![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 15, 2022, 3:42 PM IST
ಲಕ್ನೋ: ಅಂಗಡಿಯ ಹೊರಭಾಗದಲ್ಲಿ ಉರಿಯುತ್ತಿದ್ದ ಬಲ್ಬ್ ಅನ್ನು ಕಳವುಗೈದ ಆರೋಪದಡಿ ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಪೊಲೀಸ್ ಕಾನ್ಸ್ ಟೇಬಲ್ ಅಮಾನತುಗೊಂಡಿದ್ದು, ಬಲ್ಬ್ ಕಳವು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಇಂಡಿಯಾ ಆರ್ಭಟಕ್ಕೆ ಲಂಕಾ ಪತನ: ಏಳನೇ ಬಾರಿಗೆ ಏಷ್ಯಾ ಕಪ್ ಗೆದ್ದ ಭಾರತ ವನಿತಾ ತಂಡ
ಎಂದಿನಂತೆ ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದ ಸಂದರ್ಭದಲ್ಲಿ ಬಲ್ಬ್ ಕಾಣೆಯಾಗಿರುವುದು ಮಾಲೀಕನ ಗಮನಕ್ಕೆ ಬಂದಿತ್ತು. ಬಳಿಕ ಅವರು ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ, ಅಚ್ಚರಿಯಾಗಿತ್ತು ಯಾಕೆಂದರೆ ರಾತ್ರಿ ಡ್ಯೂಟಿಯಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಬಲ್ಬ್ ತೆಗೆದು ಕಿಸೆಯೊಳಗೆ ಹಾಕಿಕೊಂಡಿರುವ ದೃಶ್ಯ ಸೆರೆಯಾಗಿತ್ತು.
“ಮುಚ್ಚಿದ್ದ ಅಂಗಡಿ ಬಳಿ ಬಂದು ಸುತ್ತಮುತ್ತ ಗಮನಿಸಿದ ನಂತರ ಕಾನ್ಸ್ ಟೇಬಲ್ ರಾಜೇಶ್ ವರ್ಮಾ, ಉರಿಯುತ್ತಿದ್ದ ಬಲ್ಬ್ ಅನ್ನು ತೆಗೆದು, ಕಿಸಿಯೊಳಗೆ ಹಾಕಿ ನಡೆದು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ದಸರಾ ಹಬ್ಬದಂದು ವರ್ಮಾ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ವರದಿ ತಿಳಿಸಿದೆ.
Uttar Pradesh: Policeman steals LED bulb, caught on CCTV camera #UttarPradesh #LED #WATCH #UPPolice #ViralVideo #वायरल #Prayagraj #cctv pic.twitter.com/WEtp86Lbt2
— Harish Deshmukh (@DeshmukhHarish9) October 15, 2022
ಈ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿದ್ದು, ಬಳಿಕ ಕಾನ್ಸ್ ಟೇಬಲ್ ವರ್ಮಾ ಅವರನ್ನು ಅಮಾನತು ಮಾಡಲಾಗಿದೆ. ವರ್ಮಾಗೆ ಇತ್ತೀಚೆಗಷ್ಟೇ ಪ್ರಮೋಷನ್ ನೀಡಿ ಫುಲ್ಪುರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಕತ್ತಲಾಗಿದ್ದರಿಂದ ಆ ಬಲ್ಬ್ ಅನ್ನು ತೆಗೆದು ತಾನು ನಿಂತಿದ್ದ ಜಾಗದಲ್ಲಿ ಬಲ್ಬ್ ಹಾಕಿಕೊಂಡಿರುವುದಾಗಿ ಅಮಾನತುಗೊಂಡಿರುವ ಪೊಲೀಸ್ ಕಾನ್ಸ್ ಟೇಬಲ್ ವರ್ಮಾ ಸಮಜಾಯಿಷಿ ನೀಡಿರುವುದಾಗಿ ವರದಿ ತಿಳಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.