ಕಾವೂರು : ಅಂಗಡಿಯಲ್ಲಿ ಬಟ್ಟೆ ಎಗರಿಸಿದ ಬುರ್ಖಾಧಾರಿ ಮಹಿಳೆ… ವಿಡಿಯೋ ವೈರಲ್
Team Udayavani, Oct 15, 2022, 10:23 AM IST
ಮಂಗಳೂರು : ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಬುರ್ಖಾಧಾರಿ ಮಹಿಳೆಯೊಬ್ಬರು ಅಂಗಡಿಯಲ್ಲಿದ್ದ ಬಟ್ಟೆಗಳನ್ನು ಎಗರಿಸಿ ಪರಾರಿಯಾದ ಘಟನೆ ಕಾವೂರಿನ ದುರ್ಗಾ ಪ್ರಸಾದ್ ಕಟ್ಟಡದಲ್ಲಿರುವ ಸಂಧ್ಯಾ ಟೆಕ್ಸ್ ಟೈಲ್ ನಲ್ಲಿ ನಡೆದಿದೆ.
ಘಟನೆ ಸಪ್ಟೆಂಬರ್ ತಿಂಗಳಲ್ಲಿ ನಡೆದಿದ್ದು ಮಹಿಳೆ ಬಟ್ಟೆ ಎಗರಿಸುವ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೃಶ್ಯದಲ್ಲಿ ಕಾಣುವಂತೆ ಬಟ್ಟೆ ಖರೀದಿಸುವ ನೆಪದಲ್ಲಿ ಬುರ್ಖಾ ಧರಿಸಿಕೊಂಡು ಬಂದ ಮಹಿಳೆಯೊಬ್ಬರು ಅಂಗಡಿಯಲ್ಲಿದ್ದ ಬಟ್ಟೆಗಳನ್ನು ನೋಡುತ್ತಾರೆ ಬಳಿಕ ಅಂಗಡಿಯಲ್ಲಿದ್ದ ಸಿಬ್ಬಂದಿ ಇನ್ನೋರ್ವ ಗ್ರಾಹಕರ ಬಳಿಗೆ ಹೋದ ವೇಳೆ ಬುರ್ಖಾಧಾರಿ ಮಹಿಳೆ ಅಂಗಡಿಯಲ್ಲಿದ್ದ ಕೆಲವೊಂದು ಬಟ್ಟೆಗಳನ್ನು ತಾನು ಧರಿಸಿದ ಬಟ್ಟೆಯ ಒಳಗೆ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗುತ್ತಾಳೆ. ಈ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕ ಬಟ್ಟೆ ಕಳವಾದ ಕುರಿತು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೇಸು ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತ್ತೆಗೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ : ಪಡುಬಿದ್ರಿ : ಕೆಎಸ್ಸಾರ್ಟಿಸಿ ಬಸ್ ಸಿಬಂದಿ ಮೇಲೆ ಹಲ್ಲೆ, ಆರೋಪಿಗಳ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.