ಹಿಂದಿಗೆ ಡಬ್ ಆದ ‘ಕಾಂತಾರ’ ಮೊದಲ ದಿನ ಗಳಿಸಿದ್ದೆಷ್ಟು? ಗಾಡ್ ಫಾದರ್ ಮೀರಿಸಿದ ರಿಷಬ್ ಸಿನಿಮಾ
Team Udayavani, Oct 15, 2022, 4:28 PM IST
ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಶನ್ ಮಾಡಿದ ಕಾಂತಾರ ಇದೀಗ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಬೇರೆ ಇಂಡಸ್ಟ್ರಿ ನಟರು, ನಿರ್ದೇಶಕರು ಚಿತ್ರವನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಟರಾದ ಧನುಷ್, ಕಾರ್ತಿ, ರಾಣಾ ದಗ್ಗುಬಾಟಿ ಮುಂತಾದವರು ಚಿತ್ರವನ್ನು ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬಾಹುಬಲಿ ಸ್ಟಾರ್ ಪ್ರಭಾಸ್ ಎರಡನೇ ಬಾರಿ ಚಿತ್ರ ನೋಡಿರುವುದಾಗಿ ಟ್ವೀಟ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಶುಕ್ರವಾರ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ. ಹಿಂದಿ ವರ್ಷನ್ ಸುಮಾರು 2500ಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ. ಇದೀಗ ಚಿತ್ರದ ಮೊದಲ ದಿನ ಕಲೆಕ್ಷನ್ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಕಾಂತಾರ ಹಿಂದಿ ಅವತರಣಿಕೆಯ ಮೊದಲ ದಿನದ ಕಲೆಕ್ಷನ್ ವರದಿಯ ಬಗ್ಗೆ ಮಾಹಿತಿ ನೀಡಿದ್ದಾರೆ. “ ಇತ್ತೀಚೆಗೆ ಹಿಂದಿಗೆ ಡಬ್ ಆದ ಚಿತ್ರಗಳಿಗಿಂತ ಕಾಂತಾರ ಚಿತ್ರ ಉತ್ತಮ ಆರಂಭ ಪಡೆದುಕೊಂಡಿದೆ. ಮಹರಾಷ್ಟ್ರದಲ್ಲಿ ಉತ್ತಮವಾಗಿದ್ದು, ಉತ್ತರ ಭಾರತದಲ್ಲಿ ಕಡಿಮೆಯಾಗಿದೆ. ಮೊದಲ ದಿನ 1.27 ಕೋಟಿ ರೂ ಗಳಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ.
#Kantara *#Hindi version* opens better than recent dubbed films… Picked up pace towards the evening… #Maharashtra leads, North circuits low… Dependent on Day 2 and 3 for a respectable weekend total… Fri ₹ 1.27 cr. #India biz. Nett BOC. pic.twitter.com/VBhq3wsFwF
— taran adarsh (@taran_adarsh) October 15, 2022
ರಿಷಬ್ ಶೆಟ್ಟಿ ನಿರ್ದೇಶನದಲ್ಲಿ, ಕರಾವಳಿಯ ಸೊಗಡು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಮೂಡಿಬಂದಿರುವ “ಕಾಂತಾರ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದ ಚಿರಂಜೀವಿ-ಸಲ್ಮಾನ್ ಖಾನ್ ನಟನೆಯ ಗಾಡ್ ಫಾದರ್ ಚಿತ್ರಕ್ಕಿಂತ ಹೆಚ್ಚಿನ ಮೊದಲ ದಿನದ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
“ಹೊಂಬಾಳೆ ಫಿಲಂಸ್’ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ಸಪ್ತಮಿ ಗೌಡ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಕಿಶೋರ್, ಅಚ್ಯುತ ಕುಮಾರ್, ಪ್ರಕಾಶ್ ತುಮ್ಮಿನಾಡ್, ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ ಮೊದಲಾದವರು “ಕಾಂತಾರ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ
ಸದ್ಯ ಕನ್ನಡದಲ್ಲಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತ ಮುನ್ನಡೆಯುತ್ತಿರುವ “ಕಾಂತಾರ’ದ ವಿಜಯ ಯಾತ್ರೆ, ಇದೀಗ ಉತ್ತರ ಭಾರತದತ್ತ ಮುನ್ನುಗ್ಗುತ್ತಿದ್ದು, ಹಿಂದಿಯಲ್ಲಿ “ಕಾಂತಾರ’ ಅಬ್ಬರ ವೀಕೆಂಡ್ ನಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.