ದೀಪಾವಳಿ ಬೋನಸ್: ತನ್ನ ಸಿಬ್ಬಂದಿಗಳಿಗೆ 10 ಕಾರು, 20 ಬೈಕ್ ಗಿಫ್ಟ್ ನೀಡಿದ ಮಾಲೀಕ
ಮಾಲೀಕನ ಕಾರ್ಯಕ್ಕೆ ಸಿಬ್ಬಂದಿಗಳು ಫಿದಾ
Team Udayavani, Oct 17, 2022, 3:11 PM IST
ಚೆನ್ನೈ : ಹೆಚ್ಚಿನ ಕಂಪೆನಿಗಳಲ್ಲಿ ದೀಪಾವಳಿಗೆ ಬೋನಸ್ ನೀಡುತ್ತಾರೆ ಅದು ಹೆಚ್ಚಾಗಿ ಹಣದ ರೂಪದಲ್ಲೇ ಇರುತ್ತದೆ ಆದರೆ ಚೆನ್ನೈ ನ ಈ ಕಂಪೆನಿಯ ಮಾಲೀಕ ತನ್ನ ಸಿಬ್ಬಂದಿಗಳಿಗೆ ನೀಡಿದ ಗಿಫ್ಟ್ ನೋಡಿ ಜನ ಹೌಹಾರಿದ್ದಾರೆ.
ಅಂದಹಾಗೆ ಚೆನ್ನೈನ ಆಭರಣ ಅಂಗಡಿಯ ಮಾಲೀಕರಾದ ಜಯಂತಿ ಲಾಲ್ ಚಲ್ಲಾನಿ ಅವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರು ಮತ್ತು ಬೈಕ್‌ಗಳನ್ನು ನೀಡಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಜಯಂತಿ ಲಾಲ್ ಅವರು ತನ್ನ ಸಿಬ್ಬಂದಿಗಳಿಗೆ ಬೋನಸ್ ನೀಡಲು ಬರೋಬ್ಬರಿ 1.2 ಕೋಟಿ ಖರ್ಚು ಮಾಡಿದ್ದಾರೆ.
ಚೆನ್ನೈ ಮೂಲದ ಆಭರಣ ಮಳಿಗೆ ಚಲ್ಲಾನಿ ಜ್ಯುವೆಲ್ಲರಿ ಮಾಲೀಕ ದೀಪಾವಳಿ ಉಡುಗೊರೆಯಾಗಿ 10 ಸಿಬ್ಬಂದಿಗೆ ಕಾರುಗಳು ಮತ್ತು 20 ಸಿಬ್ಬಂದಿಗೆ ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚಲ್ಲಾನಿ ಜ್ಯುವೆಲ್ಲರಿ ಪ್ರಚಾರ ಮತ್ತು ಮಾರುಕಟ್ಟೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಬಾಲಾಜಿ ಮಾತನಾಡಿ, ಜ್ಯುವೆಲ್ಲರಿ ಮಾಲೀಕರು ಸಿಬ್ಬಂದಿಗೆ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು, ಅಲ್ಲದೆ ಕೋವಿಡ್ ಕಾಲಘಟ್ಟದಲ್ಲೂ ತನ್ನ ಸಿಬ್ಬಂದಿಗಳಿಗೆ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಹೊಗಳಿದ್ದಾರೆ.
ಏನೇ ಆಗಲಿ ಜಯಂತಿ ಲಾಲ್ ಅವರ ಮಾದರಿ ಕಾರ್ಯ ಇತರ ಕಂಪೆನಿ ಮಾಲೀಕರಿಗೂ ಮಾದರಿಯಾಗಿರುವುದು ಸುಳ್ಳಲ್ಲ.
ಇದನ್ನೂ ಓದಿ : ನ್ಯಾಯ ಸಿಗುವವರೆಗೂ ಕಾಶ್ಮೀರದಲ್ಲಿ ಹತ್ಯೆಗಳು ನಿಲ್ಲುವುದಿಲ್ಲ: ಫಾರೂಕ್ ಅಬ್ದುಲ್ಲಾ
Chennai, Tamil Nadu | A jewellery shop owner gifted cars and bikes to his staff as Diwali gifts
They have worked with me through all ups and downs. This is to encourage their work. We are giving cars to 10 people and bikes to 20: Jayanthi Lal, owner of the jewellery shop (16.10) pic.twitter.com/xwUI0sgNRn
— ANI (@ANI) October 17, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.