ಶತಮಾನ ಹಿಂದಿನ ಸಾಮೂಹಿಕ ಉಪನಯನ


Team Udayavani, Oct 15, 2022, 6:05 AM IST

ಶತಮಾನ ಹಿಂದಿನ ಸಾಮೂಹಿಕ ಉಪನಯನ

ತಿರುಮಲೆ ತಾತಾಚಾರ್ಯ ಶರ್ಮ (27.4.1895-20.10.1973) ತಿ.ತಾ.ಶರ್ಮರೆಂದು ಪ್ರಸಿದ್ಧಿ. ಮೈಸೂರು ಪ್ರಾಂತವನ್ನು ಕಾರ್ಯಕ್ಷೇತ್ರವಾಗಿರಿಸಿಕೊಂಡಿದ್ದ ಶರ್ಮರು ಬಹುಭಾಷಾಕೋವಿದ, ಪತ್ರಕರ್ತ, ಸಾಹಿತಿ, ವಾಗ್ಮಿ, ಭಾಷಾಂತರಗಾರ, ಶಿಕ್ಷಕ, ಕಲಾವಿದ, ಶಾಸನತಜ್ಞ, ಸಂಶೋಧಕ, ಇತಿಹಾಸಕಾರ, ಹಸ್ತಪ್ರತಿತಜ್ಞ, ಸ್ಥಳನಾಮತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣದ ಹೋರಾಟಗಾರ, ಪ್ರಕಾಶಕ ಹೀಗೆ ಸಾರಸ್ವತ ಲೋಕದ ಧ್ರುವತಾರೆಯಂತಿದ್ದರು. ಜೈಲಿನಲ್ಲಿದ್ದಾಗಲೇ 1948ರ ಡಿ. 29, 30, 31ರಂದು ಕಾಸರಗೋಡಿನಲ್ಲಿ (ಕಾಸರಗೋಡಿನಲ್ಲಿ ನಡೆದದ್ದು ಇದೊಂದೇ ಅ.ಭಾ. ಸಾಹಿತ್ಯ ಸಮ್ಮೇಳನ) ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕಸಾಪ ಅಧ್ಯಕ್ಷರಾಗಿಯೂ (1947-49) ಸೇವೆ ಸಲ್ಲಿಸಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ವಿಶ್ವ ಕರ್ನಾಟಕದ ಆಧಾರಸ್ತಂಭವಾಗಿ ಪತ್ರಿಕಾರಂಗದ ಭೀಷ್ಮರೆನಿಸಿದ್ದರು. ಅವರು ಇಲ್ಲವಾಗಿ 50 ವರ್ಷವಾಗುತ್ತಿದೆ.

ಸುಮಾರು 1903ರಲ್ಲಿ ತಿ.ತಾ. ಶರ್ಮರಿಗೆ ಅಣ್ಣನ ಜತೆ ಉಪನಯನವಾಯಿತು. ಗೋಡೆಗಳ ಬಿರುಕು ಸರಿಪಡಿಸುವುದು, ಸುಣ್ಣ ಬಣ್ಣದ ಕೆಲಸ, ಬೆಕ್ಕು ಮಾಳಿಗೆ (ಪ್ರಾಯಃ ಬೆಕ್ಕುಗಳ ವಾಸ ಸ್ಥಳ), ಕಲ್ಯಾಣವೇದಿಕೆಗಳು, ಪಾಕಶಾಲೆಗಳ ತಯಾರಿಗಳ ವರ್ಣನೆ ಓದುವಾಗ ಸುಮಾರು 100 ವರ್ಷಗಳ ಹಿಂದೆ ಉಪನಯನ, ಮದುವೆಯಂತಹ ಕಾರ್ಯಕ್ರಮಗಳು ನಡೆಯುವುದಿದ್ದರೆ (ಮನೆಗಳಲ್ಲಿ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ) ಈಗ ದೇವಸ್ಥಾನಗಳ ಬ್ರಹ್ಮಕಲಶೋತ್ಸವಕ್ಕೆ ಜೀರ್ಣೋದ್ಧಾರ ನಡೆಸುತ್ತಿರುವ ಭಾವನೆ ಬರುತ್ತದೆ.

ಅಟ್ಟದ ಮೇಲೆ ಛತ್ರಿ ಚಾಮರ ಇದ್ದುದನ್ನು ಕಂಡ ಬಾಲಕ ತಿ.ತಾ.ಶರ್ಮ ತಾತನನ್ನು ಕೇಳಿದರಂತೆ. “ನಮ್ಮದು ವಿಜಯನಗರದ ಅರಸರಿಗೆ ರಾಜಗುರುಗಳ ಮನೆಯಪ್ಪ’ ಅಂದದ್ದೇ ತಡ ಮೊಮ್ಮಗನ ಸಂತೋಷ, ಹೆಮ್ಮೆಗೆ ಪಾರವೇ ಇಲ್ಲ. ಜತೆಗೆ “ನೀನಿಂತಹ ಮನೆತನದವನೆಂಬುದನ್ನು ಮರೆಯಬೇಡ. ಮನೆಗೆ ಕೆಟ್ಟ ಹೆಸರು ತರಬೇಡ’ ಎಂದೂ ಆ ಮಾತು ಎಚ್ಚರಿಸುತ್ತಿದ್ದವು. ಶರ್ಮರ ಜತೆಗೆ ಏಳೆಂಟು ಮಂದಿ ಹುಡುಗರಿಗೂ ಉಪನಯನ ನಡೆಯಿತು. ಇವರೆಲ್ಲ ಯಾರು ಎಂದು ಪ್ರಶ್ನೆ ಹಾಕಿದಾಗ ತಾಯಿ ಉತ್ತರ ಹೀಗಿತ್ತು: “ಇವರೆಲ್ಲ ನಮ್ಮವರೇ. ಅವರ ತಂದೆತಾಯಿಗಳಿಗೆ ಸಾಕಷ್ಟು ಅನುಕೂಲವಿಲ್ಲ. ಆ ಮಕ್ಕಳ ತಂದೆ ತಾಯಿಗಳಿಗಾದರೋ ವೈಭವದಿಂದ ಈ ಉತ್ಸವ ನಡೆಯಬೇಕೆಂಬಾಸೆ, ನಡೆಯುತ್ತಿದೆ ಈ ದೊಡ್ಡ ಮನೆಯಲ್ಲಿ. ಹೀಗೆ ಹತ್ತಾರು ಮಂದಿಗೆ ಉಪನಯನವಾಗುವುದು ಹಳೆಯ ಸಂಪ್ರದಾಯ’.

“ತಾಯಿ ಹೇಳಿದ ಮಾತು ಎಷ್ಟು ಮಟ್ಟಿಗೆ ಅರ್ಥವಾಯಿತೋ ಹೇಳಲಾರೆ. ಆದರೆ ಹತ್ತು ಮಂದಿ ವಟುಗಳ ನೋಟ ನನ್ನ ಕಣ್ಣುಗಳಿಗೆ ಹಬ್ಬವಾಗಿತ್ತು’ ಎಂಬುದನ್ನು ತಿ.ತಾ.ಶರ್ಮರು 75ರ ಇಳಿವಯಸ್ಸಿನಲ್ಲಿ ಬರೆದ “ನನ್ನ ಜೀವನ ಮತ್ತು ಧ್ಯೇಯ’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ರಾಜಗುರುಗಳ ಮನೆತನವಲ್ಲವೆ? ಶಿಷ್ಯರ ಉತ್ಸಾಹ, ಸೇವೆ, ಸಹಾಯ ಅಳೆಯಲಾಗದ್ದಂತೆ. ನೂರಾರು ಮಂದಿ ರೆಡ್ಡಿ, ಗೌಡರು ದೂರದೂರುಗಳಿಂದ ಬಂದಿದ್ದರು. ಬಂದವರಲ್ಲಿ ಒಬ್ಬರು ಅನುಕೂಲಸ್ಥ ರೆಡ್ಡಿ ಚಿನ್ನದ ಎಳೆಗಳಲ್ಲಿ ಎರಡು ಜನಿವಾರ ಮಾಡಿಸಿ ತಾತನ ಕೈಯಲ್ಲಿ ಕೊಟ್ಟು ಇಬ್ಬರು ವಟುಗಳಿಗೆ ಹಾಕಬೇಕು ಎಂದು ವಿನಂತಿಸಿದರು. ತಾತನ ಉತ್ತರ ಹೀಗಿತ್ತು: “ನಿಮ್ಮ ಭಕ್ತಿ ತಲೆದೂಗಿಸುವಂಥದ್ದು. ನಿಮ್ಮ ಮನೆತನದ ಗುರುಭಕ್ತಿಯ ಕೀರ್ತಿ ನೂರಾರು ವರ್ಷಗಳಷ್ಟು ಪುರಾತನವಾದದ್ದು. ನಿಮ್ಮ ಕೈಗಳ ಔದಾರ್ಯವನ್ನೂ ಮೀರಿಸಿದ್ದು ನಿಮ್ಮ ಹೃದಯದ ಔದಾರ್ಯ.

ಮನೆಯಲ್ಲಿ ಬೆಳೆದ ಹತ್ತಿ ಹಿಂಜಿ ಬತ್ತಿ ಮಾಡಿ ಸ್ನಾನಾನಂತರ ಮಡಿಯುಟ್ಟು, ಕದರಿನಿಂದ ದಾರ ತೆಗೆಯಬೇಕು. ಅದಕ್ಕೆಲ್ಲ ಒಂದು ಶಾಸ್ತ್ರವಿದೆ. ಹಾಗೆ ತೆಗೆದ ದಾರದಿಂದ ಮಂತ್ರಪೂರ್ವಕವಾಗಿ ಜನಿವಾರ ಹಾಕಬೇಕು. ಚಿನ್ನದಿಂದ ಮಾಡಿಸಿದ ಮಾತ್ರದಿಂದ ಇದು ಯಜ್ಞೋಪವೀತವೆನಿಸುವುದಿಲ್ಲ. ಆ ಪಾವಿತ್ರ್ಯ ಚಿನ್ನದ ಜನಿವಾರಕ್ಕೆ ಹೇಗೆ ಬರಬೇಕು?’. ರೆಡ್ಡಿ ಕೂಡ ಅಷ್ಟಕ್ಕೆ ಮುಗಿಸಲಿಲ್ಲ: “ಶಾಸ್ತ್ರಕ್ಕಾಗಿಯೋ, ಮಡಿಗಾಗಿಯೋ ನೀವು ಹಾಕುವ ಜನಿವಾರ ನೀವು ಹಾಕಿಬಿಡಿ. ಜತೆಗೆ ಅಲಂಕಾರಕ್ಕಾಗಿ, ನಮ್ಮ ತೃಪ್ತಿಗಾಗಿ ಈ ಎಳೆಗಳನ್ನು ಹಾಕಬಹುದಲ್ಲ?’. ತಾತನ ಮರು ಉತ್ತರ ಹೀಗಿತ್ತು: “ಹತ್ತು ಮಂದಿ ವಟುಗಳು ದೀಕ್ಷೆ ವಹಿಸುತ್ತಿದ್ದಾರೆ. ಎಲ್ಲರೂ ಎಳೆ ಮಕ್ಕಳು. ನೀವು ನಮ್ಮ ಮಕ್ಕಳಿಬ್ಬರಿಗೆ ಚಿನ್ನದೆಳೆ ಹಾಕಿದರೆ ಉಳಿದ ಮಕ್ಕಳ ಮನಸ್ಸಿಗೆ  ನೋವಾದೀತು.  ಮಕ್ಕಳ ತಂದೆತಾಯಿಗಳಿಗಂತೂ ಇದರಿಂದ ಅಪಾರ ದುಃಖವಾಗುತ್ತದೆ. ಅವರು ನಮ್ಮ ಮಕ್ಕಳು ನಿರ್ಭಾಗ್ಯರ ಹೊಟ್ಟೆಯಲ್ಲಿ ಹುಟ್ಟಿದರು ಎಂದು ಮರುಗುವರು. ಇದಕ್ಕೆ ನಾವೇಕೆ ಅವಕಾಶ ಕೊಡಬೇಕು?’. ಲೋಕವ್ಯವಹಾರ ಚೆನ್ನಾಗಿ ತಿಳಿದಿದ್ದ ರೆಡ್ಡಿಯವರು “ನಿಮಗೆ ಹೇಗೆ ಸೂಕ್ತವೋ ಹಾಗೆ ಮಾಡಿ’ ಎಂದರು. ಇದು ನಡೆದದ್ದು 1903ರಲ್ಲಿ…

ಈಗಿನ ಸಾಮೂಹಿಕ ಉಪನಯನ-ವಿವಾಹ ಸ್ಥಿತಿ
ಸಾಮೂಹಿಕ ಉಪನಯನ-ವಿವಾಹಗಳು ಈಗ ಮನೆಗಳಿಂದ ಮಂಟಪಗಳಿಗೆ ಸ್ಥಳಾಂತರವಾಗಿವೆ. ಇಲ್ಲಿ ಆಯೋಜಕರು ಮತ್ತು ಫ‌ಲಾನುಭವಿಗಳ ಅಂತಸ್ತು ವ್ಯತ್ಯಾಸ ಹೇಗಿರುತ್ತದೆ? ಆಯೋಜಕ ಘಟಾನುಘಟಿಗಳು ಫ‌ಲಾನುಭವಿಗಳ ಜತೆ ಸಾಮಾಜಿಕ ಅಂತಸ್ತಿನಲ್ಲಿ ಸಮಾನರಾಗಿರಲು ಸಿದ್ಧರೆ? ಉಚಿತ ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಂಡು ಸಾಲ ಮಾಡಿ ಮೆಹಂದಿಗೆ ಖರ್ಚು ಮಾಡುವುದೂ ಸಾಮಾಜಿಕ ಅಂತಸ್ತನ್ನು ಕಾಪಾಡಿಕೊಳ್ಳಲು. ಇದು ಸಮಗ್ರ ಸಮಾಜವನ್ನು ಮತ್ತಷ್ಟು ಆರ್ಥಿಕ ದಿವಾಳಿತನಕ್ಕೆ ಕೊಂಡೊಯ್ಯುತ್ತದೆ. ಇದರ ಮೂಲ ಇರುವುದು ಆರ್ಥಿಕ ಬಲಾಡ್ಯರು ಮತ್ತು ದುರ್ಬಲರ ನಡುವೆ ಎದ್ದು ಕಾಣುವ ಸಾಮಾಜಿಕ ಅಂತರದಲ್ಲಿ. ಗಾಂಧೀಜಿಯವರು 1934ರ ಫೆ. 25ರಂದು ಉಡುಪಿಗೆ ಬಂದಾಗ ಚಿನ್ನವನ್ನು ಸಮರ್ಪಿಸಿದ 10ರ ಬಾಲೆ ಪಾಂಗಾಳ ನಿರುಪಮಾ ನಾಯಕ್‌ ಅವಳಿಗೆ ಹೇಳಿದ ಮಾತು ಇದು: “ನೀನು ಆಭರಣಗಳನ್ನು ಪ್ರದರ್ಶನಕ್ಕಾಗಿ ಹಾಕ‌ಬಾರದು. ಭಾರತ ಬಡವರ ದೇಶ. ಇದರಿಂದ ಇಲ್ಲದವರ ಮನಸ್ಸಿಗೆ ನೋವಾಗುತ್ತದೆ’. ನಿರುಪಮಾ ಜೀವನದ ಕೊನೆಯವರೆಗೂ ತೀರಾ ಕನಿಷ್ಠ ಪ್ರಮಾಣದ ಚಿನ್ನ ಮಾತ್ರ ಧರಿಸುತ್ತಿದ್ದರು. ಗಾಂಧೀಜಿಗೆ ಮುನ್ನವೇ ಅವರ ಮಾತಿನ ಸಾರ ತಿ.ತಾ.ಶರ್ಮರ ತಾತನ ಬಾಯಿಂದ ಹೊರಬಿದ್ದಿತ್ತು.

1924ರ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದಲ್ಲಿ ತಿ.ತಾ.ಶರ್ಮ 20ರ ಯುವಕನಾಗಿದ್ದಾಗ ತಾನು ಆರಂಭಿಸುವ ಹೊಸ ಪತ್ರಿಕೆಗೆ ಗಾಂಧೀಜಿಯವರಲ್ಲಿ ಸಂದೇಶವನ್ನು ಕೇಳಿದರು. ಆಗ ಗಾಂಧೀಜಿ ಕೊಟ್ಟ ಸಂದೇಶ “ಕರೇಜ್‌ ಆ್ಯಂಡ್‌ ಕ್ಯಾರೆಕ್ಟರ್‌’ (ಧೈರ್ಯ ಮತ್ತು ಚಾರಿತ್ರ್ಯ). 1934ರ ಫೆ. 25ರಂದು ಉಡುಪಿ ನಾಗರಿಕರಿಗೆ ಕೊನೆಯಲ್ಲಿ ಕೊಟ್ಟ ಸಂದೇಶ “ಸ್ಟಾಂಡ್‌ ಅಪ್‌ ಫಾರ್‌ ಟ್ರಾತ್‌ ಎಟ್‌ ಎನಿ ಕಾಸ್ಟ್‌’ (ಏನೇ ಆದರೂ ಸತ್ಯದ ಪರವಾಗಿರಬೇಕು). ಚಾರಿತ್ರ್ಯವಿದ್ದಾಗಲೇ ನಿರ್ಭಯತೆ (ಧೈರ್ಯ) ಬರುತ್ತದೆ, ಸತ್ಯವೂ ಇದನ್ನೇ ಕೊಡುತ್ತದೆ ಎನ್ನುವುದು ಗಾಂಧೀಜಿ ನೀತಿ ಎನ್ನುವುದಕ್ಕಿಂತ ಲಾಗಾಯ್ತಿನಿಂದ ಬಂದ ತಣ್ತೀಶಾಸ್ತ್ರದ ಸಂದೇಶ ಎನ್ನಬಹುದು.

ತಿ.ತಾ.ಶರ್ಮರ ತಾತನ ಮಾತು ಮೊಮ್ಮಗನಿಗೆ ಮಾತ್ರವಲ್ಲ, ಗಾಂಧೀಜಿ ಮಾತು ಕೇವಲ ತಿ.ತಾ.ಶರ್ಮ, ನಿರುಪಮಾಗೆ ಮಾತ್ರವಲ್ಲ, ಎಲ್ಲರಿಗೂ… ಆದರೆ ಈಗ ಕಾಣುತ್ತಿರುವುದು…?

-ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kalaburagi: ಸಿಎಂ ಸಿದ್ಧರಾಮಯ್ಯ ರಾಜೀನಾಮೆ ಕೊಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ

Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.