ಟಿ20 ಕ್ರಿಕೆಟ್: ವಿಶ್ವರೂಪ ದರ್ಶನ; ಇಂದಿನಿಂದ ಗ್ರೂಪ್ ಸ್ಪರ್ಧೆ
4 ತಂಡಗಳಿಗೆ ಸೂಪರ್-12 ಅವಕಾಶ
Team Udayavani, Oct 16, 2022, 7:55 AM IST
ಮೆಲ್ಬರ್ನ್: ಒಂದೇ ವರ್ಷದ ಅಂತರದಲ್ಲಿ ಮತ್ತೊಂದು ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವ ಳಿಯ ಆಗಮನವಾಗಿದೆ. ಆಸ್ಟ್ರೇಲಿಯ ಆತಿಥ್ಯದಲ್ಲಿ ಅ. 16ರಿಂದ ಮೊದ ಲ್ಗೊಂಡು ನ. 13ರ ತನಕ ಚುಟುಕು ಕ್ರಿಕೆಟಿನ ವಿಶ್ವರೂಪ ದರ್ಶನವಾಗಲಿದೆ.
16 ತಂಡಗಳು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ 8 ತಂಡಗಳು ನೇರ ಪ್ರವೇಶ ಪಡೆದಿವೆ. ಉಳಿದ 4 ತಂಡಗಳನ್ನು ನಿರ್ಧರಿಸಲು ಗ್ರೂಪ್ ಹಂತದ ಪಂದ್ಯಗಳನ್ನು ಆಯೋಜಿ ಸಲಾಗಿದ್ದು, ರವಿವಾರದಿಂದ ಈ ಸ್ಪರ್ಧೆ ಆರಂಭಗೊಳ್ಳಲಿದೆ.
ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್, ಮಾಜಿ ಚಾಂಪಿ ಯನ್ ಶ್ರೀಲಂಕಾ ಸೇರಿದಂತೆ ಇಲ್ಲಿ 8 ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಗ್ರೂಪ್ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಮುಖ್ಯ ಸುತ್ತು ಪ್ರವೇಶಿ ಸಲಿವೆ. ಇದು ಸೂಪರ್-12 ರೌಂಡ್.
2021ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಸಾಧನೆಗೈದ 8 ತಂಡಗಳು ನೇರವಾಗಿ ಸೂಪರ್-12 ಹಂತವನ್ನು ತಲುಪಿವೆ. 2021ರ ನ. 15ಕ್ಕೆ ಅನ್ವಯವಾಗುವ ರ್‍ಯಾಂಕಿಂಗ್ ಮಾನದಂಡವನ್ನೂ ಇಲ್ಲಿ ಅನುಸರಿಸಲಾಗಿದೆ.
ಗ್ರೂಪ್ ಹಂತದ ಪಂದ್ಯಗಳು ಗೀಲಾಂಗ್ ಮತ್ತು ಹೋಬರ್ಟ್‌ನಲ್ಲಿ ನಡೆಯಲಿವೆ. ಸೂಪರ್-12 ಸ್ಪರ್ಧೆಗಳ ತಾಣ ಮೆಲ್ಬರ್ನ್, ಅಡಿಲೇಡ್, ಸಿಡ್ನಿ, ಬ್ರಿಸ್ಬೇನ್ ಮತ್ತು ಪರ್ತ್.
ಎರಡು ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯ ಹೊರತುಪಡಿಸಿ ಬೇರೆ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ನ. 9 ಮತ್ತು 10ರಂದು ಸಿಡ್ನಿ ಹಾಗೂ ಅಡಿಲೇಡ್‌ನಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ರೌಂಡ್-1 ಗ್ರೂಪ್ಸ್
“ಎ’ ವಿಭಾಗ: ನಮೀಬಿಯಾ, ನೆದರ್ಲೆಂಡ್ಸ್, ಶ್ರೀಲಂಕಾ, ಯುಎಇ.
“ಬಿ’ ವಿಭಾಗ: ಐರ್ಲೆಂಡ್,
ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್, ಜಿಂಬಾಬ್ವೆ.
ಇಂದಿನ ಪಂದ್ಯಗಳು
1. ಶ್ರೀಲಂಕಾ-ನಮೀಬಿಯಾ
ಆರಂಭ: ಬೆ. 9.30
2. ಯುಎಇ-ನೆದರ್ಲೆಂಡ್ಸ್
ಆರಂಭ: ಅ. 1.30
ಸ್ಥಳ: ಗೀಲಾಂಗ್
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.