ಈ ದಂಪತಿಗೆ ಪ್ರತಿ ತಿಂಗಳು ಫ್ರೀಯಾಗಿ ಸಿಗುತ್ತೆ ಫಿಜ್ಹಾ ಯಾಕೆಂದರೆ…
ಮದುವೆಯ ದಿನ ನವ ದಂಪತಿ ಮಾಡಿಕೊಂಡ ಒಪ್ಪಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Team Udayavani, Oct 17, 2022, 1:49 PM IST
ಅಸ್ಸಾಂ: ಜೊತೆಯಾಗಿ ಸಪ್ತಪದಿ ತುಳಿದು, ಜೀವನದ ಕಷ್ಟ-ಸುಖಗಳನ್ನು ಒಂದಾಗಿ ಎದುರಿಸುವುದು ದಾಂಪತ್ಯ ಜೀವನ. ಇಲ್ಲೊಂದು ದಂಪತಿ ಮದುವೆ ದಿನ ಮಾಡಿಕೊಂಡ ಒಪ್ಪಂದ ವೈರಲ್ ಆಗಿದ್ದು, ಈಗ ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಿದ್ದಾರೆ.
ಜೂ.21 ರಂದು ಹಸೆಮಣೆ ಏರಿದ ಶಾಂತಿ ಪ್ರಸಾದ್ – ಮಿಂಟು ರೈ ಮದುವೆ ದಿನ ಕೆಲ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಇದರಲ್ಲಿ ಪ್ರತಿದಿನ ಜಿಮ್ ಗೆ ಕರೆದುಕೊಂಡು ಹೋಗಬೇಕು. ಪ್ರತಿ 15 ದಿನಗಳಿಗೊಮ್ಮೆ ಶಾಪಿಂಗ್ ಗೆ ಕರೆದುಕೊಂಡು ಹೋಗಬೇಕು. ತಿಂಗಳಿಗೊಮ್ಮೆ ಫಿಜ್ಹಾ ತಿನ್ನಿಸಬೇಕೆಂದು ಲಿಸ್ಟ್ ಇತ್ತು. ಇಬ್ಬರು ಇದಕ್ಕೆ ಸಹಿ ಹಾಕಿದ್ದರು.
ಮದುವೆಯ ದಿನ ನವ ದಂಪತಿ ಮಾಡಿಕೊಂಡ ಒಪ್ಪಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಒಪ್ಪಂದಗಳಲ್ಲಿ ಯಾವುದನ್ನು ಅನುಸರಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಆದರೆ ಫಿಜ್ಹಾ ತಿನ್ನಿಸಲು ಕರೆದುಕೊಂಡು ಹೋಗುವುದು ಮಾತ್ರ ಒಪ್ಪಂದದಂತೆ ನಡೆಯುತ್ತಿದೆ.
ಈ ದಂಪತಿಗೆ ಫಿಜ್ಹಾ ಫ್ರೀಯಾಗಿ ಸಿಗುತ್ತಿದೆ. ಜನಪ್ರಿಯ ಫಿಜ್ಹಾ ಕಂಪೆನಿ ( ರೆಸ್ಟೋರೆಂಟ್) ಈ ದಂಪತಿಗೆ ಫ್ರೀಯಾಗಿ ಫಿಜ್ಹಾವನ್ನು ಪ್ರತಿ ತಿಂಗಳು ನೀಡುತ್ತಿದೆ. ಕರ್ವಾ ಚೌತ್ ಹಬ್ಬದ ದಿನ ಫಿಜ್ಹಾ ಹಟ್ ದಂಪತಿಗಳು ರೆಸ್ಟೋರೆಂಟ್ ಗೆ ಬಂದು ಫಿಜ್ಹಾ ತಿಂದು ಸಂಭ್ರಮಿಸುತ್ತಿರುವ ವಿಡಿಯೋವನ್ನು ಗುರುವಾರ ( ಅ.13 ರಂದು) ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದೆ.ಈ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.