ಪಂಪ್‌ವೆಲ್‌ನಲ್ಲಿ ಕಂಗೊಳಿಸಲಿದೆ ‘ಮಹಾವೀರ ಕಲಶ’
ಕಲಶ ಮರುನಿರ್ಮಾಣ ಯೋಜನೆಗೆ ಚಾಲನೆ
Team Udayavani, Oct 19, 2022, 3:30 PM IST
ಪಂಪ್‌ವೆಲ್: ಮಂಗಳೂರಿನ ಪ್ರವೇಶಕ್ಕೆ ಸ್ವಾಗತ ಸ್ವರೂಪದಲ್ಲಿದ್ದ ಪಂಪ್‌ವೆಲ್‌ನ ಕಲಶ ಮರುನಿರ್ಮಾಣ ಯೋಜನೆಗೆ ಇದೀಗ ಚಾಲನೆ ದೊರಕಿದೆ.
ಮಹಾವೀರ ವೃತ್ತದಲ್ಲಿದ್ದ ಪವಿತ್ರ ಕಲಶವನ್ನು ಪಂಪ್ ವೆಲ್ ಮೇಲ್ಸೇತುವೆ ಪಕ್ಕದಲ್ಲಿ ಮರುಸ್ಥಾಪನೆ ಮಾಡಲಾಗುತ್ತದೆ. ಪಡೀಲ್‌ನಿಂದ ಪಂಪ್‌ವೆಲ್ ಸಂಧಿಸುವ ರಸ್ತೆಯ ಬಲಭಾಗದಲ್ಲಿ (ನಿಟ್ಟೆ ಡೇ ಕೇರ್ ಸೆಂಟರ್ ಮುಂಭಾಗ) ಕಲಶ ಮರುಸ್ಥಾಪಿಸಲಾಗುತ್ತದೆ. ಇಲ್ಲಿರುವ ಪ್ರತ್ಯೇಕ ಸ್ಥಳದಲ್ಲಿ ಕಲಶ ಸ್ಥಾಪಿಸಲಾಗುತ್ತದೆ.
ಪಂಪ್‌ವೆಲ್ ಫ್ಲೈಓವರ್ ನಿರ್ಮಾಣ ಸಂದರ್ಭ ಕಲಶವನ್ನು ತೆಗೆದು ಕಂಕನಾಡಿ ಕಡೆಗೆ ತಿರುವಿನ ಭಾಗದಲ್ಲಿ (ಇಂದಿರಾ ಕ್ಯಾಂಟೀನ್ ಸಮೀಪ) ತಾತ್ಕಾಲಿಕವಾಗಿ ಇಡಲಾಗಿದೆ. ಇದೇ ಕಲಶವನ್ನು ಸುಂದರಗೊಳಿಸಿ ಹಾಗೂ ಅಭಿವೃದ್ಧಿಗೊಳಿಸಿ ಹೊಸ ಜಾಗದಲ್ಲಿ ಇಡಲಾಗುತ್ತದೆ. ಕ್ರೇನ್ ಸಹಾಯದಿಂದ ಕಲಶವನ್ನು ಸ್ಥಳಾಂತರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2600ನೇ ಜನ್ಮ ಕಲ್ಯಾಣೋತ್ಸವವನ್ನು ರಾಷ್ಟ್ರದಾದ್ಯಂತ 2001ರಿಂದ 2002ರವರೆಗೆ ಆಚರಿಸಲಾಗಿತ್ತು. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯು “ಮಹಾವೀರ ವೃತ್ತ’ ಎಂದು ನಾಮಕರಣ ನಡೆಸಿತ್ತು. ಬಳಿಕ ಜೈನ್ ಸೊಸೈಟಿ ಹಾಗೂ ಜೈನ ಸಮಾಜ ಸೇರಿಕೊಂಡು 43 ಸೆಂಟ್ಸ್ ಜಾಗದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮಹಾವೀರ ವೃತ್ತ ಹಾಗೂ 20 ಟನ್ ತೂಕದ ಮಂಗಲ ಕಲಶವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವೇಳೆ ಈ ಕಲಶವನ್ನು ತೆರವುಗೊಳಿಸಲಾಗಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿ ಕಂಕನಾಡಿ ರಸ್ತೆ ತಿರುವು ಪ್ರವೇಶದಲ್ಲಿ ಇದನ್ನು ಇಡಲಾಗಿದೆ.
ಪಂಪ್‌ವೆಲ್‌ನಲ್ಲಿ ಶಿವಾಜಿ ಪ್ರತಿಮೆ
ಕಲಶ ಮರುಸ್ಥಾಪನೆ ಆದ ಬಳಿಕ ಇಂದಿರಾ ಕ್ಯಾಂಟೀನ್ ಸಮೀಪದಲ್ಲಿಯೇ ಶಿವಾಜಿಯ ಬೃಹತ್ ಪ್ರತಿಮೆ ಹಾಗೂ ಕೋಟೆಯ ಸ್ವರೂಪವನ್ನು ನಿರ್ಮಿಸಲಾಗುವುದು. ಮಂಗಳೂರಿಗೆ ಆಗಮಿಸುವವರಿಗೆ ಸ್ವಾಗತ ಬಯಸುವ ನೆಲೆಯಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದೆ. ಮುಂದಿನ ದಿನದಲ್ಲಿ ಈ ಕುರಿತ ಕಾರ್ಯಗಳು ಸಾಕಾರವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಮಹಾವೀರ ಮೇಲ್ಸೇತುವೆ: ಪಂಪ್‌ವೆಲ್‌ನಲ್ಲಿ ಕಲಶ ಮರುಸ್ಥಾಪನೆಗೆ ಈಗಾಗಲೇ ಚಾಲನೆ ದೊರೆತಿದೆ. ಫ್ಲೈಓವರ್‌ಗೆ ಮಹಾವೀರ ಮೇಲ್ಸೇತುವೆ ಎಂಬ ನಾಮಕರಣ ಮಾಡಿರುವುದು ಸಂತಸ ತಂದಿದೆ. ಶೀಘ್ರದಲ್ಲಿ ಕಲಶ ಸ್ಥಳಾಂತರ ಮಾಡಿ ಅಭಿವೃದ್ಧಿಪಡಿಸುವ ಕಾಮಗಾರಿ ಆರಂಭಿಸಲಾಗುವುದು. ಮಂಗಳೂರಿಗೆ ಆಗಮಿಸುವವರಿಗೆ ಮುಕುಟಪ್ರಾಯದಂತೆ ಕಲಶ ಸ್ಥಾಪನೆಯಾಗಲಿದೆ. – ಪುಷ್ಪರಾಜ್ ಜೈನ್, ವಲಯಾಧ್ಯಕ್ಷರು, ಭಾರತೀಯ ಜೈನ್ ಮಿಲನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.