ಅವಮಾನಕ್ಕೆ ಹೆದರಿ ನೇಣು ಬಿಗಿದುಕೊಂಡು ಅಫ್ಘಾನ್ ಮಹಿಳೆ ಆತ್ಮಹತ್ಯೆ
Team Udayavani, Oct 17, 2022, 8:00 PM IST
ಸಾಂದರ್ಭಿಕ ಚಿತ್ರ
ಕಾಬೂಲ್: ಮನೆಯಿಂದ ಓಡಿ ಹೋಗಿದ್ದಕ್ಕೆ ತಾಲಿಬಾನಿ ಆಡಳಿತ ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುತ್ತಾರೆ. ಇದರಿಂದ ಅವಮಾನಕ್ಕೆ ಒಳಗಾಗುವ ಬದಲು ಸಾಯುವುದೇ ಉತ್ತಮ ಎಂದು ಭಾವಿಸಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಫಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ನಡೆದಿದೆ.
ಮದುವೆಯಾದ ಪುರುಷನೊಬ್ಬನ ಜತೆಗೆ ಮಹಿಳೆ ಮನೆ ಬಿಟ್ಟು ಓಡಿ ಹೋಗಿದ್ದರು. ಈ ವಿಚಾರ ಸ್ಥಳೀಯ ಆಡಳಿತಕ್ಕೆ ಗೊತ್ತಾಗಿ ಆತನನ್ನು ಅ.13ರಂದು ಗಲ್ಲಿಗೇರಿಸಿದ್ದರು. ಅಫಘಾನಿಸ್ತಾನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕಾರಾಗೃಹ ಇಲ್ಲದ ಕಾರಣ ಓಡಿ ಹೋಗಿದ್ದ ಮಹಿಳೆಯನ್ನು ಅ.14ರಂದು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸಲು ಆದೇಶಿಸಲಾಗಿತ್ತು. ಆದರೆ ಸಾರ್ವಜನಿಕರಿಂದ ಆಗುವ ಅವಮಾನಕ್ಕೆ ಹೆದರಿ ಅದಕ್ಕೂ ಮೊದಲೇ ತನ್ನ ಸ್ಕಾರ್ಫ್ ನಿಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಅಘಘಾನಿಸ್ತಾನದ ವಿವಿಧ ಪ್ರಾಂತ್ಯದಲ್ಲಿ ಮಹಿಳೆಯರು ಮನೆ ಬಿಟ್ಟು ಓಡಿ ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ರೀತಿ ಓಡಿ ಹೋದರೆ ಅವರಿಗೆ ತಾಲಿಬಾನಿಗಳು ಕಲ್ಲು ಹೊಡೆದು ಸಾಯಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್ ಘೋಷಣೆ
US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
US Election: ಟ್ರಂಪ್‌ಗೆ ಅಭಿನಂದಿಸುವ ಯೋಜನೆಯಿಲ್ಲ… ರಷ್ಯಾ
US Election: ಸೋಲಿನ ಬೆನ್ನಲ್ಲೇ ಭಾಷಣ ರದ್ದುಪಡಿಸಿದ ಕಮಲಾ ಹ್ಯಾರಿಸ್!
MUST WATCH
ಹೊಸ ಸೇರ್ಪಡೆ
Kamal Haasan: ʼಥಗ್ ಲೈಫ್ʼ ರಿಲೀಸ್ ಡೇಟ್ ಅನೌನ್ಸ್; ಬರ್ತ್ ಡೇಗೆ ಟೀಸರ್ ಗಿಫ್ಟ್
Trump: ಗುಜರಾತ್ ಮೂಲದ ಪಟೇಲ್ CIA ನೂತನ ಮುಖ್ಯಸ್ಥ: ಡೊನಾಲ್ಡ್ ಟ್ರಂಪ್ ಒಲವು
Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.