![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 14, 2022, 6:45 PM IST
ಚೆನ್ನೈ: ದುಷ್ಕರ್ಮಿಯೊಬ್ಬ ಚೆನ್ನೈನಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಚಲಿಸುತ್ತಿರುವ ರೈಲಿನ ಮುಂಭಾಗಕ್ಕೆ ದೂಡಿ ಆಕೆಯನ್ನು ಹತ್ಯೆಗೈದ ಬೆನ್ನಲ್ಲೇ, ಆಘಾತ ತಾಳಲಾರದೇ ಆಕೆಯ ತಂದೆ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಸತ್ಯಪ್ರಿಯಾಳನ್ನು ಸತೀಶ್ ಎಂಬಾತ ಕಳೆದ 1 ವರ್ಷದಿಂದ ಚುಡಾಯಿಸುತ್ತಿದ್ದ. ಈ ಕುರಿತು 2 ಬಾರಿ ಸತ್ಯಪ್ರಿಯಾಳ ತಾಯಿ ಪೊಲೀಸರಿಗೆ ದೂರು ನೀಡಿ, ನಂತರ ಸಂಧಾನ ಏರ್ಪಟ್ಟಿತ್ತು. ಗುರುವಾರ ರೈಲು ಹಳಿಯ ಸಮೀಪದಲ್ಲೇ ಸತ್ಯಪ್ರಿಯಾಳೊಂದಿಗೆ ಸತೀಶ್ ವಾಗ್ವಾದಕ್ಕಿಳಿದಿದ್ದ. ಒಂದು ಹಂತದಲ್ಲಿ, ರೈಲು ವೇಗವಾಗಿ ಆಗಮಿಸುತ್ತಿರುವಾಗಲೇ ಆತ ಆಕೆಯನ್ನು ಹಳಿಗೆ ನೂಕಿದ್ದ. ಸತ್ಯಪ್ರಿಯಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಳು.
ಈ ವಿಷಯ ತಿಳಿದು ಆಘಾತಗೊಂಡ ಆಕೆಯ ತಂದೆ, ಶುಕ್ರವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತೀಶ್ ನಿವೃತ್ತ ಸ್ಪೆಷಲ್ ಸಬ್‌ಇನ್‌ಸ್ಪೆಕ್ಟರ್‌ನ ಪುತ್ರನಾಗಿದ್ದು, ಅದೇ ಠಾಣೆಯಲ್ಲಿ ಸತ್ಯಪ್ರಿಯಾಳ ತಾಯಿ ಹೆಡ್‌ಕಾನ್‌ಸ್ಟೆಬಲ್ ಆಗಿದ್ದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.