ಸೂಪರ್‌-12 ಹಂತಕ್ಕೆ ಶ್ರೀಲಂಕಾ, ನೆದರ್ಲೆಂಡ್ಸ್‌

Team Udayavani, Oct 20, 2022, 6:38 AM IST

ಸೂಪರ್‌-12 ಹಂತಕ್ಕೆ ಶ್ರೀಲಂಕಾ, ನೆದರ್ಲೆಂಡ್ಸ್‌

ಗೀಲಾಂಗ್‌: ಟಿ20 ವಿಶ್ವಕಪ್‌ “ಎ’ ವಿಭಾಗದ ಅರ್ಹತಾ ಸುತ್ತಿನ ಮುಖಾಮುಖೀಯಲ್ಲಿ ಗುರುವಾರ ಅಚ್ಚರಿಯೊಂದು ಸಂಭವಿಸಿತು. ಶ್ರೀಲಂಕಾದ ಜತೆಗೆ ಇವರೆದುರು ಪರಾಭವಗೊಂಡ ನೆದರ್ಲೆಂಡ್ಸ್‌ ಕೂಡ ಸೂಪರ್‌-12 ಹಂತವನ್ನು ಪ್ರವೇಶಿಸಿತು. ನಮೀಬಿಯಾ ಮತ್ತು ಯುಎಇ ಹೊರಬಿದ್ದವು.

ಸೂಪರ್‌-12 ಹಂತದಲ್ಲಿ ಶ್ರೀಲಂಕಾ ಗ್ರೂಪ್‌ ಒಂದರಲ್ಲಿ ಹಾಗೂ ನೆದರ್ಲೆಂಡ್ಸ್‌ ಗ್ರೂಪ್‌ ಎರಡರಲ್ಲಿ ಆಡಲಿವೆ.

“ಮಸ್ಟ್‌ ವಿನ್‌’ ಮುಖಾಮುಖೀಯಲ್ಲಿ ಶ್ರೀಲಂಕಾ 16 ರನ್ನುಗಳಿಂದ ನೆದರ್ಲೆಂಡ್ಸ್‌ಗೆ ಸೋಲುಣಿಸಿತು. ಇದರಿಂದ ಲಂಕಾ ಅಂಕ 4ಕ್ಕೆ ಏರಿದ್ದರಿಂದ ಮತ್ತು ರನ್‌ರೇಟ್‌ ಪ್ಲಸ್‌ನಲ್ಲಿ ಇದ್ದುದರಿಂದ (+0.667) ಅದು ಮುಂದಿನ ಸುತ್ತಿಗೆ ನೆಗೆಯಿತು.

ಸೋತರೂ ನೆದರ್ಲೆಂಡ್ಸ್‌ ದ್ವಿತೀಯ ಸ್ಥಾನಿಯಾಯಿತು (4 ಅಂಕ, -0.162 ರನ್‌ರೇಟ್‌). ಆದರೆ ಸೂಪರ್‌-12 ಅಧಿಕೃತಗೊಂಡಿರಲಿಲ್ಲ. ಅದು ನಮೀಬಿಯಾ-ಯುಎಇ ನಡುವಿನ ಫ‌ಲಿತಾಂಶವನ್ನು ಕಾಯಬೇಕಿತ್ತು.

ಇಲ್ಲಿ ಯುಎಇ 7 ರನ್ನುಗಳ ರೋಚಕ ಜಯ ಸಾಧಿಸಿತು. ಇದು ಯುಎಇಗೆ ಒಲಿದ ಮೊದಲ ಜಯ. ಆದರೆ ಇಲ್ಲಿ ನಮೀಬಿಯಾ ಜಯಿಸಿದ್ದೇ ಆದರೆ ಉತ್ತಮ ರನ್‌ರೇಟ್‌ ಲೆಕ್ಕಾಚಾರದಲ್ಲಿ ಅಗ್ರಸ್ಥಾನಿಯಾಗಿ ಸೂಪರ್‌-12 ಸುತ್ತಿಗೆ ನೆಗೆಯುತ್ತಿತ್ತು. ಆಗ ನೆದರ್ಲೆಂಡ್ಸ್‌ ಹೊರಬೀಳುತ್ತಿತ್ತು. ನಮೀಬಿಯಾದ ಆಸೆಗೆ ಯುಎಇ ತಣ್ಣೀರೆರಚಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 55 ರನ್ನುಗಳಿಂದ ಕೆಡವಿದ್ದಷ್ಟೇ ನಮೀಬಿಯಾದ ಸಾಧನೆ ಎನಿಸಿತು.

ಆಪತ್ಭಾಂಧವ ಮೆಂಡಿಸ್‌:

ಶ್ರೀಲಂಕಾ ಮೊದಲು ಬ್ಯಾಟಿಂಗ್‌ ನಡೆಸಿ 6 ವಿಕೆಟಿಗೆ 162 ರನ್‌ ಪೇರಿಸಿತು. ಜವಾಬಿತ್ತ ಡಚ್ಚರ ಪಡೆ 9 ವಿಕೆಟ್‌ ಕಳೆದುಕೊಂಡು 146 ರನ್‌ ಮಾಡಿ ಶರಣಾಯಿತು.

ಅಂತಿಮ ಓವರ್‌ ತನಕ ಕ್ರೀಸ್‌ ಆಕ್ರಮಿಸಕೊಂಡ ಆರಂಭಕಾರ ಕುಸಲ್‌ ಮೆಂಡಿಸ್‌ 44 ಎಸೆತಗಳಿಂದ 79 ರನ್‌ ಹೊಡೆದು ಲಂಕಾ ಪಾಲಿನ ಆಪತಾºಂಧವರಾದರು (5 ಬೌಂಡರಿ, 5 ಸಿಕ್ಸರ್‌).

ಚೇಸಿಂಗ್‌ ವೇಳೆ ನೆದರ್ಲೆಂಡ್ಸ್‌ ಓಪನರ್‌ ಮ್ಯಾಕ್ಸ್‌ ಒಡೌಡ್‌ ಅಜೇಯ 71 ರನ್‌ (53 ಎಸೆತ, 6 ಬೌಂಡರಿ, 3 ಸಿಕ್ಸರ್‌) ಮಾಡಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫ‌ಲರಾದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-6 ವಿಕೆಟಿಗೆ 162 (ಮೆಂಡಿಸ್‌ 79, ಅಸಲಂಕ 31, ಮೀಕೆರೆನ್‌ 25ಕ್ಕೆ 2, ಲೀಡ್‌ 31ಕ್ಕೆ 2). ನೆದರ್ಲೆಂಡ್ಸ್‌-9 ವಿಕೆಟಿಗೆ 146 (ಒಡೌಡ್‌ ಔಟಾಗದೆ 71, ಎಡ್ವರ್ಡ್ಸ್‌ 21, ಹಸರಂಗ 28ಕ್ಕೆ 3, ತೀಕ್ಷಣ 32ಕ್ಕೆ 2).

ಪಂದ್ಯಶ್ರೇಷ್ಠ: ಕುಸಲ್‌ ಮೆಂಡಿಸ್‌.

ನಮೀಬಿಯಾವನ್ನು ಹೊರದಬ್ಬಿದ ಯುಎಇ :

ಮೊದಲ ಎರಡೂ ಪಂದ್ಯಗಳನ್ನು ಸೋತ ಬಳಿಕ ಎದ್ದು ನಿಂತ ಯುಎಇ 7 ರನ್ನುಗಳಿಂದ ನಮೀಬಿಯಾವನ್ನು ಮಣಿಸಿತು. ಇದರಿಂದ ಯುಎಇಗೆ ಯಾವುದೇ ಲಾಭವಾಗಲಿಲ್ಲ, ಆದರೆ ಅದು ಸೂಪರ್‌-12 ಕನಸಿನಲ್ಲಿ ವಿಹರಿಸುತ್ತಿದ್ದ ನಮೀಬಿಯಾವನ್ನು ಕೂಟದಿಂದ ಹೊರದಬ್ಬಿತು.

ಯುಎಇ 3 ವಿಕೆಟ್‌ ನಷ್ಟಕ್ಕೆ 148 ರನ್‌ ಹೊಡೆದರೆ, ನಮೀಬಿಯಾ 8 ವಿಕೆಟಿಗೆ 141ರ ತನಕ ಬಂದು ಶರಣಾಯಿತು. ಕೊನೆಯಲ್ಲಿ ಡೇವಿಡ್‌ ವೀಸ್‌ (55) ಮತ್ತು ರುಬೆನ್‌ ಟ್ರಂಪಲ್‌ಮಾÂನ್‌ (ಅಜೇಯ 25) ಸಿಡಿದು ನಿಂತರೂ ಗೆಲುವು ಸ್ವಲ್ಪದರಲ್ಲೇ ಕೈಕೊಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಯುಎಇ-3 ವಿಕೆಟಿಗೆ 148 (ಮುಹಮ್ಮದ್‌ ವಾಸಿಮ್‌ 50, ರಿಜ್ವಾನ್‌ ಔಟಾಗದೆ 43, ಬಾಸಿಲ್‌ ಹಮೀದ್‌ ಔಟಾಗದೆ 25, ಬೆನ್‌ ಶಿಕೊಂಗೊ 8ಕ್ಕೆ 1). ನಮೀಬಿಯಾ-8 ವಿಕೆಟಿಗೆ 141 (ವೀಸ್‌ 55, ಟ್ರಂಪಲ್‌ಮಾÂಬ್‌ ಔಟಾಗದೆ 25, ಬಾಸಿಮ್‌ ಹಮೀದ್‌ 17ಕ್ಕೆ 2, ಝಹೂರ್‌ ಖಾನ್‌ 20ಕ್ಕೆ 2). ಪಂದ್ಯಶ್ರೇಷ್ಠ: ಮುಹಮ್ಮದ್‌ ವಾಸೀಮ್‌.

ಟಾಪ್ ನ್ಯೂಸ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.