ಟೀಂ ಇಂಡಿಯಾಕ್ಕಿಂದು ಮೊದಲ ಅಭ್ಯಾಸ ಪಂದ್ಯ: ಟಾಸ್ ಗೆದ್ದ ಆಸ್ಟ್ರೇಲಿಯಾಕ್ಕಿಲ್ಲ ವಾರ್ನರ್ ಬಲ
Team Udayavani, Oct 17, 2022, 9:17 AM IST
ಬ್ರಿಸ್ಬೇನ್: ಐಸಿಸಿ ಟಿ20 ವಿಶ್ವಕಪ್ 2022ರ ಅಭಿಯಾನ ಆರಂಭಕ್ಕೂ ಮೊದಲು ಭಾರತ ತಂಡವು ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಪ್ರಮುಖ ಕೂಟಕ್ಕೂ ಮೊದಲು ಎರಡು ಅಭ್ಯಾಸ ಪಂದ್ಯ ಆಡುತ್ತಿದ್ದು, ಮೊದಲ ಪಂದ್ಯ ಇಂದು ಗಾಬ್ಬಾ ಮೈದಾನದಲ್ಲಿ ಆರಂಭವಾಗಿದೆ.
ಇಂದಿನ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದ ಆಸೀಸ್ ನಾಯಕ ಆ್ಯರೋನ್ ಫಿಂಚ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಕಳೆದ ವಿಶ್ವಕಪ್ ಹೀರೋ, ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಕುತ್ತಿಗೆ ನೋವಿನಿಂದಾಗಿ ಭಾರತದೆದುರು ಆಡುತ್ತಿಲ್ಲ.
ಭಾರತ ತಂಡ 15 ಜನರ ತಂಡವನ್ನು ಆಯ್ಕೆಮಾಡಿದೆ. ಆದರೆ ಬ್ಯಾಟಿಂಗ್ ಆರ್ಡರ್ ನೀಡಿದ್ದು, ಅದರ ಪ್ರಕಾರ ದೀಪಕ್ ಹೂಡಾ, ರಿಷಭ್ ಪಂತ್, ಮೊಹಮ್ಮದ್ ಶಮಿ ಮತ್ತು ಚಾಹಲ್ 11ರ ಬಳಗದಲ್ಲಿಲ್ಲ. ಶಮಿ ಮತ್ತು ಚಾಹಲ್ ಬೌಲಿಂಗ್ ಮಾಡಬಹುದು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿ.ಕೀ), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.- ದೀಪಕ್ ಹೂಡಾ, ರಿಷಭ್ ಪಂತ್, ಮೊಹಮ್ಮದ್ ಶಮಿ ಮತ್ತು ಚಾಹಲ್.
ಆಸ್ಟ್ರೇಲಿಯಾ: ಆರನ್ ಫಿಂಚ್ (ನಾ), ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್ (ವಿ.ಕೀ), ಟಿಮ್ ಡೇವಿಡ್, ಆಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.