ವೇತನಕ್ಕಾಗಿ ಆರ್ ಟಿಪಿಎಸ್ ಚಿಮಣಿ ಏರಿ ಕಾರ್ಮಿಕನ ಪ್ರತಿಭಟನೆ
Team Udayavani, Oct 17, 2022, 11:38 AM IST
ರಾಯಚೂರು: ಕಳೆದ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ವೇತನ, ಸೌಲಭ್ಯಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವ ಕ್ರಮ ಖಂಡಿಸಿ ಆರ್ ಟಿಪಿಎಸ್ ಕಾರ್ಮಿಕ ಕೇಂದ್ರದ ಚಿಮಣಿ ಏರಿ ಪ್ರತಿಭಟನೆ ನಡೆಸುತ್ತಿದ್ದಾನೆ.
ಸುಮಾರು ಎಂಟು ನಿಮಿಷಗಳ ವೀಡಿಯೊ ಮಾಡಿ ನೋವು ತೋಡಿಕೊಂಡಿರುವ ಕಾರ್ಮಿಕ, ಎಲ್ಲ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿದ್ದಾನೆ. ಮಿಲ್ ಮೆಂಟೆನೇನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಒಮ್ಮೆ ನಮ್ಮ ಕಷ್ಟವನ್ನು ಕಣ್ಣಾರೆ ನೋಡಿ. ಸರ್ಕಾರಿ ನೌಕರರು, ಗುತ್ತಿಗೆ ಕಾರ್ಮಿಕರು ಒಂದೆ ಕಡೆ ಕೆಲಸ ಮಾಡಿದರೂ ಸೌಲಭ್ಯಗಳಲ್ಲಿ ಮಾತ್ರ ಅಜಗಜಾಂತರವಿದೆ. ಕೆಪಿಸಿ ಎಂಡಿಗೆ ಸಮಸ್ಯೆ ಹೇಳಿಕೊಂಡಿದ್ದಕ್ಕೆ ಗುತ್ತಿಗೆ ಸಂಸ್ಥೆ ನನಗೆ ಕಿರುಕುಳ ಕೊಡುತ್ತಿದೆ. ನಮ್ಮ ಹಕ್ಕು ಕೇಳಲು ಸ್ವಾತಂತ್ರ್ಯ ಇಲ್ಲದಾಗಿದೆ. ಗುತ್ತಿಗೆ ಕೊಡುವಾಗ ಎಚ್ಚರಿಕೆ ವಹಿಸಿ ಸಂಸ್ಥೆ ಮೇಲೆ ನಿಗಾ ವಹಿಸಿದರೆ ನಮಗೆ ಈ ಗತಿ ಬರುತ್ತಿರಲಿಲ್ಲ. ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಚಿಮಣಿ ಏರಿ ಕುಳಿತಿದ್ದಾನೆ.
ಇದನ್ನೂ ಓದಿ:ಮುಂಬೈ ರೈಲ್ವೇ ಪ್ಲಾಟ್‌ಫಾರ್ಮ್ ಪ್ರವೇಶಿಸಿದ ಆಟೋ ರಿಕ್ಷಾ… ಮುಂದೇನಾಯ್ತು
ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ಮತ್ತೊಂದೆಡೆ ಗುತ್ತಿಗೆ ಕಾರ್ಮಿಕರು ಹೋರಾಟ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.