ಬಿ.ಕಾಂ. ಪದವೀಧರನ ಸ್ವೋದ್ಯೋಗ ಆಸಕ್ತಿ ಪೋಷಿಸಿದ ನರೇಗಾ


Team Udayavani, Oct 18, 2022, 2:57 PM IST

16

ಬೆಳ್ತಂಗಡಿ: ಶಿಕ್ಷಣ ಹಂತದ ಅನೇಕ ಪದವಿಗಳು ಜ್ಞಾನದ ಉತ್ಕೃಷ್ಟತೆಯನ್ನು ಪ್ರತಿಬಿಂಬಿಸಿದರೆ ಉದ್ಯೋಗ ಹಾಗೂ ಸ್ವೋದ್ಯೋಗ ಬದುಕಿನ ಸಾಮರ್ಥ್ಯ ನಿರ್ಧರಿಸುವಂತಹದು. ಹಿಂದೆ ಹೈನುಗಾರಿಕೆ ದಿನನಿತ್ಯದ ಭಾಗವಾಗಿತ್ತು. ಇದೀಗ ಮಹಾತ್ಮಾ ಗಾಂಧಿ ನರೇಗಾ ಉದ್ಯೋಗ ಖಾತ್ರಿಯಿಂದಾಗಿ ಆಡು, ಹಂದಿ, ಕೋಳಿ ಸಾಕಣೆಗೆ ನೀಡುತ್ತಿರುವ ಪ್ರೋತ್ಸಾಹದಿಂದ ತಾಲೂಕಿನಲ್ಲಿ ಅನೇಕರು ಆಸಕ್ತಿ ತೋರುವಂತಾಗಿದೆ.

ನಡ ಗ್ರಾಮದ ಪಣೆಕ್ಕಲದ ಬಿ.ಕಾಂ. ಪದವೀಧರ ನಡ ಗ್ರಾಮದ ಕೃಷಿಕ ಡೆನಿಸ್‌ ಮೋನಿಸ್‌ ಅವರ ಪುತ್ರ ವಿಲ್ಸನ್‌ ಮೋನಿಸ್‌ ಸುಮಾರು 15 ವರ್ಷಗಳಿಂದ ಬೆಂಗಳೂರಿನ ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದು ಅಲ್ಲಿ ಕೆಲಸಕ್ಕೆ ಗುಡ್‌ ಬೈ ಹೇಳಿ ತನ್ನೂರತ್ತ ಮುಖ ಮಾಡಿದಾಗ ಸೊÌàದ್ಯೋಗ ಮಾಡಲು ಸಹಾಯವಾದದ್ದು ಮಹಾತ್ಮಾ ಗಾಂಧಿ ನರೇಗಾ ಯೋಜನೆ.

ಎರಡು ಎಕ್ರೆ ಕೃಷಿ ಭೂಮಿ ಹೊಂದಿರುವ ಇವರು ಆರಂಭದಲ್ಲಿ ಕೂಡಿಟ್ಟ 2 ಲಕ್ಷ ರೂ. ಮೊತ್ತದೊಂದಿಗೆ ನರೇಗಾ ಸಹಾಯದಿಂದ ಶೆಡ್‌ ನಿರ್ಮಿಸಿದರು. ಕಡಬ ತಾಲೂಕಿನ ಕೊಯ್ಲ ಪಶು ಸಂಗೋಪನಾ ಮತ್ತು ಜಾನುವಾರು ಸಂವರ್ಧನ ಕೇಂದ್ರದಿಂದ ಒಂದು ಹಂದಿಗೆ 3,500 ರೂ. ನಂತೆ 11 ಯಾರ್ಕ್‌ ಶೇರ್‌ ತಳಿಯ ಹಂದಿ ಮರಿಗಳನ್ನು ಆರಂಭದಲ್ಲಿ ತಂದಿದ್ದರು. ಇದು ಕೆ.ಜಿ.ಗೆ ಸುಮಾರು 120 ರಿಂದ 140 ರೂ.ಗೆ ಮಾರಾಟವಾಗುವುದರಿಂದ‌ ಹೆಚ್ಚಾಗಿ ಬೇಡಿಕೆಯಿದೆ. ಹಾಗಾಗಿ ಇದೊಂದು ಉಪ ಕಸುಬಾಗಿ ವಿಲ್ಸನ್‌ ಅವರಿಗೆ ವರದಾನವಾಗಿದೆ. ತಾಲೂಕಿನಲ್ಲಿ ಈವರೆಗೆ 2019-20 ರಿಂದ ಈವರೆಗೆ 119 ಕೋಳಿ ಶೆಡ್‌, 29 ಹಂದಿ ಶೆಡ್‌, 50 ಆಡು ಶೆಡ್‌, 1241 ದನದ ಶೆಡ್‌ ಗಳಿಗೆ ನರೇಗಾದಿಂದ ಕೂಲಿ ಪಾವತಿಸಲಾಗಿದೆ.

ನರೇಗಾ ಪ್ರೋತ್ಸಾಹ: ನರೇಗಾದಿಂದ ಈಗಾಗಲೆ ಕೂಲಿ ರೂಪದಲ್ಲಿ ಅನೇಕ ಯೋಜನೆಗಳಡಿ ಅನುದಾನ ನೀಡಲಾಗುತ್ತಿದೆ. ನಡ ಗ್ರಾಮದ ವಿಲ್ಸನ್‌ ಮೋನಿಸ್‌ ಅವರಿಗೆ ಶೆಡ್‌ ನಿರ್ಮಾಣಕ್ಕೆ 13,120 ರೂ. ಕೂಲಿ ಪಾವತಿಯಾಗಿದೆ. ಇದೇ ರೀತಿ ತಾಲೂಕಿನಲ್ಲಿ ದನದ ಕೊಟ್ಟಿಗೆ, ಆಡು ಸಾಕಣೆ ಸೇರಿದಂತೆ ಅನೇಕ ರೀತಿಯಲ್ಲಿ ಉಪಕಸುಬು ನಡೆಸಲು ನರೇಗಾ ಆಧಾರವಾಗಿದೆ. –ಕುಸುಮಾಧರ್‌ ಬಿ., ಇ.ಒ., ತಾ.ಪಂ., ಬೆಳ್ತಂಗಡಿ

ಆಡು ಸಾಕಾಣೆಗೆ ಚಿಂತನೆ: ಆರಂಭದಲ್ಲಿ 11 ಹಂದಿ ಮರಿ ಗಳೊಂದಿಗೆ ಹಂದಿ ಸಾಕಾಣೆ ಕೈಗೆತ್ತಿಕೊಂಡೆ. ಅದರಲ್ಲಿ ಒಂದು ಹಂದಿ 8 ಮರಿ ಹಾಗೂ ಮತ್ತೂಂದು 7 ಮರಿ ಸೇರಿ 15 ಹಂದಿ ಮರಿಗಳಾಗಿವೆ. ಆರಂಭದಲ್ಲಿ ತಂದಿದ್ದ 9 ಹಂದಿಗಳನ್ನು ಈಗಾಗಲೆ ಮಾರಾಟ ಮಾಡಲಾಗಿದೆ. ಮುಂದೆ ಆಡು ಸಾಕಾಣೆಗೆ ಚಿಂತಿಸಲಾಗಿದೆ. – ವಿಲ್ಸನ್‌ ಮೋನಿಸ್‌, ನಡ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.