ಕರ್ಟಿಸ್ ಕಾಂಫರ್ ಪರಾಕ್ರಮ; ಐರ್ಲೆಂಡ್‌ಗೆ 6 ವಿಕೆಟ್‌ಗಳ ಅಮೋಘ ಜಯ
Team Udayavani, Oct 19, 2022, 4:22 PM IST
ಹೋಬರ್ಟ್: ಐರ್ಲೆಂಡ್-ಸ್ಕಾಟ್ಲೆಂಡ್ ನಡುವಿನ “ಬಿ’ ವಿಭಾಗದ ಮೊದಲ ಅರ್ಹತಾ ಪಂದ್ಯ ಭಾರೀ ಜೋಶ್‌ನಿಂದ ಕೂಡಿತ್ತು. ಇನ್ನೇನು ಗೆದ್ದೇ ಬಿಟ್ಟೆವು ಎಂಬ ಖುಷಿಯಲ್ಲಿದ್ದ ಸ್ಕಾಟ್ಲೆಂಡ್‌ಗೆ ಐರ್ಲೆಂಡ್‌ನ ಮಧ್ಯಮ ಕ್ರಮಾಂಕದ ಬ್ಯಾಟರ್ ಕರ್ಟಿಸ್ ಕಾಂಫರ್ ಮರ್ಮಾಘಾತವಿಕ್ಕಿದರು. ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಐರ್ಲೆಂಡ್‌ಗೆ 6 ವಿಕೆಟ್‌ಗಳ ಅಮೋಘ ಜಯವನ್ನು ತಂದಿತ್ತರು.
ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ 5 ವಿಕೆಟಿಗೆ 176 ರನ್ ಬಾರಿಸಿತು. ಐರ್ಲೆಂಡ್ 9.3 ಓವರ್‌ಗಳಲ್ಲಿ 61ಕ್ಕೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆಗ ಕರ್ಟಿಸ್ ಕಾಂಫರ್-ಜಾರ್ಜ್ ಡಾಕ್ರೆಲ್ ಮತ್ತೆ 9.3 ಓವರ್‌ಗಳಲ್ಲಿ ಮುರಿಯದ 5ನೇ ವಿಕೆಟಿಗೆ 119 ರನ್ ಪೇರಿಸಿ ತಂಡಕ್ಕೆ ಅಸಾಮಾನ್ಯ ಗೆಲುವನ್ನು ತಂದಿತ್ತರು.
ಕಾಂಫರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 32 ಎಸೆತಗಳಿಂದ 72 ರನ್ ಬಾರಿಸಿದರು (7 ಬೌಂಡರಿ, 2 ಸಿಕ್ಸರ್). ಡಾಕ್ರೆಲ್ 27 ಎಸೆತಗಳಿಂದ 39 ರನ್ ಬಾರಿಸಿದರು (4 ಬೌಂಡರಿ, 1 ಸಿಕ್ಸರ್).
ಸ್ಕಾಟ್ಲೆಂಡ್ ಪರ ಆರಂಭಕಾರ ಮೈಕಲ್ ಜೋನ್ಸ್ ಪಂದ್ಯದಲ್ಲೇ ಸರ್ವಾಧಿಕ 86 ರನ್ (55 ಎಸೆತ, 6 ಫೋರ್, 4 ಸಿಕ್ಸರ್) ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20; ಸ್ಯಾಮ್ಸನ್ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ
Pro Kabaddi: ಜೈಪುರ್ ಮೇಲೆ ಪಾಟ್ನಾ ಸವಾರಿ
ODI; ಹ್ಯಾರಿಸ್ ರೌಫ್ ಗೆ ಹೆದರಿದ ಆಸೀಸ್ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.