದ ತಯಾರಿಸಲಾದ ವಿವಿಧ ಆಹಾರ ಪದಾರ್ಥಗಳ ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಬರೀ ಮೊಟ್ಟೆಯನ್ನೇ ತಿನ್ನುವ ಬದಲು ಮೊಟ್ಟೆಯನ್ನು ಬಳಸಿ ತಯಾರಿಸುವ ವಿವಿಧ ಆಹಾರಗಳ ಸೇವನೆ ನಮ್ಮ ನಾಲಿಗೆಗೂ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಹಾಗಾದರೆ ನಾವಿಂದು ಬೇಯಿಸಿದ ಮೊಟ್ಟೆಯಿಂದ ಎಗ್‌ ಪೆಪ್ಪರ್‌ ಫ್ರೈ ಮತ್ತು ಎಗ್‌- 65 ಮಾಡುವುದು ಹೇಗೆ ಎಂದು ತಿಳಿಯೋಣ. ನೀವೂ ಕೂಡಾ ಇದನ್ನು ಮನೆಯಲ್ಲಿ ಟ್ರೈ ಮಾಡಿ ಸವಿಯಿರಿ..

ಎಗ್‌ ಪೆಪ್ಪರ್‌ ಫ್ರೈ

ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆ-4, ಕಾಳು ಮೆಣಸು(ಪೆಪ್ಪರ್‌)-1ಚಮಚ, ಕೊತ್ತಂಬರಿ(ಧನಿಯಾ)-1ಚಮಚ, ಜೀರಿಗೆ ಅರ್ಧ ಚಮಚ, ಚಕ್ಕೆ-1, ಲವಂಗ-3, ಏಲಕ್ಕಿ-1, ಒಣಮೆಣಸು-1, ಶುಂಠಿ ಪೇಸ್ಟ್‌-1ಚಮಚ, ಈರುಳ್ಳಿ-2, ಕರಿಬೇವಿನ ಎಲೆ-ಸ್ವಲ್ಪ, ಟೊಮೆಟೋ-1, ಕೊತ್ತ,ಬರಿ ಸೊಪ್ಪು-ಸ್ವಲ್ಪ, ಎಣ್ಣೆ-6 ಚಮಚ, ಅಚ್ಚ ಖಾರದ ಪುಡಿ-1ಚಮಚ, ಅರಿಶಿನ ಪುಡಿ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಒಂದು ಪಾತ್ರೆಗೆ 4ಮೊಟ್ಟೆಯನ್ನು ಹಾಕಿ ಸ್ವಲ್ಪ ಉಪ್ಪು ಮತ್ತು ನೀರನ್ನು ಸೇರಿಸಿ ಬೇಯಿಸಿಕೊಳ್ಳಿ. ನಂತರ ಮೊಟ್ಟೆಯನ್ನು ಎರಡು ಭಾಗ ಮಾಡಿ ಕಟ್‌ ಮಾಡಿಇಟ್ಟುಕೊಳ್ಳಿ. ಬಳಿಕ ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಪೆಪ್ಪರ್‌, ಕೊತ್ತಂಬರಿ, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಮತ್ತು ಒಣಮೆಣಸನ್ನು ಹಾಕಿ ಹುರಿಯಿರಿ. ನಂತರ ಒಂದು ಮಿಕ್ಸ್‌ ಜಾರಿಗೆ ಹಾಕಿ ಪುಡಿ ಮಾಡಿಇಟ್ಟುಕೊಳ್ಳಿ. ತದನಂತರ ಮತ್ತೂಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಕಾದಮೇಲೆ ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿ ಕಟ್‌ ಮಾಡಿದ್ದ ಮೊಟ್ಟೆಯನ್ನು ಹಾಕಿ ಒಂದು ನಿಮಿಷಗಳ ಕಾಲ ಎರಡು ಬದಿ ಫ್ರೈ ಮಾಡಿಕೊಳ್ಳಿ. ಬಳಿಕ ಒಂದು ಪ್ಯಾನ್‌ಗೆ ಎರಡು ಚಮಚ ಎಣ್ಣೆ ಹಾಕಿ ಶುಂಠಿ ಪೇಸ್ಟ್‌, ಈರುಳ್ಳಿ, ಕರಿಬೇವಿನ ಎಲೆ ಹಾಕಿ, ಈರುಳ್ಳಿ ಕಂದು ಬಣ್ಣ ಬರುವರೆಗೆ ಹುರಿಯಿರಿ ಅದಕ್ಕೆ ಟೊಮೆಟೋ , ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಾಡಿಟ್ಟ ಮಸಾಲ ಪುಡಿಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಎರಡು ನಿಮಿಷಗಳವರೆಗೆ ಬೇಯಿಸಿರಿ ಅದಕ್ಕೆ ಫ್ರೈ ಮಾಡಿಟ್ಟ ಮೊಟ್ಟೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ನಂತರ ಸಣ್ಣಗೆ ಕಟ್‌ ಮಾಡಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಎಗ್‌ ಪೆಪ್ಪರ್‌ ಫ್ರೈ ತಿನ್ನಲು ಸಿದ್ಧ.

ಎಗ್‌-65

ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆ-4(ಬಿಳಿಭಾಗ),ಸಣ್ಣಗೆ ಹೆಚ್ಚಿದ ಹಸಿಮೆಣಸು-1ಚಮಚ, ಬೆಳ್ಳುಳ್ಳಿ-ಶುಂಠಿ ಪೇಸ್ಟ್‌-2ಚಮಚ, ಗರಂ ಮಸಾಲ ಪುಡಿ-1ಚಮಚ, ಕಡ್ಲೆ ಹಿಟ್ಟು-1ಚಮಚ, ಮೊಟ್ಟೆ-1,ಅಚ್ಚ ಖಾರದ ಪುಡಿ-2ಚಮಚ, ಕರಿಬೇವಿನ ಎಲೆ-ಸ್ವಲ್ಪ, ಟೊಮೆಟೋ ಸಾಸ್‌ 2ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಕರಿಯಲು ಎಣ್ಣೆ ,ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಒಂದು ಪಾತ್ರೆಗೆ ಬೇಯಿಸಿ ಸಣ್ಣಗೆ ಕಟ್‌ ಮಾಡಿದ ಮೊಟ್ಟೆಯ ಬಿಳಿ ತುಂಡುಗಳನ್ನು ಹಾಕಿ ಅದಕ್ಕೆ ಗರಂ ಮಸಾಲ ಪುಡಿ,ಸಣ್ಣಗೆ ಹೆಚ್ಚಿದ ಹಸಿಮೆಣಸು,ಅಚ್ಚ ಖಾರದ ಪುಡಿ, ಮೊಟ್ಟೆ ,ಬೆಳ್ಳುಳ್ಳಿ-ಶುಂಠಿ ಪೇಸ್ಟ್‌,ಕಡ್ಲೆ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ.ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಾಡಿಟ್ಟ ಎಗ್‌ ಮಿಶ್ರಣವನ್ನು ಬೊಂಡ ರೀತಿಯಲ್ಲಿ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತೆಗೆಯಿರಿ.ತದನಂತರ ಮತ್ತೊಂದು ಬಾಣಲೆಗೆ 2ಚಮಚದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಹಸಿಮೆಣಸು,ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಹುರಿಯಿರಿ.ಈ ಫ್ರೈಗೆ ಕಾಯಿಸಿಟ್ಟ ಮೊಟ್ಟೆಯನ್ನು ಸೇರಿಸಿ ಅದಕ್ಕೆ ಟೊಮೆಟೋ ಸಾಸ್‌,ರುಚಿಗೆ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿರಿ.ಬಿಸಿ-ಬಿಸಿಯಾದ ಎಗ್‌-65 ಸವಿಯಲು ಸಿದ್ಧ.

*ಶ್ರೀರಾಮ್ ನಾಯಕ್

ಟಾಪ್ ನ್ಯೂಸ್

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

3

UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

prashanth-Kishore

Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.