ಪ್ರಭಾಕರ ಕೋರೆ ಜೀವಂತ ಶಿಕ್ಷಣ ಸಂಸ್ಥೆ: ಧರ್ಮೇಂದ್ರ ಪ್ರಧಾನ್
Team Udayavani, Oct 15, 2022, 11:27 PM IST
ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರೊಬ್ಬ ಜೀವಂತ ಶಿಕ್ಷಣ ಸಂಸ್ಥೆ ಎಂದು ಕೇಂದ್ರ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ನಗರದಲ್ಲಿ ಶನಿವಾರ ಜರಗಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದೇ ಮಾತಿನಲ್ಲಿ ಹೇಳುವುದಾದರೆ ಕೋರೆ ಅವರು ಮಾಡದ ಸಾಮಾಜಿಕ ಕೆಲಸ ಇಲ್ಲ. ಬಿಡದ ಕ್ಷೇತ್ರ ಇಲ್ಲ ಎಂದರು.
ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಸಮಾಜದಲ್ಲಿ ಒಳ್ಳೆಯ ಪರಿವರ್ತನೆ ಆಗಬೇಕಿದೆ. ಈ ಪರಿವರ್ತನೆ ಸದಾಚಾರದ ಪರಿವರ್ತನೆಯಾಗಬೇಕಿದೆ. ಇದು ಸಾಧ್ಯವಾಗಬೇಕಾದರೆ ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ ಎಂದರು.
ಕೀರ್ತಿ ಬೆಳೆಯಲಿ-ಬೆಳೆಸಲಿ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ, ಮನಸ್ಸು, ಕೃತಿ ಮತ್ತು ಮಾತಿನಲ್ಲಿ ಒಂದೇ ಆಗಿದ್ದವರು ಮಹಾನ್ ವ್ಯಕ್ತಿಗಳಾಗುತ್ತಾರೆ. ಸತು³ರುಷರಾಗುತ್ತಾರೆ. ಅದಕ್ಕೆ ಪ್ರಭಾಕರ ಕೋರೆ ಬಹಳ ಉತ್ತಮ ಉದಾಹರಣೆ ಎಂದರು.
ಬೊಮ್ಮಾಯಿ ಶ್ಲಾಘನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಭಾಕರ ಕೋರೆ ಅವರ ಕೈಯಲ್ಲಿ ಕೆಎಲ್‌ಇ ಸಂಸ್ಥೆ ಸುರಕ್ಷಿತವಾಗಿದೆ. 21ನೇ ಶತಮಾನಕ್ಕೆ ಏನು ಬೇಕೋ ಅದನ್ನು ಕೆಎಲ್‌ಇ ಸಂಸ್ಥೆಯ ಮೂಲಕ ಕೊಟ್ಟಿದ್ದಾರೆ. ಸದಾ ಕಾಲ ಹೊಸತನ ಹುಡುಕುವ ಹವ್ಯಾಸ ಅವರದ್ದು. ಅದರಿಂದಲೇ ಸಂಸ್ಥೆ ಇಂದು ಎಲ್ಲ ರಂಗಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದರು.
ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ, ಪ್ರಧಾನಿ ಮೋದಿ ಅವರ ನವ ಭಾರತ ಕನಸನ್ನು ಪ್ರಭಾಕರ ಕೋರೆ ನನಸು ಮಾಡುತ್ತಿದ್ದಾರೆ ಎಂದರು.
ಕೋರೆ ಸಾಧನೆ ಮಾದರಿ
ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಕೆಲವರನ್ನು ನೋಡಿದ ಕೂಡಲೇ ಜೀವನದಲ್ಲಿ ಉತ್ಸಾಹ ಮೂಡುತ್ತದೆ. ಜೀವನದಲ್ಲಿ ಏನಾ ದರೂ ಸಾಧಿಸಬೇಕೆಂಬ ಛಲ ಮೂಡುತ್ತದೆ. ಇದಕ್ಕೆ ಪ್ರಭಾಕರ ಕೋರೆ ಪ್ರತಿಯೊಬ್ಬರಿಗೂ ಮಾದರಿ ಯಾಗಿ ನಿಲ್ಲುತ್ತಾರೆ ಎಂದರು.
ಇದೇ ಸಂದರ್ಭ ಪ್ರಭಾಕರ ಕೋರೆ ಅವರಿಗೆ ಪುಸ್ತಕಗಳ ಮೂಲಕ ತುಲಾಭಾರ ನಡೆಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋರೆ ದಂಪತಿಯನ್ನು ಸರಕಾರದ ಪರವಾಗಿ ಸಮ್ಮಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.