![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 14, 2022, 6:06 PM IST
ದೊಡ್ಡಬಳ್ಳಾಪುರ: ಲಯನ್ಸ್ ಕ್ಲಬ್ ಮತ್ತು ದೊಡ್ಡಬಳ್ಳಾಪುರ ಲಯನ್ಸ್ ಚಾರಿಟೀಸ್ ಟ್ರಸ್ಟ್, ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ನಗರದ ಎಪಿಎಂಸಿ ಆವರಣದ ಮುಂಭಾಗದಲ್ಲಿನ ಲಯನ್ಸ್ ಡಯಾಲಿಸಿಸ್ ಆಸ್ಪತ್ರೆಯಲ್ಲಿ ಬೃಹತ್ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಈ ವೇಳೆ ಖ್ಯಾತ ವೈದ್ಯ ಡಾ.ಟಿ.ಎಂ. ಆಂಜಿನಪ್ಪ ಮಾತನಾಡಿ, ಆರೋಗ್ಯದ ವಿಚಾರಗಳಲ್ಲಿ ಹಲವಾರು ಮೂಢ ನಂಬಿಕೆಗಳಿವೆ. ಅಪಘಾತಗಳಾದಾಗ ನೀರು ಕುಡಿಸುವುದು, ಸರಿಯಾದ ತಿಳವಳಿಕೆ ಇಲ್ಲದೇ ಚಿಕಿತ್ಸೆ ನೀಡುವುದು ಆರೋಗ್ಯಕ್ಕೆ ಅಪಾಯಕಾರಿ ಆಗಿವೆ. ಮುಂಜಾಗ್ರತೆ ವಹಿಸಿ ಆರೋಗ್ಯದ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಅರಿತರೆ, ಹೆಚ್ಚಾಗುವ ಅನಾಹುತ ತಪ್ಪಿಸಬಹುದಾಗಿದೆ. ಮಧುಮೇಹ, ರಕ್ತದೊತ್ತಡ ಮೊದಲಾದ ಕಾಯಿಲೆಗಳ ಬಗ್ಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಬಡವರಿಗೆ ಆರೋಗ್ಯ ಶಿಬಿರವರ ದಾನ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಆರೋಗ್ಯ ಶಿಬಿರಗಳು ಬಡ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಿವೆ. ಲಯನ್ಸ್ ಚಟುವಟಿಕೆಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವುದು ಅಭಿನಂದನೀಯ. ಜಿ.ಲಕ್ಷ್ಮೀಪತಿ ಅವರು ಹುಟ್ಟುಹಬ್ಬದ ಸಂದರ್ಭದಲ್ಲಿ ಶಿಬಿರವನ್ನು ಪ್ರಾಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಪ್ರಕಾಶ್, ಡಾ.ಇಂದಿರಾ ಶ್ಯಾಂ ಪ್ರಸಾದ್, ಡಾ.ಕೆ.ವಿ.ರಾಘವೇಂದ್ರ, ಡಾ. ರಾಜೇಶ್, ಲಯನ್ ಹುಲಿಕಲ್ ನಟರಾಜ್, ಎಸ್. ನಟರಾಜ್, ಎಂಪಿಸಿ ವೆಂಕಟೇಶ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಿ.ಕೆ. ಸೋಮಶೇಖರ್ ಖಜಾಂಚಿ ಆರ್.ಎಸ್. ಮಂಜುನಾಥ್, ಸಹ ಕಾರ್ಯದರ್ಶಿ ರೇಖಾ ವೆಂಕಟೇಶ್ ಇದ್ದರು. ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ತಾಪಂ ಮಾಜಿ ಅಧ್ಯಕ್ಷೆ ಶ್ಯಾಮಲಾ, ಡಾ.ರಾಜೇಶ್ ಎಲ್ ಪತಿಅವರು ಶಿಬಿರ ವನ್ನು ಪ್ರಾಯೋಜಿಸಿದ್ದರು.
ಶಿಬಿರದಲ್ಲಿ ಉಚಿತವಾಗಿ ಇಸಿಜಿ, 2ಡಿ, ಎಕೋ ಸ್ಕ್ಯಾನಿಂಗ್, ಡಯಾಬಿಟಿಕ್ ಪೈಲ್ಸ್ , ಹೃದಯ ರೋಗ, ನರ ರೋಗ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲು ತಪಾಸಣೆ ಹಾಗೂ ಶಿಬಿರದಲ್ಲಿ 120 ಜನರ ಎಕೊಕಾರ್ಡಿಯಾಲಜಿ ಮಾಡಲಾಯಿತು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.