ಟಿ20 ವಿಶ್ವಕಪ್‌ಗೆ ಎದುರಾಯಿತು ಮಳೆ ಕಾಟ; ಅಭ್ಯಾಸ ಪಂದ್ಯಗಳೆಲ್ಲ ರದ್ದು

ಭಾರತ-ಪಾಕಿಸ್ಥಾನ ಪಂದ್ಯಕ್ಕೂ ಮಳೆ ಭೀತಿ

Team Udayavani, Oct 20, 2022, 7:50 AM IST

ಟಿ20 ವಿಶ್ವಕಪ್‌ಗೆ ಎದುರಾಯಿತು ಮಳೆ ಕಾಟ; ಅಭ್ಯಾಸ ಪಂದ್ಯಗಳೆಲ್ಲ ರದ್ದು

ಬ್ರಿಸ್ಬೇನ್‌: ಬ್ರಿಸ್ಬೇನ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬುಧವಾರದ ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ ಗಳೆಲ್ಲವೂ ಕೊಚ್ಚಿ ಹೋದವು. ಇದರಲ್ಲಿ ಭಾರತ-ನ್ಯೂಜಿಲ್ಯಾಂಡ್‌ ಮುಖಾಮುಖಿಯೂ ಸೇರಿತ್ತು.

ಬೆಳಗ್ಗಿನ ಅಫ್ಘಾನಿಸ್ಥಾನ-ಪಾಕಿಸ್ಥಾನ ಪಂದ್ಯ 22.2 ಓವರ್‌ಗಳ ಆಟವನ್ನು ಕಂಡಿ ತಾದರೂ ಫ‌ಲಿತಾಂಶದಿಂದ ದೂರವೇ ಉಳಿಯಿತು. ಅಪರಾಹ್ನದ ಭಾರತ- ನ್ಯೂಜಿಲ್ಯಾಂಡ್‌ ಹಾಗೂ ದಕ್ಷಿಣ ಆಫ್ರಿಕಾ- ಬಾಂಗ್ಲಾದೇಶ ಪಂದ್ಯಗಳು ಟಾಸ್‌ ಕೂಡ ಕಾಣಲಿಲ್ಲ. ಇದರಿಂದ ಶನಿವಾರದಿಂದ ಮೊದಲ್ಗೊಳ್ಳಲಿರುವ ಸೂಪರ್‌- 12 ಸ್ಪರ್ಧೆಗಳಿಗೆ ಅಭ್ಯಾಸದ ಕೊರತೆ ಎದುರಾದಂತಾಗಿದೆ.

ಭಾರತ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಹಾಗೂ ಹಾಲಿ ಚಾಂಪಿಯನ್‌ ಖ್ಯಾತಿಯ ಆಸ್ಟ್ರೇಲಿಯವನ್ನು 6 ರನ್ನುಗಳಿಂದ ಕೆಡವಿತ್ತು. ನ್ಯೂಜಿಲ್ಯಾಂಡ್‌ ವಿರುದ್ಧ ಉಳಿದವರಿಗೆ ಆಡಲು ಅವಕಾಶ ನೀಡುವುದು ಟೀಮ್‌ ಇಂಡಿಯಾದ ಉದ್ದೇಶವಾಗಿತ್ತು. ಆದರೆ ಮಳೆಯಿಂದ ಈ ಯೋಜನೆ ತಲೆ ಕೆಳಗಾಯಿತು.
ಇನ್ನೊಂದೆಡೆ ನ್ಯೂಜಿಲ್ಯಾಂಡ್‌ಗೆ ಗೆಲು ವಿನ ಅನಿವಾರ್ಯತೆ ಇತ್ತು. ಮೊದಲ ಅಭ್ಯಾಸ ಪಂದ್ಯದಲ್ಲಿ ಅದು ದಕ್ಷಿಣ ಆಫ್ರಿಕಾ ವಿರುದ್ಧ 98 ರನ್ನಿಗೆ ಕುಸಿದು 9 ವಿಕೆಟ್‌ಗಳ ಸೋಲಿಗೆ ತುತ್ತಾಗಿತ್ತು.

ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 6 ವಿಕೆಟಿಗೆ 154 ರನ್‌ ಗಳಿಸಿತ್ತು. ಪಾಕ್‌ 2.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 19 ರನ್‌ ಮಾಡಿದ್ದಾಗ ಮಳೆ ಸುರಿಯಿತು. ಪಂದ್ಯ ಇಲ್ಲಿಗೇ ನಿಂತಿತು. ಅಫ್ಘಾನಿಸ್ಥಾನದ 3 ವಿಕೆಟ್‌ 19 ರನ್ನಿಗೆ ಉದುರಿತ್ತು. ಮೊಹಮ್ಮದ್‌ ನಬಿ ಕಪ್ತಾನನ ಆಟವಾಡಿ 51 ರನ್‌ (37 ಎಸೆತ, 5 ಬೌಂಡರಿ, 1 ಸಿಕ್ಸರ್‌), ಇಬ್ರಾಹಿಂ ಜದ್ರಾನ್‌ 35 ರನ್‌ ಹೊಡೆದರು.

ಪಾಕಿಸ್ಥಾನ ಪರ ಶಹೀನ್‌ ಷಾ ಅಫ್ರಿದಿ ಮತ್ತು ಹ್ಯಾರಿಸ್‌ ರವೂಫ್ 2 ವಿಕೆಟ್‌, ಮೊಹಮ್ಮದ್‌ ನವಾಜ್‌ ಮತ್ತು ಶದಾಬ್‌ ಖಾನ್‌ ಒಂದೊಂದು ವಿಕೆಟ್‌ ಉರುಳಿಸಿದರು. ಅಫ್ಘಾನ್‌ ಬೌಲಿಂಗ್‌ ತೀರಾ ಕಳಪೆಯಾಗಿತ್ತು. ಪಾಕಿಸ್ಥಾನಕ್ಕೆ ನೀಡಿದ 19 ರನ್ನಿನಲ್ಲಿ 13 ವೈಡ್‌ ಎಸೆತಗಳಿದ್ದವು!

ಮೆಲ್ಬರ್ನ್ ನಲ್ಲಿ ಮಳೆ ಸಾಧ್ಯತೆ
ಶನಿವಾರದಿಂದ ಟಿ20 ವಿಶ್ವಕಪ್‌ ಪಂದ್ಯಾವಳಿಯ “ಸೂಪರ್‌-12′ ಸ್ಪರ್ಧೆ ಗಳು ಆರಂಭಗೊಳ್ಳಲಿವೆ. ಇದಕ್ಕೂ ಈಗ ಮಳೆ ಭೀತಿ ಎದುರಾಗಿದೆ.

ರವಿವಾರ ಭಾರತ-ಪಾಕಿಸ್ಥಾನ ನಡುವೆ “ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಈ ಟೂರ್ನಿಯ ಹೈ ವೋಲ್ಟೆàಜ್‌ ಪಂದ್ಯ ನಡೆಯಲಿದೆ. ಹವಾಮಾನ ಮುನ್ಸೂಚ ನೆಯಂತೆ ಈ ಪಂದ್ಯಕ್ಕೂ ಮಳೆಯ ಕಾಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಮೆಲ್ಬರ್ನ್ ನಲ್ಲಿ ಶುಕ್ರವಾರದಿಂದ ಮಳೆಯ ಅಬ್ಬರ ಆರಂಭವಾಗಲಿದೆ. ರವಿವಾರದ ಮಳೆ ಸಾಧ್ಯತೆ ಶೇ. 80ರಷ್ಟಿದೆ ಎಂಬುದು ಹವಾಮಾನ ಇಲಾಖೆಯ ವರದಿ. ಅಂದು ರಾತ್ರಿ 7 ಗಂಟೆಗೆ ಭಾರತ-ಪಾಕಿಸ್ಥಾನ ಪಂದ್ಯ ಮೊದಲ್ಗೊಳ್ಳಲಿದೆ.

ಸೂಪರ್‌-12 ಹಂತದ ಆರಂಭಿಕ ಪಂದ್ಯ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವೆ ಶನಿವಾರ ಸಿಡ್ನಿಯಲ್ಲಿ ನಡೆಯ ಲಿದ್ದು, ಈ ಪಂದ್ಯಕ್ಕೂ ಮಳೆಯಿಂದ ಅಡಚಣೆಯಾಗುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.