100 ಕೋಟಿ ರೂ. ಗಳಿಕೆ ದಾಟಿದ ಕಾಂತಾರ; ಹಿಂದಿ ಕಲೆಕ್ಷನ್ ಎಷ್ಟು ಗೊತ್ತೇ ?
ದುಃಸ್ವಪ್ನಗಳನ್ನು ಬೀಳುವಂತೆ ಮಾಡಿದ್ದು ಯಾರಿಗೆ? ವರ್ಮಾ ಹೇಳಿದ್ದೇನು?
Team Udayavani, Oct 19, 2022, 2:45 PM IST
ಬೆಂಗಳೂರು: ರಿಷಬ್ ಶೆಟ್ಟಿಯವರು ನಟಿಸಿ ನಿರ್ದೇಶಿಸಿದ ‘ಕಾಂತಾರ’ ಚಿತ್ರ 100 ಕೋಟಿ ರೂ. ಕ್ಲಬ್ ಸೇರಿದ ಮತ್ತೊಂದು ಕನ್ನಡ ಚಿತ್ರವಾಗಿ ದಾಖಲೆ ಬರೆದಿದೆ. ಚಿತ್ರದ ಕುರಿತು ಸಿನಿ ದಿಗ್ಗಜರು ಮಾತ್ರವಲ್ಲದೆ ದೇಶದ ಮೂಲೆ ಮೂಲೆಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರುವುದು ನಿಲ್ಲುತ್ತಿಲ್ಲ.
ಬಿಡುಗಡೆಯಾದ ಚಿತ್ರ ಕರ್ನಾಟಕದೆಲ್ಲೆಡೆ 19 ನೇ ದಿನವೂ ಚಿತ್ರಮಂದಿರಗಳಲ್ಲಿ ತುಂಬಿದ ಪ್ರೇಕ್ಷಕರಿಂದ ಪ್ರದರ್ಶನಗೊಳ್ಳುತ್ತಿದ್ದು ಈಗಾಗಲೇ 111.6 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಲೆಕ್ಕಾಚಾರಗಳು ಸಿಕ್ಕಿವೆ. ವಿಶ್ವದೆಲ್ಲೆಡೆ 156.21 ಕೋಟಿ ರೂ. ನಿಂದ 161 ಕೋಟಿ ರೂ. ಕಲೆಕ್ಷನ್ ಮಾಡಿರುವ ಲೆಕ್ಕಾಚಾರಗಳು ಸಿಕ್ಕಿವೆ.
ಅಕ್ಟೋಬರ್ 14 ರಂದು ಹಿಂದಿಯ ಡಬ್ಬಿಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, 14 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
IMDb ಯಲ್ಲಿ ಅಭಿಮಾನಿಗಳಿಂದ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಟಾಪ್ 250 ಚಲನಚಿತ್ರಗಳಲ್ಲಿ ‘ಕಾಂತಾರ’ ಹೆಚ್ಚು ಇಷ್ಟವಾದ ಸಾಲಿನಲ್ಲಿ ಸದ್ಯ ಮೊದಲ ಸಾಲಿನಲ್ಲಿದೆ.
ಅಮೆರಿಕದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಕೆಜಿಎಫ್ ನಂತರ ಈ ಸಾಧನೆ ಮಾಡಿದ 3ನೇ ಕನ್ನಡ ಚಿತ್ರ ಎನಿಸಿಕೊಂಡಿದೆ. ಅಕ್ಟೋಬರ್ 20 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.
ದುಃಸ್ವಪ್ನ
ಚಿತ್ರ ನೋಡಿದ ಬಳಿಕ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಗ್ ಬಜೆಟ್ ಚಿತ್ರ ನಿರ್ಮಾಪಕರ ವಿರುದ್ಧ ಕಿಡಿಕಾರಿದ್ದು, ಕಾಂತಾರ ಯಶಸ್ಸು ಅವರಿಗೆ ದುಃಸ್ವಪ್ನಗಳನ್ನು ಬೀಳುವಂತೆ ಮಾಡಿದೆ ಎಂದು ಹೇಳಿದ್ದಾರೆ.
”ರಿಷಬ್ ಶೆಟ್ಟಿ ಎಂಬ ದೈವಕ್ಕೆ ಧನ್ಯವಾದಗಳು. ಎಲ್ಲಾ ದೊಡ್ಡ ಬಜೆಟ್ ಚಿತ್ರ ತಯಾರಕರು ಈಗ ಹಠಾತ್ತನೆ ರಾತ್ರಿಯಲ್ಲಿ ಎಚ್ಚರಗೊಳ್ಳುತ್ತಾರೆ ‘ಕಾಂತಾರ’ದಿಂದಾಗಿ ದುಃಸ್ವಪ್ನಗಳು ಬೀಳುತ್ತವೆ. ಶಿವ ಗುಳಿಗ ದೈವದಿಂದಾಗಿ ಹೇಗೆ ಎಚ್ಚರಗೊಳ್ಳುತ್ತಾನೋ ಹಾಗೆ” ಎಂದು ವಿಭಿನ್ನ ರೀತಿಯಲ್ಲಿ ಚಿತ್ರಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
”ಹೇ ರಿಷಬ್ ಶೆಟ್ಟಿ ‘ಕಾಂತಾರ’ ಎಂಬ ಅದ್ಭುತವಾದ ಪಾಠಕ್ಕಾಗಿ ಧನ್ಯವಾದಗಳು. ಎಲ್ಲಾ ಚಲನಚಿತ್ರೋದ್ಯಮದ ಜನರು ನಿಮಗೆ ಬೋಧನಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ” ಎಂದು ವರ್ಮಾ ಇನ್ನೊಂದು ಟ್ವೀಟ್ ಮಾಡಿದ್ದಾರೆ.
Thanks to the DEVIL called @shetty_rishab all big budget film makers will now suddenly keep waking up in the night from the nightmare collections of #Kantara ,Like how Shiva keeps waking up to Guliga Daiva
— Ram Gopal Varma (@RGVzoomin) October 18, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.